Sonu Nigam: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಎದುರಾದಾಗ ಸಿಟ್ಟಿಗೆದ್ದ ಸೋನು ನಿಗಮ್
Sonu Nigam: ಯುವಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಾರ್ವಜನಿಕ ವ್ಯಕ್ತಿಗಳು ಏಕೆ ಮೌನವಾಗಿರುತ್ತಾರೆ ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸೆಲೆಬ್ರಿಟಿಗಳು ಸೂಕ್ಷ್ಮ ವಿಷಯಗಳ ಬಗ್ಗೆ ಮಾತೇ ಆಡುವುದಿಲ್ಲ ಆರೋಪಿಸಿದರು. ಸದ್ಯ ಸೋನು ಅವರ ನಡವಳಿಕೆ ಕಂಡು ಅತ್ಯಂತ ನಾಚಿಗೇಡು ಎಂದು ಕಮೆಂಟ್ ಮಾಡಿದ್ದಾರೆ.
ಸೋನು ನಿಗಮ್ -
ನೀಟ್ ಪರೀಕ್ಷೆಯಲ್ಲಿನ (Neet Exam) ಅಕ್ರಮಗಳ ಕುರಿತು ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಕೇಳಿದಾಗ ಗಾಯಕ ಸೋನು ನಿಗಮ್ ಸಿಟ್ಟಿಗೆದ್ದಂತೆ ಕಂಡುಬಂದರು. ಇತ್ತೀಚಿನ ಮಾಧ್ಯಮ ಸಂವಾದದ ಸಮಯದಲ್ಲಿ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಈ ಮಾತುಕತೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ಸಿಟ್ಟಿಗೆದ್ದ ಸೋನು ನಿಗಮ್!
ಈ ಕ್ಲಿಪ್‌ನಲ್ಲಿ, ಪತ್ರಕರ್ತರೊಬ್ಬರು ಸೋನು ಅವರನ್ನು ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳುತ್ತಾರೆ, ಇಲ್ಲಿಗೆ ಏಕೆ ಬಂದಿದ್ದೇನೆ? ಅಷ್ಟೇ... ಸಾಕು... ಸಾಕು . ಹೆಚ್ಚಿನ ಪ್ರಶ್ನೆಗಳು ಬಂದಂತೆ, ಅವರು ಇದೀಗ ಮುಗಿದಿದೆ, ಅಷ್ಟೇ ಎಂದು ಹೇಳಿ ಅಲ್ಲಿಗೆ ಮುಗಿಸುತ್ತಾರೆ. ಸಂವಾದದ ನಿಖರವಾದ ಸಮಯ ಮತ್ತು ಸ್ಥಳ ಸ್ಪಷ್ಟವಾಗಿಲ್ಲದಿದ್ದರೂ, ವೀಡಿಯೊ ಆನ್‌ಲೈನ್‌ನಲ್ಲಿ ಟೀಕೆ ಮತ್ತು ಬೆಂಬಲ ಎರಡನ್ನೂ ಗಳಿಸಿದೆ.
ಇದನ್ನೂ ಓದಿ: Amruthdhaare Serial: ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?
ಯುವಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಾರ್ವಜನಿಕ ವ್ಯಕ್ತಿಗಳು ಏಕೆ ಮೌನವಾಗಿರುತ್ತಾರೆ ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸೆಲೆಬ್ರಿಟಿಗಳು ಸೂಕ್ಷ್ಮ ವಿಷಯಗಳ ಬಗ್ಗೆ ಮಾತೇ ಆಡುವುದಿಲ್ಲ ಆರೋಪಿಸಿದರು. ಸದ್ಯ ಸೋನು ಅವರ ನಡವಳಿಕೆ ಕಂಡು ಅತ್ಯಂತ ನಾಚಿಗೇಡು ಎಂದು ಕಮೆಂಟ್ ಮಾಡಿದ್ದಾರೆ,
ಅದೇ ಸಮಯದಲ್ಲಿ, ಅನೇಕರು ಸೋನು ಅವರನ್ನು ಸಮರ್ಥಿಸಿಕೊಂಡರು, ಯಾವುದೇ ಸಾರ್ವಜನಿಕ ವ್ಯಕ್ತಿಯನ್ನು ಪ್ರತಿಯೊಂದು ರಾಜಕೀಯ ಅಥವಾ ಸಾಮಾಜಿಕ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಒತ್ತಾಯಿಸಬಾರದು ಎಂದು ಹೇಳಿದರು. ಪ್ರತಿಕ್ರಿಯಿಸದಿರುವುದು ಕೂಡ ವೈಯಕ್ತಿಕ ನಿರ್ಧಾರ ಎಂದು ಹಲವಾರು ಬಳಕೆದಾರರು ಹೇಳಿದ್ದಾರೆ.
BREAKING : This is shameful 🚨
— Amock_ (@Amockx2022) July 23, 2026
Journalist –– What will you say about students protest?
Sonu Nigam –– "I am not here to answer such questions" 🤢
Woman –– I have one question
Sonu Nigam –– "No more questions" 🤢
Propaganda : 100%, Courage : 00% pic.twitter.com/qiCB8L27QF
ಈ ವಾರದ ಆರಂಭದಲ್ಲಿ, ಶಬಾನಾ ಅಜ್ಮಿ, ಪ್ರಕಾಶ್ ರಾಜ್ ಮತ್ತು ರ‍್ಯಾಪರ್ ಹನುಮಾನಕೈಂಡ್ ನವದೆಹಲಿಯಲ್ಲಿ ನಡೆದ ಚಲೋ ಸಂಸದ್ ಮೆರವಣಿಗೆಯಲ್ಲಿ ಸೇರಿಕೊಂಡರು . ಮುಂಬೈನಲ್ಲಿ, ಹುಮಾ ಖುರೇಷಿ, ಸಾಕಿಬ್ ಸಲೀಮ್, ಇಮ್ರಾನ್ ಖಾನ್, ಆಯೇಷಾ ಖಾನ್ ಮತ್ತು ಶಾಲಿನಿ ಪಾಂಡೆ ಪ್ರತಿಭಟನೆಗಳಲ್ಲಿ ಭಾಗವಹಿಸಿದರು . ಆಲಿಯಾ ಭಟ್ ಮತ್ತು ಆರ್ ಮಾಧವನ್ ಸೇರಿದಂತೆ ಇತರ ಬಾಲಿವುಡ್ ನಟರು ಇತರರಿಗಿಂತ ತಡವಾಗಿ ಬೆಂಬಲ ವ್ಯಕ್ತಪಡಿಸಿದರು ಮತ್ತು ಅದಕ್ಕಾಗಿ ಟೀಕೆಗಳನ್ನು ಎದುರಿಸಿದರು.
ಇದನ್ನೂ ಓದಿ: Indian Idol 16 grand finale: ಈ ದಿನ ಇಂಡಿಯನ್ ಐಡಲ್ 16 ಗ್ರ್ಯಾಂಡ್ ಫಿನಾಲೆ! ವಿಶಾಲ್ ದದ್ಲಾನಿ ಗೈರು
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಪ್ರಾರಂಭವಾದ ವಿದ್ಯಾರ್ಥಿ ಚಳುವಳಿ ಹಲವಾರು ನಗರಗಳಲ್ಲಿ ಹರಡಿದೆ. ಪ್ರತಿಭಟನಾಕಾರರು ಶಿಕ್ಷಣ ಸುಧಾರಣೆಗಳು, ಹೊಣೆಗಾರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.