ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Seetha Rama Serial: ಸೀತಾ ರಾಮ ಮುಕ್ತಾಯದ ಬೆನ್ನಲ್ಲೇ ಮತ್ತೊಂದು ಧಾರಾವಾಹಿ ಒಪ್ಪಿಕೊಂಡ್ರಾ ವೈಷ್ಣವಿ ಗೌಡ?

ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವಿ ಅವರು ಇನ್ಮುಂದೆ ಕಿರುತೆರೆಯಲ್ಲಿ ಕಾಣಿಸುವುದಿಲ್ಲ, ಮದುವೆ ಕೂಡ ಆಗುತ್ತಿದ್ದು ವಿದೇಶಕ್ಕೆ ಹೋಗಿ ಸೆಟಲ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ವೈಷ್ಣವಿ ಗೌಡ ಅಭಿಮಾನಿಗಳಿಗೆ ಹೊಸ ಧಾರಾವಾಹಿಯಲ್ಲಿ ನಟಿಸುವ ಕುರಿತು ಹಿಂಟ್ ಕೊಟ್ಟಿದ್ದಾರೆ.

ಮತ್ತೊಂದು ಧಾರಾವಾಹಿ ಒಪ್ಪಿಕೊಂಡ್ರಾ ವೈಷ್ಣವಿ ಗೌಡ?

Vaishnavi Gowda

Profile Vinay Bhat May 22, 2025 3:04 PM

ಝೀ ಕನ್ನಡದಲ್ಲಿ 2023ರ ಜುಲೈ 17ರಂದು ದೊಡ್ಡ ಹೈಪ್​ನೊಂದಿಗೆ ಪ್ರಾರಂಭವಾದ ಸೀತಾ ರಾಮ (Seetha Rama) ಧಾರಾವಾಹಿ ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಕೊನೆಯ ಎಪಿಸೋಡ್ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಈ ವರೆಗೆ 465 ಎಪಿಸೋಡ್​ಗಳನ್ನು ಪ್ರಸಾರ ಕಂಡಿದೆ. ನಟ ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ ಎಸ್‌, ಮುಖ್ಯಮಂತ್ರಿ ಚಂದ್ರು, ಪೂಜಾ ಲೋಕೇಶ್‌, ರೀತು ಸಿಂಗ್‌ ಸೇರಿದಂತೆ ದೊಡ್ಡ ತಾರಾಬಳಗವೇ ಈ ಧಾರಾವಾಹಿಯಲ್ಲಿದೆ. ಸೀತಾ ರಾಮ ದಿಢೀರ್ ಮುಕ್ತಾಯದ ಸುದ್ದಿ ಕೇಳಿ ವೈಷ್ಣವಿ ಗೌಡ ಅವರ ಅನೇಕ ಅಭಿಮಾನಿಗಳಿಗೆ ಶಾಕ್ ಆಗಿದೆ.

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವಿ ಅವರು ಇನ್ಮುಂದೆ ಕಿರುತೆರೆಯಲ್ಲಿ ಕಾಣಿಸುವುದಿಲ್ಲ, ಮದುವೆ ಕೂಡ ಆಗುತ್ತಿದ್ದು ವಿದೇಶಕ್ಕೆ ಹೋಗಿ ಸೆಟಲ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ವೈಷ್ಣವಿ ಗೌಡ ಅಭಿಮಾನಿಗಳಿಗೆ ಹೊಸ ಧಾರಾವಾಹಿಯಲ್ಲಿ ನಟಿಸುವ ಕುರಿತು ಹಿಂಟ್ ಕೊಟ್ಟಿದ್ದಾರೆ.

ಸೀತಾ ರಾಮ ಧಾರಾವಾಹಿಯ ಕೊನೆಯ ದಿನದ ಫೋಟೋ ಅಂದರೆ ಎಲ್ಲ ಕಲಾವಿದರ ಜೊತೆಗಿನ ಫೋಟೋ ಈಗಾಗಲೇ ಎಲ್ಲೆಡೆ ವೈರಲ್ ಆಗುತ್ತಿದೆ. ಇದರ ಮಧ್ಯೆ ವೈಷ್ಣವಿ ಅವರು ಧಾರಾವಾಹಿಯ ತಮ್ಮ ಆತ್ಮೀಯ ಕಲಾವಿದರ ಜೊತೆ ಒಂದೊಂದೆ ಫೋಟೋ ತೆಗೆಸಿಕೊಂಡು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ಸುಂದರ ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ಈ ಅಂತ್ಯವು ಉತ್ತಮವಾದದ್ದರ ಆರಂಭ ಮಾತ್ರ. ಇದು ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಧಾರಾವಾಹಿಗಳಲ್ಲಿ ಒಂದು. ಇದನ್ನು ಮಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಸೀತಾ ಆಗಿ ನನ್ನ ಪಾತ್ರ ಮುಗಿಸುತ್ತಿದ್ದೇನೆ. ಶೀಘ್ರದಲ್ಲೇ ಒಂದೊಳ್ಳೆಯ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ವೈಷ್ಣವಿ ಅವರು ಹೇಳಿರುವುದು ಕುತೂಹಲ ಮೂಡಿಸಿದೆ. ಸೀತಾ ರಾಮ ಸೀರಿಯಲ್​ ಮುಗಿಯುತ್ತಿದ್ದಂತೆ ವೈಷ್ಣವಿ ಮತ್ತೆ ತೆರೆ ಮೇಲೆ ಬರೋದಕ್ಕೆ ಸಜ್ಜಾಗಿರಬಹುದು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಚಿತ್ಕಲಾ ಅವರು, ‘ಹೌದು, ಹೌದು ನನಗೆ ಗೊತ್ತು’ ಎಂದಿದ್ದಾರೆ. ವೈಷ್ಣವಿ ಅವರ ಹೊಸ ಯೋಜನೆ ಬಗ್ಗೆ ಚಿತ್ಕಲಾಗೆ ಗೊತ್ತಾ? ವೈಷ್ಣವಿ ಶೀಘ್ರವೇ ಹೊಸ ಧಾರಾವಾಹಿ ಘೋಷಣೆ ಮಾಡುತ್ತಾರಾ? ಇದು ಅಭಿಮಾನಿಗಳಿಗೆ ಮೂಡಿದ ಸದ್ಯದ ಪ್ರಶ್ನೆ.

ಮತ್ತೊಂದೆಡೆ ವೈಷ್ಣವಿ ಅವರು ನಾನು ಕರ್ನಾಟಕ, ಕನ್ನಡ ಭಾಷೆ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ ಎಂದು ಇತ್ತೀಚೆಗಷ್ಟೆ ಹೇಳಿದ್ದರು. ‘‘ಕರ್ನಾಟಕದ ಜನ ನನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದಾರೆ, ಅದೆಲ್ಲ ಮರೆಯಲು ಸಾಧ್ಯ ಇಲ್ಲ. ನನ್ನ ದೇಶ, ನನ್ನ ಜಾಗದಲ್ಲಿ ನನಗೆ ಇಷ್ಟೆಲ್ಲ ಸಿಗುತ್ತಿರುವಾಗ ನಾನ್ಯಾಕೇ ದೇಶ ಬಿಡಬೇಕು. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಕನ್ನಡ ಇಂಡಸ್ಟ್ರೀಯಲ್ಲಿಯೇ ಕೆಲಸ ಮಾಡುತ್ತೇನೆ, ಕಲಾ ಸೇವೆಯನ್ನು ಮಾಡುತ್ತೇನೆ, ನಿಮ್ಮೆಲ್ಲರನ್ನು ಮನರಂಜಿಸುವ ಕೆಲಸವನ್ನು ಮಾಡುತ್ತೇನೆ’’ ಎಂದು ಹೇಳಿದ್ದರು. ಇದನ್ನೆಲ್ಲ ನೋಡಿದ್ರೆ ವೈಷ್ಣವಿ ಅವರು ಸದ್ಯದಲ್ಲೇ ಹೊಸ ಧಾರಾವಾಹಿ ಮೂಲಕ ಕಮ್​ಬ್ಯಾಕ್ ಮಾಡುವುದು ಖಚಿತ ಎನ್ನಲಾಗುತ್ತಿದೆ.

Seetha Rama Serial: ಮುಕ್ತಾಯಗೊಂಡ ಸೀತಾ ರಾಮ ಧಾರಾವಾಹಿ: ಈ ದಿನಾಂಕದಂದು ಕೊನೆ