ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರಿ ಮಳೆಯಿಂದ ಭೂ ಕುಸಿತ: 1,500ಕ್ಕೂ ಹೆಚ್ಚು ಕೇದಾರನಾಥ ಯಾತ್ರಾರ್ಥಿಗಳ ರಕ್ಷಣೆ

Landslide: ಭಾರಿ ಮಳೆಯಿಂದ ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲಲ್ಲಿ ಭೂಕುಸಿತವಾಗುತ್ತಿದ್ದು ಅಪಾಯದ ಆತಂಕ ಹೆಚ್ಚಾಗಿದೆ. ಭೂಕುಸಿತದ ಪರಿಣಾಮ ಕೇದಾರನಾಥ ಯಾತ್ರಾ ಮಾರ್ಗದ ಚಿರ್ಬಾಸಾ ಬಳಿ ಸಿಲುಕಿದ್ದ ಸುಮಾರು 1,500ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ರಕ್ಷಣೆ ಮಾಡಿ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.

ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭೂಕುಸಿತ

ಸಂಗ್ರಹ ಚಿತ್ರ -

ಉತ್ತರಾಖಂಡ: ಭೂಕುಸಿದ (Landslide) ಪರಿಣಾಮ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಸಿಲುಕಿದ್ದ ಸುಮಾರು 1,500ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು (Kedarnath pilgrims) ರಕ್ಷಣೆ ಮಾಡಲಾಗಿದೆ. ಭಾರಿ ಮಳೆಯಿಂದಾಗಿ (heavy rain) ಎರಡನೇ ದಿನವಾದ ಭಾನುವಾರ ಕೂಡ ಚಾರ್ ಧಾಮ್ ಯಾತ್ರೆಯನ್ನು (Char Dham Yatra) ಸ್ಥಗಿತಗೊಳಿಸಲಾಗಿತ್ತು. ನಿರಂತರವಾಗಿ ಕಲ್ಲುಗಳು ಉರುಳುತ್ತಿದ್ದು, ಅಪಾಯಕಾರಿ ಪರಿಸ್ಥಿತಿಯ ಮಧ್ಯೆಯೂ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಗೌರಿಕುಂಡದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಚಿರ್ಬಾಸಾ (Chirbasa) ಪ್ರದೇಶದಲ್ಲಿ ನಿರಂತರ ಭೂಕುಸಿತವಾಗುತ್ತಿದ್ದು, ಅಪಾಯದ ಪರಿಸ್ಥಿತಿ ಇದೆ ಎನ್ನಲಾಗಿದೆ.

ಗೌರಿಕುಂಡದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಕೇದಾರನಾಥ ಯಾತ್ರಾ ಮಾರ್ಗದ ಚಿರ್ಬಾಸಾ ಬಳಿ ಸಿಲುಕಿದ್ದ ಸುಮಾರು 1,500ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಭಾನುವಾರ ತಡರಾತ್ರಿ ರಕ್ಷಣಾ ತಂಡಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದವು.

ʻಜ್ಯೋತಿಕಾ ಜೊತೆಯೇ ಮದುವೆ ಆಗಬೇಕೆಂದು ಸೂರ್ಯ 4 ವರ್ಷ ಕಾದಿದ್ದ..ʼ; ತಂದೆ ಶಿವಕುಮಾರ್‌ ಹೇಳಿದ ಬಿಚ್ಚಿಟ್ಟ ರಹಸ್ಯವಿದು

ಉತ್ತರಾಖಂಡದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಮುಂದುವರಿದಿದ್ದು, ಈ ಕಾರಣದಿಂದ ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲಲ್ಲಿ ಭೂಕುಸಿತಗಳು ವರದಿಯಾಗುತ್ತಿವೆ. ಈ ನಡುವೆಯೇ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಅಧಿಕಾರಿಗಳು, ಕೇದಾರನಾಥ ಯಾತ್ರಾ ಮಾರ್ಗದ ಚಿರ್ಬಾಸಾ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 1,500 ಯಾತ್ರಾರ್ಥಿಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಜಿಲ್ಲಾ ವಿಪತ್ತು ನಿರ್ವಹಣಾ ಪಡೆಯನ್ನು ಒಳಗೊಂಡ ಜಂಟಿ ತಂಡಗಳು ಸಾವಿರಾರು ಯಾತ್ರಾರ್ಥಿಗಳನ್ನು ರಕ್ಷಿಸಿ ಗೌರಿಕುಂಡಕ್ಕೆ ಕರೆತಂದವು ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಚಿರ್ಬಾಸಾ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಹಲವಾರು ಯಾತ್ರಾರ್ಥಿಗಳು ಮಾರ್ಗದ ಇನ್ನೊಂದು ಬದಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಸೋನ್‌ಪ್ರಯಾಗ ಪೊಲೀಸರಿಗೆ ಲಭಿಸಿದ್ದು, ಬಳಿಕ ಸಬ್-ಇನ್ಸ್‌ಪೆಕ್ಟರ್ ಆಶಿಶ್ ಡಿಮ್ರಿ ನೇತೃತ್ವದ ಸೋನ್‌ಪ್ರಯಾಗದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡವು ಸ್ಥಳಕ್ಕೆ ಆಗಮಿಸಿತ್ತು.

Kalaburagi News: ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ: ಗೃಹ ಸಚಿವರ ತವರಿನಲ್ಲಿಯೇ ಪೊಲೀಸರಿಂದ ಕಳ್ಳ ಪೊಲೀಸ್ ಆಟ?

ಭೂಕುಸಿತದಿಂದಾಗಿ ಚಿರ್ಬಾಸಾ ಹೆಲಿಪ್ಯಾಡ್ ಬಳಿಯ ರಸ್ತೆಯಲ್ಲಿ ಕಲ್ಲು, ಮನ್ನಿವ ಅವಶೇಷಗಳು ಬಿದ್ದಿವೆ. ಬೆಟ್ಟದ ಮೇಲಿನಿಂದ ನಿರಂತರ ಕಲ್ಲುಗಳು ಉರುಳುತ್ತಿದ್ದು ರಸ್ತೆಯಲ್ಲಿ ಸಂಚಾರ ಅತ್ಯಂತ ಅಪಾಯಕಾರಿಯಾಗಿದೆ. ಈ ನಡುವೆಯೇ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.