ರಾಷ್ಟ್ರಪತಿ ಮಾತು ಕೇಳಲಿಲ್ಲ, ಈಶಾನ್ಯ ಪಟ್ಕಾ ಧರಿಸಲಿಲ್ಲ; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈಶಾನ್ಯ ಪಟ್ಕಾ ಧರಿಸಲು ನಿರಾಕರಿಸಿದ ಘಟನೆ ನಡೆದಿದೆ. ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಎರಡು ಬಾರಿ ವಿರೋಧ ಪಕ್ಷದ ನಾಯಕನಿಗೆ ಪಟ್ಕಾ ಧರಿಸಲು ಹೇಳಿದ್ದು, ಇದನ್ನು ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ (Rashtrapati Bhavan) ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರು ಈಶಾನ್ಯ ಪಟ್ಕಾ (North-Eastern Patka) ಧರಿಸಲು ನಿರಾಕರಿಸಿರುವ ಘಟನೆ ನಡೆದಿದೆ. ವಿದೇಶಿ ನಾಯಕರು ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು (President Droupadi Murmu) ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ ಬಂದು ಎರಡು ಬಾರಿ ಈಶಾನ್ಯ ಪಟ್ಕಾ ಧರಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಅವರು ಅದನ್ನು ನಿರಾಕರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅದೊಂದು ನಕಲಿ ನಾಟಕ ಎಂದು ಕರೆದಿದೆ.
ಕರ್ತವ್ಯ ಪಥದಲ್ಲಿ 77 ಗಣರಾಜ್ಯೋತ್ಸವದ ಬಳಿಕ ರಾಷ್ಟ್ರಪತಿ ಭವನದಲ್ಲಿ ಸೋಮವಾರ ಅತಿಥಿ ಸತ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯುರೋಪಿಯನ್ ಒಕ್ಕೂಟದ ನಾಯಕರು, ವಿದೇಶಿ ರಾಯಭಾರಿಗಳು ಮತ್ತು ಇತರ ಅತಿಥಿಗಳು ಪಾಲ್ಗೊಂಡಿದ್ದು, ಎಲ್ಲರಿಗೂ ಈಶಾನ್ಯ ಪಟ್ಕಾವನ್ನು ನೀಡಲಾಯಿತು. ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಮಾತ್ರ ಇದನ್ನು ಧರಿಸಲು ನಿರಾಕರಿಸಿದ್ದಾರೆ. ಇದರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಧ್ವಜ ಹಿಡಿದು ಹೆಜ್ಜೆ ಹಾಕಿದ ಶ್ವಾನಗಳು; ಗಣರಾಜ್ಯೋತ್ಸವದ ವಿಶೇಷ ಮೆರವಣೆಗೆ ಹೇಗಿತ್ತು ನೋಡಿ!
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡು ಬಾರಿ ರಾಹುಲ್ ಗಾಂಧಿಯವರ ಬಳಿ ಬಂದು ಅದನ್ನು ಧರಿಸುವಂತೆ ಕೇಳಿದ್ದಾರೆ. ಆದರೆ ಅವರು ಅದನ್ನು ನಿರ್ಲಕ್ಷಿಸಿದ್ದಾರೆ. ಸ್ವಾಗತ ಕಾರ್ಯಕ್ರಮದ ವೇಳೆ ರಾಹುಲ್ ಗಾಂಧಿ ಪಟ್ಕಾ ತೆಗೆದುಕೊಂಡರು. ಆದರೆ ಅದನ್ನು ತಮ್ಮ ಕೈಯಲ್ಲಿ ಹಿಡಿದಿದ್ದರು. ಅದನ್ನು ಧರಿಸದಿರಲು ನಿರ್ಧರಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ರಾಹುಲ್ ಗಾಂಧಿ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಆದರೆ ಅವರು ಪಟ್ಕಾ ಧರಿಸಿದರು.
RAHUL GANDHI REJECTS NORTH EAST GAMOSA despite President of India requesting him to wear it
— Shehzad Jai Hind (Modi Ka Parivar) (@Shehzad_Ind) January 26, 2026
Rahul Gandhi hates NORTH EAST AND ITS CULTURE AND PEOPLE
HE INSULTED PRESIDENT FROM ADIVASI SAMAJ
HIS FAMILY HAS ALWAYS BETRAYED NORTH EAST
THEY BOMBED NORTH EAST
KEPT IT AWAY FROM… pic.twitter.com/PVDgfVxMYJ
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, ಈ ಕಾರ್ಯಕ್ರಮ ಬಿಜೆಪಿಯ ನಕಲಿ ನಾಟಕ. ಈಶಾನ್ಯವನ್ನು ರಾಹುಲ್ ಗಾಂಧಿ ಎಷ್ಟು ಪ್ರೀತಿಸುತ್ತಾರೆಂದು ಎಲ್ಲರಿಗೂ ಗೊತ್ತಿದೆ. ರಾಹುಲ್ ಗಾಂಧಿ ಅವರು ಈಶಾನ್ಯದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದ್ದರು ಎಂದು ತಿಳಿಸಿದರು.
ರಾಷ್ಟ್ರಪತಿ ಭವನವನ್ನು ಬಿಜೆಪಿ ತನ್ನ ಕಚೇರಿಯನ್ನಾಗಿ ಮಾಡಲು ಬಯಸುತ್ತಿದೆ ಎಂದು ಹೇಳಿರುವ ಅವರು, ರಾಷ್ಟ್ರಪತಿಯವರು ಈಶಾನ್ಯ ಪಟ್ಕಾ ಧರಿಸಲು ವಿನಂತಿಸಿದರೂ ರಾಹುಲ್ ಗಾಂಧಿ ಅದನ್ನು ತಿರಸ್ಕರಿಸಿದ್ದಾರೆ. ರಾಹುಲ್ ಗಾಂಧಿ ಅವರು ಈಶಾನ್ಯ ಸಂಸ್ಕೃತಿ ಮತ್ತು ಜನರನ್ನು ದ್ವೇಷಿಸುತ್ತಾರೆ. ಅವರು ಆದಿವಾಸಿ ಸಮಾಜದ ಅಧ್ಯಕ್ಷರನ್ನು ಅವಮಾನಿಸಿದ್ದಾರೆ ಎನ್ನುವ ಹೇಳಿಕೆಗಳನ್ನು ನೀಡಲಾಗಿದೆ. ಇಂತಹ ಸುಳ್ಳು ಆರೋಪಗಳ ಮೂಲಕ ರಾಷ್ಟ್ರಪತಿ ಭವನದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕಾರಕ್ಕೆ ಪಾಕ್ ಚಿಂತನೆ
ರಾಷ್ಟ್ರಪತಿ ಭವನದಲ್ಲಿ ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗಾಗಿ ಆಯೋಜಿಸಿದ್ದ ಔತಣಕೂಟಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದೇ ಇರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಇತ್ತೀಚಿನ ವರ್ಷಗಳಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿತ್ತು.