ದೆಹಲಿ ಹೋರಾಟದ ಬಳಿಕ ರಾಷ್ಟ್ರವ್ಯಾಪಿ ಮತ್ತೆ ಹೊಸ ಆಂದೋಲನ ಘೋಷಿಸಿದ ಸಿಜೆಪಿಯ ಅಭಿಜಿತ್ ದೀಪ್ಕೆ; ಏನಿದು ಕ್ಯಾ ಬೋಲ್ತಿ ಪಬ್ಲಿಕ್ ಅಭಿಯಾನ?
Kya Bolti Public Campaign: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಅಭಿಯಾನದ ಭಾಗವಾಗಿ ಕ್ಯಾ ಬೋಲ್ಟಿ ಪಬ್ಲಿಕ್ ಆಂದೋಲನವನ್ನು ಘೋಷಿಸಿದರು. ಶಿಕ್ಷಣವು ಸುಲಭವಾಗಿ ಲಭ್ಯವಾಗಬೇಕು ಎಂದು ಒತ್ತಿ ಹೇಳಿದ ದೀಪ್ಕೆ, ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿದರು.
ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ) -
ನವದೆಹಲಿ, ಆ. 6: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಅಭಿಯಾನದ ಭಾಗವಾಗಿ ಕ್ಯಾ ಬೋಲ್ತಿ ಪಬ್ಲಿಕ್ ಆಂದೋಲನವನ್ನು ಘೋಷಿಸಿದರು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಗುರಿಯನ್ನು ಇದು ಹೊಂದಿದೆ ಎಂದು ಅವರು ಹೇಳಿದರು. ಈ ಅಭಿಯಾನದ ಮೊದಲ ಗಮನ ಶಿಕ್ಷಣದ ಮೇಲಿರುತ್ತದೆ ಎಂದು ದೀಪ್ಕೆ ಹೇಳಿದರು. ಹೆಚ್ಚುತ್ತಿರುವ ಶಾಲಾ, ಕಾಲೇಜು ಮತ್ತು ತರಬೇತಿ ಶುಲ್ಕಗಳು ಅನೇಕ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣವನ್ನು ಭರಿಸಲು ಕಷ್ಟಪಡುವಂತಾಗಿದೆ ಎಂದು ಹೇಳಿದರು.
“ನಾವು ಕೈಗೆತ್ತಿಕೊಳ್ಳಲಿರುವ ಮೊದಲ ವಿಷಯ ಶಿಕ್ಷಣ ಸುಧಾರಣೆ. ದೇಶದಲ್ಲಿ ಶಿಕ್ಷಣ ಕೈಗೆಟುಕುವಂತಿಲ್ಲ. ವಾರ್ಷಿಕ ಶುಲ್ಕಗಳು 1 ನೇ ತರಗತಿಗೆ 1 ಲಕ್ಷ ರುಪಾಯಿಯಿಂದ 2 ಲಕ್ಷ ರುಪಾಯಿವರೆಗೆ ಇದೆ. ಇದು ದೇಣಿಗೆ ಹಣಕ್ಕಿಂತ ಹೆಚ್ಚು” ಎಂದು ಅವರು ಹೇಳಿದರು. ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳು ಇಂತಹ ವೆಚ್ಚಗಳನ್ನು ಹೇಗೆ ನಿರ್ವಹಿಸುತ್ತವೆ ಎಂದು ದೀಪ್ಕೆ ಪ್ರಶ್ನಿಸಿದರು.
ಜೆಪಿಎಸ್‌ಸಿ ಪರೀಕ್ಷೆ ರದ್ದುಪಡಿಸಲು ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಹೋರಾಟ ತೀವ್ರ
ಹೆಚ್ಚುತ್ತಿರುವ ಕಾಲೇಜು ಮತ್ತು ತರಬೇತಿ ಶುಲ್ಕಗಳು ಹಲವು ಕುಟುಂಬಗಳನ್ನು ಸಾಲದ ಸುಳಿಗೆ ತಳ್ಳುತ್ತಿವೆ. ಈ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಿಜೆಪಿಯು ಬಯಸಿದೆ ಎಂದು ಹೇಳಿದರು. ʼʼಕಾಲೇಜು ಶುಲ್ಕಗಳು ಮತ್ತು ತರಬೇತಿ ಶುಲ್ಕಗಳು ಸಹ ತುಂಬಾ ಹೆಚ್ಚಾಗುತ್ತಿವೆ. ಕುಟುಂಬಗಳನ್ನು ಸಾಲದ ಹೊರೆಗೆ ಸಿಲುಕಿಸುತ್ತಿವೆ. ನಾವು ಕುಟುಂಬಗಳನ್ನು ಇದರಿಂದ ಮುಕ್ತಗೊಳಿಸಲು ಬಯಸುತ್ತೇವೆ. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಲು ಬಯಸಿದರೆ ಅದು ಅವರಿಗೆ ಹೊರೆಯಾಗಬಾರದು” ಎಂದು ಹೇಳಿದರು.
ಶಿಕ್ಷಣವು ಸುಲಭವಾಗಿ ಲಭ್ಯವಾಗುವಂತೆ ಇರಬೇಕು ಎಂದು ಒತ್ತಿ ಹೇಳಿದ ದೀಪ್ಕೆ, ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿದರು. “ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಕಾರ ಇದು ಮೂಲಭೂತ ಹಕ್ಕು. ಆದರೆ ಕಳೆದ ಕೆಲವು ವರ್ಷಗಳಿಂದ, ಶಿಕ್ಷಣವು ವ್ಯಾಪಾರ ಗಳಿಸಲು ಮೂಲಭೂತ ವ್ಯವಹಾರವಾಗಿದೆ” ಎಂದು ಅವರು ಹೇಳಿದರು.
ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಕುರಿತು ಜ್ಯೋತಿಷಿ ನುಡಿದ ಭವಿಷ್ಯವೇನು?
ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭೀಜಿತ್ ದೀಪ್ಕೆ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಭಾರತದ ಯುವ ಪೀಳಿಗೆಯ ಜತೆ ಸೇರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಸದ್ದು ಮಾಡಿದ್ದರು. ಈ ನಡುವೆ ಸಿಜೆಪಿ ಸಂಸ್ಥಾಪಕರಿಗೆ ಮುಂದಿನ ದಿನದ ಭವಿಷ್ಯವು ಕರಾಳವಾಗಿದೆ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಈತನಿಗೆ ತುಂಬಾ ಒತ್ತಡದಾಯಕ ದಿನವಾಗಬಹುದು. ವಾಸ್ತವವಾಗಿ ಜೈಲಿಗೂ ಹೋಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.