ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ದಾರ್ ವಲ್ಲಭಭಾಯಿ ಪಟೇಲ್ 151ನೇ ಜನ್ಮದಿನ: ಏಕತಾ ಪ್ರತಿಮೆಗೆ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಏಕ್ತಾ ನಗರದಲ್ಲಿರುವ ಏಕತಾ ಪ್ರತಿಮೆ ಬಳಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುವ ಹಾಗೂ ಬಲಪಡಿಸುವ ನಿಟ್ಟಿನಲ್ಲಿ ಅವರ ಬದ್ಧತೆಯನ್ನು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನೆನಪಿಸಿಕೊಂಡರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ

ಸಂಗ್ರಹ ಚಿತ್ರ -

ನವದೆಹಲಿ: ಅಖಂಡ ಭಾರತದ ರೂವಾರಿ ಮತ್ತು ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರಿಗೆ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳು. ಬಲಿಷ್ಠ, ಸಮೃದ್ಧ ಮತ್ತು ಸಮರ್ಥ ಭಾರತದ ನಿರ್ಮಾಣಕ್ಕಾಗಿ ಅವರು ತಮ್ಮ ಸಂಪೂರ್ಣ ಜೀವನವನ್ನೇ ಅರ್ಪಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಏಕ್ತಾ ನಗರದಲ್ಲಿರುವ ಏಕತಾ ಪ್ರತಿಮೆಗೆ (Statue of Unity) ಶನಿವಾರ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ ಅವರು, ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುವ ಹಾಗೂ ಬಲಪಡಿಸುವ ನಿಟ್ಟಿನಲ್ಲಿ ಅವರ ಬದ್ಧತೆಯನ್ನು ನೆನಪಿಸಿಕೊಂಡರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 'ಸ್ಟ್ಯಾಚ್ಯೂ ಆಫ್ ಯೂನಿಟಿ' ಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ ಅವರು, ರಾಷ್ಟ್ರೀಯ ಏಕೀಕರಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪಟೇಲ್ ಅವರು ಬಿಟ್ಟುಹೋದ ಶಾಶ್ವತ ಪರಂಪರೆಯನ್ನು ಸ್ಮರಿಸಿದರು.

Viral Video: ಹೆಲಿಕಾಪ್ಟರ್ ಅಪಘಾತಕ್ಕೂ ಮೊದಲು ಹಿಮಾಲಯದ ದೃಶ್ಯವನ್ನು ಕಣ್ತುಂಬಿಕೊಂಡ ವಿಡಿಯೊ ಹಂಚಿಕೊಂಡ ಕರ್ನಾಟಕದ ಪ್ರಯಾಣಿಕ

ಪ್ರಧಾನಿ ಮೋದಿ ಅವರು ತಮ್ಮ ಸಂದೇಶದಲ್ಲಿ ರಾಷ್ಟ್ರೀಯ ಏಕೀಕರಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಪಟೇಲ್ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ದೇಶದ ಸೇವೆಗಾಗಿ ಅವರು ಮಾಡಿರುವ ತ್ಯಾಗ ಮತ್ತು ಸಮರ್ಪಣಾ ಭಾವ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ದೊಡ್ಡ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1875ರ ಅಕ್ಟೋಬರ್ 31ರಂದು ಗುಜರಾತ್‌ನ ನಾಡಿಯಾದ್‌ನಲ್ಲಿ ಜನಿಸಿದರು. 1950ರ ಡಿಸೆಂಬರ್ 15 ರಂದು ನಿಧನರಾದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಾರಿಗೆ ದೇಶದ ಗೃಹ ಸಚಿವರಾದ ಅವರು 560ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳಿಸಿದರು.

ಭಾರತವನ್ನು ಒಗ್ಗೂಡಿಸುವಲ್ಲಿ ಪಟೇಲ್ ಅವರು ವಹಿಸಿದ ಪಾತ್ರ ಮತ್ತು ಸ್ವಾತಂತ್ರ್ಯಾನಂತರ ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ದೇಶಾದ್ಯಂತ ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು 'ರಾಷ್ಟ್ರೀಯ ಏಕತಾ ದಿನ'ವಾಗಿ ಆಚರಿಸಲಾಗುತ್ತದೆ. 2014ರಲ್ಲಿ ಈ ದಿನವನ್ನು ಅಧಿಕೃತವಾಗಿ ಪರಿಚಯಿಸಿದ ಭಾರತ ಸರ್ಕಾರವು ಬಳಿಕ ಪ್ರತಿ ವರ್ಷ ಅವರ ಜನ್ಮದಿನವನ್ನು ಆಚರಿಸುತ್ತಿದೆ.

ಏಕತಾ ಪ್ರತಿಮೆ

ವಿಶ್ವದ ಅತಿ ಎತ್ತರದ ಪ್ರತಿಮೆ ಎಂದೇ ಗುರುತಿಸಲ್ಪಟ್ಟಿರುವ ಏಕತಾ ಪ್ರತಿಮೆಯನ್ನು ಗುಜರಾತ್‌ನ ಏಕತಾ ನಗರ ಕೇವಡಿಯಾ ಸಮೀಪದ ಸಾಧು ಬೆಟ್ ದ್ವೀಪ, ನರ್ಮದಾ ನದಿ ದಂಡೆ ಮೇಲೆ ಸ್ಥಾಪಿಸಲಾಗಿದೆ. ಪೀಠ ಸೇರಿದಂತೆ ಸುಮಾರು 240 ಮೀಟರ್ ಎತ್ತರವಿರುವ ಈ ಪ್ರತಿಮೆಯನ್ನು ಶಿಲ್ಪಿ ರಾಮ್ ವಿ. ಸುತಾರ್ ಅವರು ನಿರ್ಮಿಸಿದ್ದರು. ಇದರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ಲಾರ್ಸನ್ ಆ್ಯಂಡ್ ಟ್ರೂಬೋ ಸಂಸ್ಥೆ ವಹಿಸಿಕೊಂಡಿದ್ದು, 2018ರ ಅಕ್ಟೋಬರ್ 31ರಂದು ಲೋಕಾರ್ಪಣೆಗೊಳಿಸಲಾಗಿತ್ತು.

ಬೀದಿ ನಾಯಿ ದಾಳಿಗೆ 4 ವರ್ಷದ ಬಾಲಕ ಬಲಿ: ಕಲಬುರಗಿಯಲ್ಲಿ ಹೃದಯ ವಿದ್ರಾವಕ ದುರಂತ

ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ವೀಕ್ಷಣಾ ಗ್ಯಾಲರಿ, ಸರ್ದಾರ್ ಪಟೇಲ್ ಅವರ ಜೀವನ ಮತ್ತು ಭಾರತದ ಏಕೀಕರಣದ ಇತಿಹಾಸವನ್ನು ನೆನಪಿಸುವ ಸಂಗ್ರಹಾಲಯ ಮತ್ತು ಪ್ರದರ್ಶನ ಕೇಂದ್ರ, ಸುತ್ತಮುತ್ತ ಹೂವುಗಳ ತೋಟ, ಜಂಗಲ್ ಸಫಾರಿ, ಕ್ಯಾಕ್ಟಸ್ ಗಾರ್ಡನ್, ನರ್ಮದಾ ನದಿಯಲ್ಲಿ ನೌಕಾ ವಿಹಾರ ಮತ್ತು ಲೇಸರ್ ಲೈಟ್ ಅಂಡ್ ಸೌಂಡ್ ಶೋ ಅನ್ನು ಒಳಗೊಂಡಿದೆ.