ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರವಾಹ ಪೀಡಿತ ಕುಟುಂಬಗಳಿಗೆ ಪರಿಹಾರವಾಗಿ ಅವಧಿ ಮೀರಿದ ಕೆಮ್ಮಿನ ಸಿರಪ್ ವಿತರಣೆ; ಹಲವು ಮಕ್ಕಳು ಅಸ್ವಸ್ಥ

Expired Cough Syrup Distributed: ಆರೋಗ್ಯ ಇಲಾಖೆ ತಂಡವು, ಸುಮಾರು 20 ಪ್ರವಾಹ ಪೀಡಿತ ಕುಟುಂಬಗಳಿಗೆ ಔಷಧಿಗಳನ್ನು ವಿತರಿಸಿತು. ಒದಗಿಸಲಾದ ಔಷಧಿಗಳಲ್ಲಿ ಅವಧಿ ಮೀರಿದ ಕೆಮ್ಮಿನ ಸಿರಪ್ ಕೂಡ ಇತ್ತು. ನಾಲ್ಕು ವರ್ಷದ ಬಾಲಕನೊಬ್ಬ ಸಿರಪ್ ಸೇವಿಸಿದ ನಂತರ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ.

ಅವಧಿ ಮೀರಿದ ಕೆಮ್ಮಿನ ಸಿರಪ್ ವಿತರಣೆ; ಮಕ್ಕಳು ಅಸ್ವಸ್ಥ

ಅವಧಿ ಮೀರಿದ ಕೆಮ್ಮಿನ ಸಿರಪ್ ವಿತರಣೆ -

Priyanka P
Priyanka P Sep 9, 2026 2:40 PM

ಲಖನೌ, ಸೆ.9: ಪ್ರವಾಹ ಪೀಡಿತ ಕುಟುಂಬಗಳಿಗೆ ಪರಿಹಾರ ನೆರವಿನ ಭಾಗವಾಗಿ ವಿತರಿಸಲಾದ ಕೆಮ್ಮಿನ ಸಿರಪ್ (Expired Cough Syrup) ಸೇವಿಸಿದ ನಂತರ ಮಕ್ಕಳು ಅಸ್ವಸ್ಥರಾದ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಸಿರಪ್ 2026ರ ಜುಲೈ ತಿಂಗಳಿಗೆ ಅವಧಿ ಮೀರಿರುವುದು ತಿಳಿದುಬಂದಿದೆ. ಈ ಘಟನೆಯು ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ರೋಗ ಭೀತಿಯಿಂದ ಇರುವ ಪ್ರವಾಹ ಪೀಡಿತ ನಿವಾಸಿಗಳು, ತಮಗೆ ವಿತರಿಸುತ್ತಿರುವ ಔಷಧಿಗಳ ಸುರಕ್ಷತೆಯನ್ನು ಪ್ರಶ್ನಿಸಿದ್ದಾರೆ.

ಸೋಮವಾರ (ಸೆ.7) ಮಧ್ಯಾಹ್ನ, ಆರೋಗ್ಯ ಇಲಾಖೆಯ ತಂಡವು ಮಾಯಾಪುರಂ ಪ್ರದೇಶಕ್ಕೆ ಆಗಮಿಸಿ ಸುಮಾರು 20 ಪ್ರವಾಹ ಪೀಡಿತ ಕುಟುಂಬಗಳಿಗೆ ಔಷಧಿಗಳನ್ನು ವಿತರಿಸಿತು. ಒದಗಿಸಲಾದ ಔಷಧಿಗಳಲ್ಲಿ ಅವಧಿ ಮೀರಿದ ಕೆಮ್ಮಿನ ಸಿರಪ್ ಕೂಡ ಇತ್ತು. ನಾಲ್ಕು ವರ್ಷದ ಬಾಲಕನೊಬ್ಬ ಸಿರಪ್ ಸೇವಿಸಿದ ನಂತರ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಅವನ ಸ್ಥಿತಿ ಹದಗೆಟ್ಟಾಗ, ಬಾಲಕನ ಕುಟುಂಬವು ಕೂಡಲೇ ಅವನನ್ನು ಹತ್ತಿರದ ಖಾಸಗಿ ವೈದ್ಯರ ಬಳಿಗೆ ಕರೆದೊಯ್ದಿತು. ಅಲ್ಲಿ ಚಿಕಿತ್ಸೆಯ ನಂತರ ಅವನ ಸ್ಥಿತಿ ಸುಧಾರಿಸಿತು.

ಅದೇ ರೀತಿ, ಮೂರು ವರ್ಷದ ಇಬ್ಬರು ಬಾಲಕರು ಕೂಡ ಔಷಧಿ ಮತ್ತು ಸಿರಪ್ ಸೇವಿಸಿದ ನಂತರ ಅಸ್ವಸ್ಥರಾದರು ಎಂದು ತಿಳಿದುಬಂದಿದೆ. ಮಕ್ಕಳ ಆರೋಗ್ಯ ಏರುಪೇರಾದ ನಂತರ ಜನರು ಭಯಭೀತರಾದರು. ನಂತರ ನಿವಾಸಿಗಳು, ಅವಧಿ ಮೀರಿದ ಸಿರಪ್ ಮತ್ತು ಇತರ ಔಷಧಿಗಳನ್ನು ಎಸೆದರು.

ನೇಪಾಳ ಭೀಕರ ಪ್ರವಾಹದಿಂದ ಶಾಲೆ ಧ್ವಂಸ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1,643 ಮಕ್ಕಳ ಪ್ರಾಣ

ಮಂಗಳವಾರ (ಸೆ.8) ಆರೋಗ್ಯ ಇಲಾಖೆಯ ತಂಡವು ಮಾಯಾಪುರಂಗೆ ಹಿಂತಿರುಗಿದ್ದು, ಔಷಧಿಗಳನ್ನು ವಿತರಿಸಿದ್ದಾರೆ. ಈ ವೇಳೆ ಪ್ರವಾಹ ಪೀಡಿತರು ಅವುಗಳನ್ನು ಸ್ವೀಕರಿಸಲು ನಿರಾಕರಿಸಿದರು. ಪರಿಹಾರವಾಗಿ ವಿತರಿಸಲಾಗುತ್ತಿರುವ ಔಷಧಿಗಳ ಗುಣಮಟ್ಟದ ಬಗ್ಗೆ ಜನರು ಪ್ರಶ್ನೆ ಮಾಡಿದ್ದು, ತಮ್ಮ ಮಕ್ಕಳ ಜೀವವನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡ ಆರೋಗ್ಯ ಇಲಾಖೆ ತಂಡವು, ಮಗುವಿನ ಚಿಕಿತ್ಸೆಗಾಗಿ ಹಣ ನೀಡಲು ಮುಂದಾಯಿತು. ಆದರೆ, ಕುಟುಂಬವು ಹಣ ಪಡೆಯಲು ನಿರಾಕರಿಸಿತು. ಮಗುವಿನ ಸ್ಥಿತಿ ಹದಗೆಟ್ಟರೆ ಅಥವಾ ಅವಧಿ ಮೀರಿದ ಸಿರಪ್ ಸೇವಿಸಿ ತನ್ನ ಪ್ರಾಣವನ್ನು ಕಳೆದುಕೊಂಡರೆ ಯಾರು ಜವಾಬ್ದಾರಿ? ಎಂದು ಪ್ರಶ್ನಿಸಿದರು.

ಪಾಂಡು ನದಿಯ ನೀರಿನ ಮಟ್ಟ ಏರಿಕೆಯಾಗುತ್ತಲೇ ಇರುವುದರಿಂದ, ಪ್ರವಾಹ ಪೀಡಿತ ಕುಟುಂಬಗಳು ಈಗಾಗಲೇ ತಮ್ಮ ಮನೆಗಳ ನಾಶ ಹಾಗೂ ಅನಾರೋಗ್ಯದ ಭೀತಿಯನ್ನು ಎದುರಿಸುತ್ತಿವೆ. ಪರಿಹಾರ ಕಾರ್ಯಗಳ ಭಾಗವಾಗಿ ಆಡಳಿತವು ಸುರಕ್ಷಿತ ಔಷಧಿಗಳನ್ನು ಒದಗಿಸುತ್ತದೆ ಎಂದು ನಿವಾಸಿಗಳು ನಿರೀಕ್ಷಿಸಿದ್ದರು. ಆದರೆ ಅವಧಿ ಮೀರಿದ ಔಷಧಿಗಳ ವಿತರಣೆಯು ಅವರ ಭಯವನ್ನು ಹೆಚ್ಚಿಸಿದ್ದು, ಮಾತ್ರವಲ್ಲದೆ ನಂಬಿಕೆಯನ್ನು ಕುಗ್ಗಿಸಿದೆ ಎಂದು ನಿವಾಸಿಗಳು ಹೇಳಿದ್ದಾರೆ.

ಇನ್ನು ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯ ವೈದ್ಯಾಧಿಕಾರಿ ಡಾ. ಹರಿದತ್ ನೇಮಿ, ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ನಾವು ಅದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.