ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೋಕಸಭೆಯಲ್ಲಿ ಎನ್‌ಡಿಎಗೆ 40 ಮತಗಳ ಕೊರತೆ ಇದ್ದರೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕಾರ ಸಾಧ್ಯ! ಹೇಗೆ ಗೊತ್ತಾ?

Delimitation Bill: ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿ ಪ್ರಕ್ರಿಯೆಗೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತಿದ್ದುಪಡಿ ಮಸೂದೆಯ ಪ್ರಮುಖ ಬದಲಾವಣೆಗಳಿಗೆ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಪರಿಷ್ಕೃತ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುವ ಸಲುವಾಗಿ ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಾಲ್ಕು ದಿನಗಳ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.

ಲೋಕಸಭೆಯಲ್ಲಿ ಬಹುಮತದ ಕೊರತೆಯ ನಡುವೆಯೂ ಮಸೂದೆ ಪಾಸ್‌ ಆಗುತ್ತಾ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 27, 2026 6:57 PM

ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮತ್ತು ಮಹಿಳಾ ಮೀಸಲಾತಿ ಜಾರಿ ಪ್ರಕ್ರಿಯೆಗೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತಿದ್ದುಪಡಿ ಮಸೂದೆಯ ಪ್ರಮುಖ ಬದಲಾವಣೆಗಳಿಗೆ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಹೊಸ ಆದೇಶದ ಪ್ರಕಾರ ದೇಶದ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಏಕರೂಪವಾಗಿ ಶೇ. 50 ರಷ್ಟು ಹೆಚ್ಚಿಸಲಾಗುವುದು ಮತ್ತು ರಾಜ್ಯವಾರು ಸ್ಥಾನ ಹಂಚಿಕೆಯ ಅನುಪಾತವನ್ನು 2051 ರವರೆಗೆ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗುವುದು.

ಪರಿಷ್ಕೃತ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುವ ಸಲುವಾಗಿ ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಾಲ್ಕು ದಿನಗಳ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆದರೆ ಬಹುಮತಕ್ಕೆ 360 ಸಂಸದರ ಬೆಂಬಲ ಬೇಕಿರುತ್ತದೆ. ಒಂದು ವೇಳೆ 360 ಸಂಸದರ ಬೆಂಬಲ ಸಿಗದಿದ್ದರೂ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ. ಅದು ಹೇಗೆ ಇಲ್ಲಿದೆ.

ಸದನದ ಒಟ್ಟು ಸದಸ್ಯ ಬಲದ ಶೇ. 50 ಕ್ಕಿಂತ ಹೆಚ್ಚು, ಅಂದರೆ ಒಟ್ಟು 543 ಸ್ಥಾನಗಳಲ್ಲಿ ಕನಿಷ್ಠ 272 ಸಂಸದರ ಬೆಂಬಲ ಇರಲೇಬೇಕು. ಮತದಾನದ ಸಮಯದಲ್ಲಿ ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಮೂರನೇ ಎರಡರಷ್ಟು (2/3) ಬಹುಮತ ಬೇಕಾಗುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ 3 ಸ್ಥಾನಗಳು ಖಾಲಿ ಇದ್ದು, ಒಟ್ಟು 540 ಹಾಲಿ ಸಂಸದರಿದ್ದಾರೆ. ಎಲ್ಲಾ 540 ಸಂಸದರೂ ಸದನಕ್ಕೆ ಹಾಜರಾಗಿ ಮತ ಚಲಾಯಿಸಿದರೆ, ಮಸೂದೆ ಅಂಗೀಕಾರಕ್ಕೆ ಬರೋಬ್ಬರಿ 360 ಮತಗಳು ಬೇಕಾಗುತ್ತವೆ. ಸುಮಾರು 320 ಸಂಸದರ ಬಲ ಹೊಂದಿರುವ ಎನ್‌ಡಿಎ ಮೈತ್ರಿಕೂಟಕ್ಕೆ ಈ ಹಂತದಲ್ಲಿ 40 ಮತಗಳ ಕೊರತೆ ಎದುರಾಗುತ್ತದೆ.

ಆದರೆ, ವಿಶೇಷ ಬಹುಮತವನ್ನು 'ಹಾಜರಿದ್ದು ಮತ ಚಲಾಯಿಸುವವರ' ಸಂಖ್ಯೆಯ ಮೇಲೆ ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ವಿರೋಧ ಪಕ್ಷದ ಸಂಸದರು ಮತದಾನದಿಂದ ದೂರ ಉಳಿದರೆ ಅಥವಾ ಸದನಕ್ಕೆ ಗೈರುಹಾಜರಾದರೆ, ಮತ ಚಲಾಯಿಸುವವರ ಒಟ್ಟು ಸಂಖ್ಯೆ ಕುಸಿಯುತ್ತದೆ. ಉದಾಹರಣೆಗೆ, ಸದನದಲ್ಲಿ ಕೇವಲ 500 ಸಂಸದರು ಮಾತ್ರ ಮತ ಚಲಾಯಿಸಿದರೆ, 2/3 ಬಹುಮತದ ಮಿತಿಯು 334 ಮತಗಳಿಗೆ ಇಳಿಯಲಿದೆ. ಆಗ 320 ಸಂಸದರನ್ನು ಹೊಂದಿರುವ ಎನ್‌ಡಿಎ ಸರ್ಕಾರಕ್ಕೆ ಕೇವಲ 14 ಹೆಚ್ಚುವರಿ ಮತಗಳು ಸಿಕ್ಕರೂ ಮಸೂದೆ ಸುಲಭವಾಗಿ ಪಾಸಾಗಲಿದೆ.

ಕಳೆದ ಏಪ್ರಿಲ್ 17, 2026 ರಂದು ಸರ್ಕಾರ ಈ ಮಸೂದೆಯನ್ನು ಮತಕ್ಕೆ ಹಾಕಿದಾಗ 528 ಸಂಸದರು ಪಾಲ್ಗೊಂಡಿದ್ದರು. ಆ ವೇಳೆ ಮಸೂದೆಯ ಪರ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದಿದ್ದವು. ಅಂದಿನ ಹಾಜರಾತಿಗೆ ಅನುಗುಣವಾಗಿ 352 ಮತಗಳ ಅಗತ್ಯವಿದ್ದ ಕಾರಣ, 54 ಮತಗಳ ಕೊರತೆಯಿಂದ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.

ದಕ್ಷಿಣ ರಾಜ್ಯಗಳ ಒತ್ತಡಕ್ಕೆ ಮಣಿದ ಸರ್ಕಾರ; ಲೋಕಸಭಾ ಸ್ಥಾನ ಶೇ. 50ಕ್ಕೆ ಏರಿಕೆ, ಕ್ಷೇತ್ರ ಪುನರ್‌ವಿಂಗಡಣೆ 2051 ರವರೆಗೆ ಸ್ಥಗಿತ

ವಿಪ್‌ ಜಾರಿ!

ರಾಜ್ಯವಾರು ಲೋಕಸಭಾ ಸ್ಥಾನಗಳ ಸಂಖ್ಯೆಗೆ ಯಾವುದೇ ಧಕ್ಕೆಯಾಗದಂತೆ ರಕ್ಷಣೆ ನೀಡಬೇಕೆಂಬ ಷರತ್ತನ್ನು ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ಸರ್ಕಾರದ ಮುಂದಿಟ್ಟಿವೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ನವೆಂಬರ್ 30 ರಿಂದ ಡಿಸೆಂಬರ್ 4 ರವರೆಗೆ ಎಲ್ಲಾ ಸಂಸದರು ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ಎನ್‌ಸಿಪಿ (ಎಸ್‌ಪಿ) ವಿಪ್ ಜಾರಿಗೊಳಿಸಿದೆ.