ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೇಪಾಳ ಭೀಕರ ಪ್ರವಾಹದಿಂದ ಶಾಲೆ ಧ್ವಂಸ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1,643 ಮಕ್ಕಳ ಪ್ರಾಣ

Nepal floods: ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಭುವನ್ ತ್ರಿಶೂಲಿ ಶಾಲೆಯ ಶಿಕ್ಷಕರೊಬ್ಬರ ಸಮಯ ಪ್ರಜ್ಞೆಯಿಂದ ಸಾವಿರಾರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಹದ ಭೋರ್ಗೇರೆತಕ್ಕೆ ಶಾಲೆ ಕೊಚ್ಚಿಹೋಗುವ ಮೊದಲೇ 1,643 ಮಕ್ಕಳ ಪ್ರಾಣವನ್ನು ಶಿಕ್ಷಕ ಉಳಿಸಿದ್ದಾರೆ.

ನೇಪಾಳ ಪ್ರವಾಹ: ಶಾಲೆ ಧ್ವಂಸವಾಗುವ ಮೊದಲೇ ಮಕ್ಕಳ ಪ್ರಾಣ ಉಳಿಸಿದ ಶಿಕ್ಷಕ

ನೇಪಾಳ ಪ್ರವಾಹ. ಒಳಚಿತ್ರದಲ್ಲಿ ರಾಜೇಂದ್ರ ದವಾಡಿ -

Profile
Pushpa Kumari Aug 31, 2026 2:50 PM

ಕಠ್ಮಂಡು, ಆ. 31: ನೇಪಾಳದಲ್ಲಿ (Nepal Flood) ನಡೆದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ವ್ಯಾಪಕ ಪ್ರಾಣಹಾನಿ ಸಂಭವಿಸಿದೆ. ಸಾಕಷ್ಟು ಜನರು ಈ ಅಪಾಯದಿಂದ ಪಾರಾಗಲು ಹರಸಹಾಸ ಪಟ್ಟಿದ್ದಾರೆ. ಈ ನಡುವೆ ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಭುವನ್ ತ್ರಿಶೂಲಿ ಶಾಲೆಯಲ್ಲಿ ಶಿಕ್ಷಕರೊಬ್ಬರ ಸಮಯ ಪ್ರಜ್ಞೆಯಿಂದ ಸಾವಿರಾರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಹದ ಭೋರ್ಗರೆತಕ್ಕೆ ಶಾಲೆ ಕೊಚ್ಚಿಹೋಗುವ ಮೊದಲೇ 1,643 ಮಕ್ಕಳ ಪ್ರಾಣವನ್ನು ಶಿಕ್ಷಕ ಉಳಿಸಿದ್ದಾರೆ.

ಭೀಕರ ಹಠಾತ್ ಪ್ರವಾಹದಿಂದಾಗಿ ಇಡೀ ನೇಪಾಳವೇ ತತ್ತರಿಸಿಹೋಗಿದೆ. ವಿಪತ್ತು ಸಂಭವಿಸಿ ಕೆಲವು ದಿನ ಕಳೆದಿದ್ದರೂ, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲು ರಕ್ಷಣಾ ಸಿಬ್ಬಂದಿ ತೀವ್ರ ಹರಸಾಹಸ ಪಡುತ್ತಿದ್ದಾರೆ. ಈ ಪ್ರವಾಹದ ನಡುವೆ ರೋಚಕ ಘಟನೆಯೊಂದು ನಡೆದಿದ್ದು, ಶಿಕ್ಷಕರೊಬ್ಬರು 1,643 ಮಕ್ಕಳ ಜೀವ ಉಳಿಸಿರುವ ವಿಚಾರವೊಂದು ವೈರಲ್‌ ಆಗಿದೆ.

ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ರಾಜೇಂದ್ರ ದವಾಡಿ ಅವರಿಗೆ ಬೆಳಗ್ಗೆ 9.20ರ ವೇಳೆಗೆ ಸ್ನೇಹಿತರೊಬ್ಬರು ಕರೆ ಮಾಡಿದ್ದರು. ಅವರ ಸಮೀಪದ ಗ್ರಾಮವೊಂದು ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ರಾಜೇಂದ್ರ ದವಾಡಿ ಶಾಲಾ ಗಂಟೆಯನ್ನು ಬಾರಿಸಿ ಎಲ್ಲ ಶಿಕ್ಷಕರಿಗೆ ತರಗತಿಗಳನ್ನು ಖಾಲಿ ಮಾಡಲು ಸೂಚನೆಯನ್ನು ನೀಡಿದ್ದಾರೆ.

ವಿಡಿಯೊ ನೋಡಿ:



ಈ ಅಪಾಯ ಅರಿತು ಮಕ್ಕಳನ್ನು ಕೂಡಲೇ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು. ಶಾಲೆ ಖಾಲಿಯಾದ ಕೆಲವೇ ಹೊತ್ತಲ್ಲಿ ಬಂಡೆ, ಮಣ್ಣು, ಹಿಮಮಿಶ್ರಿತ ಪ್ರವಾಹದ ನುಗ್ಗಿದ್ದು, ಇಡೀ ಕಟ್ಟಡವೇ ದ್ವಂಸಗೊಂಡಿದೆ. ಮೂರು ಅಂತಸ್ತಿನ ಕಟ್ಟಡವು ನದಿಗಿಂತ ಸುಮಾರು 60 ಮೀಟರ್ ಎತ್ತರದ ಪ್ರದೇಶದಲ್ಲಿದ್ದರೂ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ

ʼʼಥೂ...ಎಷ್ಟು ಚೀಪ್‌ ಅನ್ನಿಸ್ತು ಎಂದ್ರೆ...ʼʼ; ಕಾರಿನಲ್ಲಿ ಊಟ ಮಾಡಿ ತಟ್ಟೆ ರಸ್ತೆಗೆ ಎಸೆದ ಕುಟುಂಬ

ಶಾಲೆಯ ಪ್ರಾಂಶುಪಾಲ ರಾಜೇಂದ್ರ ದವಾಡಿ ಅವರ ನಿರ್ಧಾರದಿಂದಾಗಿ 1,643 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಹಕ್ಕೆ ಸಿಲುಕಿ ಶಾಲೆಯ ಮೂರು ಅಂತಸ್ತಿನ ಭವ್ಯ ಕಟ್ಟಡ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಎಲ್ಲ ವಿದ್ಯಾರ್ಥಿಗಳು ಪಾರಾದರಾದರೂ, ಇಬ್ಬರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗಿನ ಉಪಹಾರಕ್ಕಾಗಿ ನದಿ ದಂಡೆಯಲ್ಲಿದ್ದ ತಮ್ಮ ಮನೆಗೆ ತೆರಳಿದ್ದ ಶಿಕ್ಷಕ ಹಾಗೂ ಶಾಲೆಯ ಬಾಗಿಲುಗಳನ್ನು ಮುಚ್ಚಲು ಹೋದ ಸೆಕ್ಯುರಿಟಿ ಗಾರ್ಡ್ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ನೇಪಾಳದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಸಾವಿನ ಸಂಖ್ಯೆ 734ಕ್ಕೆ ತಲುಪಿದೆ. 2,498 ಜನರು ಇನ್ನೂ ಕಾಣೆಯಾಗಿದ್ದಾರೆ. ಟಿಬೆಟ್‌ನಲ್ಲಿ 16 ಜನರು ಸಾವನ್ನಪ್ಪಿದ್ದು 546 ಜನರು ನಾಪತ್ತೆಯಾಗಿದ್ದಾರೆ.