ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Seemapuri Building Collapse: ದೆಹಲಿಯಲ್ಲಿ ಮತ್ತೆ ಕುಸಿದ ಕಟ್ಟಡ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ವಸತಿ ಕಟ್ಟಡವೊಂದು ಕುಸಿದಿದ್ದು, ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಡಿಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ.

ದೆಹಲಿಯಲ್ಲಿ 4 ಅಂತಸ್ತಿನ ವಸತಿ ಕಟ್ಟಡ ಕುಸಿತ; ಹಲವರು ಸಿಲುಕಿರುವ ಶಂಕೆ

ದೆಹಲಿಯಲ್ಲಿ ಕುಸಿದ ನಾಲ್ಕು ಅಂತಸ್ತಿನ ವಸತಿ ಕಟ್ಟಡ -

Priyanka P
Priyanka P Oct 7, 2026 6:47 PM

ನವದೆಹಲಿ, ಅ. 7: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹುಡುಗರ ಪಿಜಿ ಕಟ್ಟಡ ದುರಂತ ಘಟನೆ ಮಾಸುವ ಮುನ್ನವೇ ಇದೀಗ ಸೀಮಾಪುರಿ ಪ್ರದೇಶದಲ್ಲಿ ಅಂತಹದ್ದೇ ಮತ್ತೊಂದು ದುರ್ಘಟನೆ ಸಂಭವಿಸಿದೆ (Seemapuri Building Collapse). ವಸತಿ ಕಟ್ಟಡವೊಂದು ಕುಸಿದಿದ್ದು (building collapse) ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ದೆಹಲಿ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಸುಮಾರು ಮಧ್ಯಾಹ್ನ 3:30ರ ಸುಮಾರಿಗೆ ಕಟ್ಟಡ ಕುಸಿತದ ಬಗ್ಗೆ ಕರೆ ಸ್ವೀಕರಿಸಿತು. ನಾಲ್ಕು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಿದವು. ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಎಫ್‌ಎಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕುಸಿದ ಕಟ್ಟಡವು ತನ್ನ ಮನೆ ಎಂದು ಹೇಳಿರುವ ಸ್ಥಳೀಯ ನಿವಾಸಿ ಸಲೀಂ, ಮಗಳು ಮತ್ತು ಅಳಿಯ ಒಳಗೆ ಸಿಲುಕಿಕೊಂಡಿದ್ದಾರೆ. ಆದರೆ ನಂತರ ಅವರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ 12 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ನೆಲ ಮಹಡಿಯಲ್ಲಿ ಒಂದು ಅಂಗಡಿ ಇದ್ದು, ಅದರ ಮೇಲಿನ ನಾಲ್ಕು ಮಹಡಿಗಳಲ್ಲಿ ಕುಟುಂಬಗಳು ವಾಸಿಸುತ್ತಿದ್ದವು ಎಂದು ಸ್ಥಳೀಯ ನಿವಾಸಿಯೊಬ್ಬರು ವಿವರಿಸಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಮೂವರನ್ನು ರಕ್ಷಿಸಿದ್ದಾರೆ.

ಇಲ್ಲಿದೆ ವಿಡಿಯೊ:



“ಸುಮಾರು 40ರಿಂದ 50 ವರ್ಷ ಹಳೆಯದಾದ ಹಳೆಯ ಕಟ್ಟಡ ಕುಸಿದಿದೆ ಎಂಬ ಮಾಹಿತಿ ನಮಗೆ ಬಂದಿದೆ. ಈಗಾಗಲೇ ನಾಲ್ಕರಿಂದ ಐದು ಜನರನ್ನು ಅವಶೇಷಗಳಿಂದ ರಕ್ಷಿಸಲಾಗಿದೆ. ಇಡೀ ಪೊಲೀಸ್ ಪಡೆ, ಎಂಸಿಡಿ ಮತ್ತು ಆಡಳಿತವು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ” ಎಂದು ಝಿಲ್ಮಿಲ್‌ನ ಪುರಸಭೆ ಸದಸ್ಯ ಪಂಕಜ್ ಲುಥ್ರಾ ಹೇಳಿದ್ದಾರೆ.

ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ: 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಸೆಪ್ಟೆಂಬರ್ 6ರಂದು ದೆಹಲಿಯ ಸತ್ಯ ನಿಕೇತನದಲ್ಲಿ ಬಾಲಕರ ಪಿಜಿ ದುರಸ್ತಿ ಕಾರ್ಯ ನಡೆಯುತ್ತಿರುವಾಗ ಕುಸಿದು ಬಿದ್ದ ಒಂದು ತಿಂಗಳ ನಂತರ ಈ ದುರ್ಘಟನೆ ಸಂಭವಿಸಿದೆ. ಸತ್ಯ ನಿಕೇತನ ಘಟನೆಯಲ್ಲಿ ಏಳು ಜನರು ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದರು.

ಸತ್ಯ ನಿಕೇತನ ಘಟನೆ ಬಳಿಕ, ದೆಹಲಿ ಮಹಾನಗರ ಪಾಲಿಕೆಯು ಅಪಾಯಕಾರಿ ಕಟ್ಟಡಗಳು, ಅನಧಿಕೃತ ನಿರ್ಮಾಣಗಳು ಹಾಗೂ ದೆಹಲಿ ಮಾಸ್ಟರ್ ಪ್ಲಾನ್ ಮತ್ತು ಕಟ್ಟಡ ನಿಯಮಗಳ ಉಲ್ಲಂಘನೆಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಮಂಗಳವಾರ (ಅ. 6) ಹಳೆ ಸೀಮಾಪುರಿ ಸೇರಿ ದೆಹಲಿಯ ಹಲವು ಪ್ರದೇಶಗಳಲ್ಲಿ ನಾಗರಿಕ ಸಂಸ್ಥೆಯು ಅಕ್ರಮ ನಿರ್ಮಾಣಗಳ ತೆರವು ಕಾರ್ಯಾಚರಣೆ ನಡೆಸಿದೆ.