OTT Malayalam Movies: ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ ಈ 5 ಹೊಸ ಮಲಯಾಳಂ ಸಿನಿಮಾ
ಕುಂಚಕೋ ಬೋಬನ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಜಿತು ಆಶ್ರಫ್ ನಿರ್ದೇಶನದ ಆಫೀಸರ್ ಆನ್ ಡ್ಯೂಟಿ ಸಿನಿಮಾ ಒಟಿಟಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾ ಮೂಲಕ ದಕ್ಷ ಪೊಲೀಸ್ ಆಫೀಸರ್ ಕಥೆಯನ್ನು ಅಷ್ಟೇ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಜಿತು.

Malayalam OTT

ಒಟಿಟಿಯಲ್ಲಿ ಇತ್ತೀಚಿನ ಮಲಯಾಳಂ ಚಿತ್ರಗಳು (Malayalam Movies) ಹುಡುಕುತ್ತಿದ್ದೀರಾ?. ಕ್ರೈಮ್ ಥ್ರಿಲ್ಲರ್‌ಗಳಿಂದ ಹಿಡಿದು ಭಾವನಾತ್ಮಕ ಡ್ರಾಮಗಳವರೆಗೂ, ಹಲವಾರು ರೋಮಾಂಚಕಾರಿ ಸಿನಿಮಾಗಳು ಕಳೆದ ಎರಡು ವಾರಗಳಲ್ಲಿ ಬಿಡಡುಗಡೆ ಆಗಿದೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ ಹಾಟ್‌ಸ್ಟಾರ್ ಮತ್ತು ಇನ್ನೂ ಹೆಚ್ಚಿನ ವೇದಿಕೆಗಳಲ್ಲಿ ಇವುಗಳ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಕಾಮಿಡಿ ಜತೆಗೆ ಸಸ್ಪೆನ್ಸ್ ಸಿನಿಮಾಗಳೂ ಸ್ಟ್ರೀಮಿಂಗ್ ಆರಂಭಿಸಿವೆ. ಚಿತ್ರಮಂದಿರಗಳಲ್ಲಿ ಹಿಟ್ ಪಟ್ಟ ಪಡೆದು, ಒಟಿಟಿಯಲ್ಲಿಯೂ ಕಮಾಲ್ ಮಾಡುತ್ತಿವೆ ಈ ಐದು ಟಾಪ್ ಸಿನಿಮಾಗಳು.
ಆಫೀಸರ್ ಆನ್ ಡ್ಯೂಟಿ
ಕುಂಚಕೋ ಬೋಬನ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಜಿತು ಆಶ್ರಫ್ ನಿರ್ದೇಶನದ ಆಫೀಸರ್ ಆನ್ ಡ್ಯೂಟಿ ಸಿನಿಮಾ ಒಟಿಟಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾ ಮೂಲಕ ದಕ್ಷ ಪೊಲೀಸ್ ಆಫೀಸರ್ ಕಥೆಯನ್ನು ಅಷ್ಟೇ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಜಿತು. ಆಕ್ಷನ್ ಜತೆಗೆ ಥ್ರಿಲ್ಲಿಂಗ್ ಎಳೆಯ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಇದೀಗ ಒಟಿಟಿಯಲ್ಲಿಯೂ ಕಮಾಲ್ ಮಾಡುತ್ತಿದೆ. ನೆಟ್‌ಫ್ಲಿಕ್ಸ್ ಮೂಲಕ ಇದನ್ನು ವೀಕ್ಷಿಸಬಹುದು.
ಒರು ಜಾತಿ ಜಾತಕಂ
ಈ ಚಿತ್ರವು ಜನವರಿ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅದಾದ ಬಳಿಕ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೋಹನನ್ ನಿರ್ದೇಶನದ ಹಾಸ್ಯ ಈ ಸಿನಿಮಾ ಕೂಡ ಟ್ರೆಂಡಿಂಗ್‌ನಲ್ಲಿದೆ. 30 ವರ್ಷದ ವ್ಯಕ್ತಿಯೊಬ್ಬನ ಮದುವೆ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ವಿನೀತ್ ಶ್ರೀನಿವಾಸನ್ ಮತ್ತು ನಿಖಿಲಾ ವಿಮಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ನೋಡಬಹುದು.
ರೇಖಾಚಿತ್ರಂ
ಆಸಿಫ್ ಅಲಿ ಹಾಗೂ ಅನಸ್ವರ ರಾಜನ್ ಅಭಿನಯದ ಮಲಯಾಳಂನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ರೇಖಾಚಿತ್ರಂ ಜನವರಿ 9 ರಂದು ಯಾವುದೇ ದೊಡ್ಡ ಆಡಂಬರ, ಗದ್ದಲವಿಲ್ಲದೆ ಚಿತ್ರಮಂದಿರಗಳಲ್ಲಿ ಸೈಲೆಂಟ್ ಆಗಿ ಬಿಡುಗಡೆಯಾಯಿತು. ಇದು ನಿಗೂಢ ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ವ್ಯವಹಾರ ಮಾಡಿತು. ಜೋಫಿನ್ ಟಿ ಚಾಕೋ ನಿರ್ದೇಶನದ ಈ ಸಿನಿಮಾ ಮಾರ್ಚ್ 7ರಂದು ಮಲಯಾಳಂ ಸೇರಿದಂತೆ ತಮಿಳು, ಕನ್ನಡ, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸೋನಿ ಲಿವ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
Neha Gowda: ವಿಚಿತ್ರ ಹೆಸರಿಡುವ ಈ ಕಾಲದಲ್ಲಿ ನೇಹಾ ಗೌಡ ತನ್ನ ಮಗಳಿಗೆ ಇಟ್ಟ ಹೆಸರೇನು ನೋಡಿ
ಪೊನ್ಮನ್
ಮಾಲಿವುಡ್ ನಿರ್ದೇಶಕ ಮತ್ತು ನಟ ಬಾಸಿಲ್ ಜೋಸೆಫ್ ಅಭಿನಯದ ಪೊನ್ಮನ್ ಸಿನಿಮಾ ಸದ್ಯ ಜಿಯೋ ಹಾಟ್‌ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಜೋತೀಶ್ ಶಂಕರ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್ ಲಿಸ್ಟ್ ಸೇರಿತ್ತು. ಈ ಡಾರ್ಕ್ ಕಾಮಿಡಿ ಸಿನಿಮಾದಲ್ಲಿ ಕನ್ನಡದ ಜತೆಗೆ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ನಾರಾಯಣೀಂತೆ ಮೂನ್ನನ್ಮಕ್ಕಳ್
ಶರಣ್ ವೇಣುಗೋಪಾಲ್ ನಿರ್ದೇಶನದ ಚೊಚ್ಚಲ ಸಿನಿಮಾ ನಾರಾಯಣೀಂತೆ ಮೂನ್ನನ್ಮಕ್ಕಳ್ ಕೂಡ ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದು ಸದ್ಯ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜೊಜು ಜಾರ್ಜ್, ಸೂರಜ್ ವೆಂಜ್ರಮೂಡು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.