Operation Sindoor: ನಮ್ಮೊಂದಿಗೆ ಯುದ್ಧಕ್ಕೆ ಬರಬೇಡಿ ಭಯೋತ್ಪಾದಕ ಗುಂಪುಗಳ ಮುಖ್ಯಸ್ಥರನ್ನು ಒಪ್ಪಿಸಿ ಸಾಕು ಎನ್ನುತ್ತಿದೆ ಭಾರತ
India warns Pakistan: ಶಾಂತಿ ಪ್ರಿಯ ರಾಷ್ಟ್ರವಾಗಿರುವ ಭಾರತವನ್ನು ಕೆರಳುವಂತೆ ಮಾಡಿರುವುದು ಪಾಕಿಸ್ತಾನದ ಭಯೋತ್ಪಾದಕರು (Terrorists) ಎಂಬುದು ವಿಶ್ವಕ್ಕೆ ಗೊತ್ತಿದೆ. ಭಾರತಕ್ಕೆ ಬಂದು ಉಗ್ರರು ನಡೆಸಿರುವ ದುಷ್ಕೃತ್ಯಗಳು ಒಂದೆರಡಲ್ಲ. ಆದರೂ ಪಾಕಿಸ್ತಾನ ಮತ್ತು ಅಲ್ಲಿನ ಸಾಮಾನ್ಯ ಜನರ ಬಗ್ಗೆ ಯಾವುದೇ ಆಕ್ರೋಶವಿಲ್ಲ ಎಂಬುದನ್ನು ಭಾರತ ಮತ್ತೊಮ್ಮೆ ತೋರ್ಪಡಿಸಿದೆ. ಯುದ್ಧಕ್ಕಾಗಿ ನಾವು ಎಲ್ಲ ರೀತಿಯಲ್ಲೂ ಉತ್ತಮವಾಗಿ ಸನ್ನದ್ಧರಾಗಿದ್ದೇವೆ ಎನ್ನುವ ಸ್ಪಷ್ಟ ಎಚ್ಚರಿಕೆಯೊಂದಿಗೆ ಇದನ್ನು ಇಲ್ಲಿಗೆ ನಿಲ್ಲಿಸಲು ಭಯೋತ್ಪಾದಕ ಗುಂಪುಗಳ ಮುಖ್ಯಸ್ಥರನ್ನು ನಮಗೆ ಹಸ್ತಾಂತರಿಸಿ ಸಾಕು ಎನ್ನುತ್ತಿದೆ.


ನವದೆಹಲಿ: ಪಾಕಿಸ್ತಾನವು (Pakistan) ಈಗಾಗಲೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶೇ. 90ರಷ್ಟು ನಾಗರಿಕರೇ ಮಿಲಿಟರಿ ವಿರುದ್ಧ ನಿಂತಿದ್ದಾರೆ. ಈ ನಡುವೆ ಶಾಂತಿಯುತವಾಗಿದ್ದ ಭಾರತವನ್ನು ಕೆರಳಿಸಿ ಯುದ್ಧಕ್ಕೆ ಸ್ವತಃ ಆಮಂತ್ರಣವನ್ನು ಕೊಟ್ಟಿದೆ. ನಮ್ಮೊಂದಿಗೆ ಯುದ್ಧ ಬೇಡ. ನಮ್ಮ ಯುದ್ಧ ಸನ್ನದ್ಧತೆ ಸಾಕಷ್ಟು ಉತ್ತಮವಾಗಿದೆ ಎಂದು ಎಚ್ಚರಿಕೆ ನೀಡುವುದರೊಂದಿಗೆ ಭಾರತ ನಮಗೆ ಭಯೋತ್ಪಾದಕ ಗುಂಪುಗಳ ಮುಖ್ಯಸ್ಥರನ್ನು (Terror Group Heads) ಹಸ್ತಾಂತರಿಸಿ ಸಾಕು ಎಂದು ಶಾಂತಿಯ ಪ್ರಸ್ತಾವನೆಯನ್ನು ಪಾಕಿಸ್ತಾನದ ಮುಂದೆ ಇರಿಸಿದೆ. ಪಾಕಿಸ್ತಾನ ಭಯೋತ್ಪಾದಕರ (terrorist) ಮೂಲಕ ನಡೆಸುವ ಯುದ್ಧವನ್ನು ನಿಲ್ಲಿಸಿ ಹಿಂತಿರುಗಲಿ ಎಂದಿದೆ.
ಭಾರತದೊಂದಿಗೆ ಪಾಕಿಸ್ತಾನವು ತನ್ನ ಉದ್ವಿಗ್ನತೆಯನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬೇಕೆಂದು ಭಾರತವು ಬಯಸುತ್ತಿದೆ. ಇಲ್ಲದಿದ್ದರೆ ಅದು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ. ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್ ಅನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಅಪ್ರಚೋದಿತ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತದ ಬಲವಾದ ರಕ್ಷಣಾ ಮೂಲಸೌಕರ್ಯದಿಂದ ಹಿಮ್ಮೆಟ್ಟಿಸಲಾಗುತ್ತಿದೆ. ಪಾಕಿಸ್ತಾನವು ತನ್ನ ಸಮಸ್ಯೆಯ ಮೂಲ ಕಾರಣದ ಮೇಲೆ ಗಮನಹರಿಸಬೇಕು. ಅವರು ದೇಶದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಿ. ಭಾರತವು ಪಾಕಿಸ್ತಾನದಲ್ಲಿರುವ ತನ್ನ ಶತ್ರುಗಳ ಮೇಲೆ ಮಾತ್ರ ದಾಳಿ ಮಾಡಿದೆ ಎಂದು ಹೇಳಿದೆ.
ನಮ್ಮ ಯುದ್ಧ ಸನ್ನದ್ಧತೆ ಹೆಚ್ಚು ಉತ್ತಮವಾಗಿದೆ ಮತ್ತು ಸಾಕಷ್ಟು ತಂತ್ರಜ್ಞಾನವು ದೇಶೀಯವಾಗಿದೆ. ಅವರ ಮಂತ್ರಿಗಳು ತಮ್ಮ ದೇಶೀಯ ಮತಗಳನ್ನು ಉಳಿಸಲು ಹತಾಶರಾಗಿರುವುದರಿಂದ ಜನರಲ್ಲಿ ಉನ್ಮಾದ ಮತ್ತು ಭೀತಿಯನ್ನು ಸೃಷ್ಟಿಸುತ್ತಿದ್ದಾರೆ. ಈ ಭಯೋತ್ಪಾದಕ ಗುಂಪುಗಳ ಮುಖ್ಯಸ್ಥರಾದ ಮಸೂದ್ ಅಜರ್, ರೌಫ್ ಅಜ್ಗರ್ ಮತ್ತು ಹಫೀಜ್ ಸಯೀದ್ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬುದು ನಮ್ಮ ಬೇಡಿಕೆ ಎಂದು ಭಾರತ ಸರ್ಕಾರ ಹೇಳಿದೆ.
ಪಾಕಿಸ್ತಾನವು ಭಯೋತ್ಪಾದನೆ ಮೂಲಕ ನಡೆಸುವ ಯುದ್ಧವನ್ನು ನಿಲ್ಲಿಸಿ ಹಿಂತಿರುಗಬೇಕು. ಯಾಕೆಂದರೆ ಅವರ ದೇಶವು ಈಗಾಗಲೇ ಆರ್ಥಿಕ ಬಿಕ್ಕಟ್ಟುಗಳು ಮತ್ತು ದೇಶೀಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಶೇ. 90ರಷ್ಟು ಸಾರ್ವಜನಿಕರು ಮಿಲಿಟರಿ ವಿರುದ್ಧ ನಿಂತಿದ್ದಾರೆ ಎಂದು ಹೇಳಿದೆ.
ಈಗಾಗಲೇ ಜಮ್ಮು, ಜೈಸಲ್ಮೇರ್ ಮತ್ತು ಪಠಾಣ್‌ಕೋಟ್‌ನಂತಹ ನಗರಗಳ ಮೇಲೆ ಪಾಕಿಸ್ತಾನ ನಡೆಸಿರುವ ಅಪ್ರಚೋದಿತ ದಾಳಿಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಬಳಿಕ ಇಸ್ಲಾಮಾಬಾದ್, ಲಾಹೋರ್ ಮತ್ತು ಸಿಯಾಲ್‌ಕೋಟ್‌ಗಳ ಮೇಲೆ ದಾಳಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗಳಿಗೆ ಭಾರತೀಯ ಪಡೆಗಳು ಸಹ ತಕ್ಕ ಉತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: BLA Attack: ಪಾಕಿಸ್ತಾನದ ಆರು ಕಡೆ BLA ದಾಳಿ; ಪಾಕ್ ಧ್ವಜ ಹರಿದು, ಬಲೂಚ್ ಧ್ವಜ ಏರಿಸಿದ ಬಂಡುಕೋರರು
ಪಾಕಿಸ್ತಾನವು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ 15 ನಗರಗಳಲ್ಲಿನ ಮಿಲಿಟರಿ ಸ್ಥಾಪನೆಗಳ ಮೇಲೆ ಇದೇ ರೀತಿಯ ವಿಧಾನಗಳನ್ನು ಬಳಸಿಕೊಂಡು ದಾಳಿ ಮಾಡಲು ಪ್ರಯತ್ನಿಸಿದೆ. ಅವರು ನಿಗದಿಪಡಿಸಿರುವ ಗುರಿಗಳಲ್ಲಿ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ದೇಶದ ರಕ್ಷಣೆಯನ್ನು ಬಲಪಡಿಸಲು ಮತ್ತು ಭಾರತೀಯ ಪಡೆಗಳಿಗೆ ಸಹಾಯ ಮಾಡಲು ದೇಶಾದ್ಯಂತ ಪ್ರಾದೇಶಿಕ ಸೇನೆಯನ್ನು ಕೇಳಲಾಗಿದೆ. ಈ ಕುರಿತು ಮೇ 8 ರಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಅಧಿಸೂಚನೆ ಹೊರಡಿಸಿದ್ದರು.