ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು: ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿರುವ ಮಮತಾ ಬ್ಯಾನರ್ಜಿ! ಸೂರ್ಯಾಸ್ತದವರೆಗೂ ಕಾಯಿರಿ ಎಂದ ನಾಯಕಿ
BJP victory in West Bengal: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಮತ್ತು ಪಕ್ಷದ ಬೆಂಬಲಿಗರಿಗೆ ತುರ್ತು ಸಂದೇಶವನ್ನು ನೀಡಿದ್ದು, ಎಣಿಕೆ ಕೇಂದ್ರಗಳನ್ನು ಬಿಟ್ಟು ಹೊರಬರದಂತೆ ಮನವಿ ಮಾಡಿದ್ದಾರೆ. ಇದು ಬಿಜೆಪಿಯ ಸಂಚು ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಮತ್ತು ಪಕ್ಷದ ಬೆಂಬಲಿಗರಿಗೆ ತುರ್ತು ಸಂದೇಶ ರವಾನಿಸಿದ್ದು, ಎಣಿಕೆ ಕೇಂದ್ರಗಳನ್ನು ಬಿಟ್ಟು ಹೊರಬರದಂತೆ ಮನವಿ ಮಾಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯು ಚುನಾವಣಾ ಆಯೋಗ (Election Commission) ಮತ್ತು ಕೇಂದ್ರ ಪಡೆಗಳೊಂದಿಗೆ ಸೇರಿಕೊಂಡು ಚುನಾವಣೆಯಲ್ಲಿ ಅಕ್ರಮ ಎಸಗುತ್ತಿದೆ ಎಂದು ಆರೋಪಿಸಿದ್ದಾರೆ.
ಎಣಿಕೆ ಏಜೆಂಟ್‌ಗಳು ಮತ್ತು ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಎಣಿಕೆ ಕೇಂದ್ರದಿಂದ ಹೊರಬರಬಾರದು. ಇದು ಬಿಜೆಪಿಯ ಸಂಚು. ಅವರು ಮೊದಲು ಮುನ್ನಡೆ ಸಾಧಿಸಿದಂತೆ ತೋರಿಸಿಕೊಳ್ಳುತ್ತಾರೆ ಎಂದು ನಾನು ನಿನ್ನೆಯಿಂದಲೇ ಹೇಳುತ್ತಿದ್ದೇನೆ. ಅವರು ಹಲವು ಕಡೆಗಳಲ್ಲಿ ಎಣಿಕೆಯನ್ನು ನಿಲ್ಲಿಸಿದ್ದಾರೆ. ಕಲ್ಯಾಣಿಯಂತಹ ಸ್ಥಳಗಳಲ್ಲಿ ಸರಿಯಾದ ಹೊಂದಾಣಿಕೆಯಾಗದ ಯಂತ್ರಗಳು ಕಂಡುಬಂದಿವೆ. ಕೇಂದ್ರ ಪಡೆಗಳ ಮೂಲಕ ಟಿಎಂಸಿ ವಿರುದ್ಧ ಎಲ್ಲ ಕಡೆಯಿಂದ ಮೋಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಇಲ್ಲಿದೆ ಪೋಸ್ಟ್:
ಮೊದಲಿಗೆ ಅವರು ಎಸ್ಐಆರ್ ಮೂಲಕ ಮತಗಳನ್ನು ಕದಿಯಲು ಪ್ರಯತ್ನಿಸಿದರು. ಈಗಲೂ ಸಹ ನಾವು 100ಕ್ಕೂ ಹೆಚ್ಚು ಸ್ಥಾನಗಳಿಂದ ಮುಂದಿದ್ದೇವೆ. ಅದು ವರದಿಯಾಗುತ್ತಿಲ್ಲ. ಎಲ್ಲವನ್ನೂ ತಪ್ಪಾಗಿ ವರದಿ ಮಾಡಲಾಗುತ್ತಿದೆ. ಚುನಾವಣಾ ಆಯೋಗವು ಸಂಪೂರ್ಣವಾಗಿ ತನ್ನ ಸ್ವಂತ ಇಚ್ಛೆಯಂತೆ ಕೆಲಸ ಮಾಡುತ್ತಿದೆ ಮತ್ತು ಕೇಂದ್ರ ಪಡೆಗಳು ಸಹ ಅವರೊಂದಿಗೆ ಇವೆ. ಪೊಲೀಸರು ಸಹ ಕೇಂದ್ರ ಪಡೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
50 ವರ್ಷಗಳಲ್ಲಿ ಕಮ್ಯುನಿಸ್ಟರಿಗೆ ಇದೇ ಮೊದಲ ಬಾರಿಗೆ ಅಧಿಕಾರವಿಲ್ಲ
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಪ್ರಾಬಲ್ಯದ ಮಧ್ಯೆಯೇ ಮಮತಾ ಅವರ ಈ ಘೋಷಣೆ ಬಂದಿದೆ. ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿಯು ಸುಮಾರು 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಟಿಎಂಸಿ ಕೇವಲ 100 ಸ್ಥಾನಗಳನ್ನು ತಲುಪಿದೆ. ಇಷ್ಟಾದರೂ ಮಮತಾ ಮಾತ್ರ ಇನ್ನೂ ಗೆಲುವಿನ ವಿಶ್ವಾಸ ಹೊಂದಿದ್ದಾರೆ.
“ಪಕ್ಷದ ಕಾರ್ಯಕರ್ತರು ನಿರಾಶೆಗೊಳ್ಳುವ ಅಗತ್ಯವಿಲ್ಲ. ಸೂರ್ಯಾಸ್ತದ ನಂತರ ನೀವು ಗೆಲ್ಲುತ್ತೀರಿ. 2-4 ಸುತ್ತುಗಳ ಎಣಿಕೆ ನಡೆದಿದೆ. ಎಣಿಕೆ 14-18 ಸುತ್ತುಗಳಿಗೆ ಏರಿದೆ. ನಾವು ಗೆದ್ದೇ ಗೆಲ್ಲುತ್ತೇವೆ. ಯಾರೂ ಭಯಪಡುವ ಅಗತ್ಯವಿಲ್ಲʼʼ ಎಂದು ಅವರು ಹೇಳಿದರು.
ಕೇರಳಂನಲ್ಲಿ ಗೆಲುವಿನತ್ತ ಕಾಂಗ್ರೆಸ್ ನೇತೃತ್ವದ ಯುಡಿಎಫ್ ದಾಪುಗಾಲು
ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಆರಂಭಿಕ ಎಣಿಕೆಯ ಪ್ರಕಾರ, ಯುಡಿಎಫ್ ಈಗಾಗಲೇ 95ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಇದು ಮುಂದುವರಿದರೆ, 2001ರ ಕೇರಳಂ ವಿಧಾನಸಭಾ ಚುನಾವಣೆಯ ನಂತರದ ಅತ್ಯುತ್ತಮ ಪ್ರದರ್ಶನ ಆಗಲಿದೆ. 2001ರ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ 99 ಸ್ಥಾನಗಳನ್ನು ಗಳಿಸಿದ್ದು, ಇದುವರೆಗಿನ ಅತ್ಯಧಿಕ ಸ್ಥಾನವಾಗಿದೆ.
ಇತ್ತೀಚಿನ ಮತ ಎಣಿಕೆ ಪ್ರಕಾರ, ಸಿಪಿಐ(ಎಂ) ನೇತೃತ್ವದ ಅಧಿಕಾರದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರದ ವಿರುದ್ಧ ಜನರು ಸ್ಪಷ್ಟವಾದ ತೀರ್ಮಾನ ನೀಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಎಲ್‌ಡಿಎಫ್ ಈಗಾಗಲೇ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದೆ. ಹೀಗಾಗಿ ಅದು ಸೋಲಿನತ್ತ ಮುಖ ಮಾಡುತ್ತಿದೆ.