#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Guillain-Barre Syndrome: ಹೆಚ್ಚಾಯ್ತು ಜಿಬಿಎಸ್‌ ಸಿಂಡ್ರೋಮ್‌ ಹಾವಳಿ; 5 ವರ್ಷದ ಬಾಲಕಿಯಲ್ಲಿ ಪತ್ತೆ

ಕರೋನಾ, ಎಚ್‌ಎಂಪಿವಿ ವೈರಸ್‌ ನಡುವೆ ಇದೀಗ ಜಿಬಿಎಸ್‌ ಸಿಂಡ್ರೋಮ್‌ನ ಹಾವಳಿ ಹೆಚ್ಚಾಗಿದ್ದು, ಈ ನಿಗೂಢ ಕಾಯಿಲೆ ಮೊದಲು ಮಹಾರಾಷ್ಟ್ರದಲ್ಲಿ ವರದಿಯಾಗಿತ್ತು. ಗುರುವಾರ (ಜ. 30) ಗುಯಿಲಿನ್ ಬಾರ್​ ಸಿಂಡ್ರೋಮ್​ಗೆ ತುತ್ತಾಗಿ ಪುಣೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದೀಗ ರಾಂಚಿಯಲ್ಲಿ 5 ವರ್ಷದ ಬಾಲಕಿ ಈ ಸಿಂಡ್ರೋಮ್‌ಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಜಿಬಿಎಸ್‌ ಸಿಂಡ್ರೋಮ್‌ ಹಾವಳಿ; 5 ವರ್ಷದ ಬಾಲಕಿಯಲ್ಲಿ ಪತ್ತೆ

Guillain-Barre Syndrome

Profile Deekshith Nair Jan 31, 2025 7:34 PM

ಮುಂಬೈ: ಕರೋನಾ(Corona) ಎಚ್‌ಎಂಪಿವಿ ವೈರಸ್‌ (HMPV Virus) ನಡುವೆ ಜಿಬಿಎಸ್‌ ಸಿಂಡ್ರೋಮ್‌ನ (Guillain-Barre Syndrome) ಹಾವಳಿ ಹೆಚ್ಚಾಗಿದೆ. ಈ ನಿಗೂಢ ಕಾಯಿಲೆ ಮೊದಲು ಮಹಾರಾಷ್ಟ್ರದಲ್ಲಿ ವರದಿಯಾಗಿತ್ತು. ಗುರುವಾರ (ಜ. 30) ಗುಯಿಲಿನ್ ಬಾರ್​ ಸಿಂಡ್ರೋಮ್​ಗೆ ತುತ್ತಾಗಿ ಪುಣೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದೀಗ ರಾಂಚಿಯಲ್ಲಿ5 ವರ್ಷದ ಬಾಲಕಿ ಈ ಸಿಂಡ್ರೋಮ್‌ಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಸದ್ಯ ಬಾಲಕಿಯನ್ನು ವೆಂಟಿಲೇಟರ್​ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಬಾಲಕಿಯನ್ನು ಪರಿಶೀಲಿಸುತ್ತಿರುವ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಯಾವುದೇ ಆತಂಕ ಇಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಆರಂಭಿಸಿದಲ್ಲಿ ಈ ರೋಗವನ್ನು ತಡೆಗಟ್ಟಬಹುದು ಎಂದಿದ್ದಾರೆ. ಗುಯಿಲಿನ್ ಬಾರ್ ಸಿಂಡ್ರೋಮ್​ಗೆ ಒಳಗಾದ ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ಮಕ್ಕಳ ತಜ್ಞ ಡಾ. ರಾಜೇಶ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, 8 ದಿನಗಳ ಹಿಂದೆ ದಂಪತಿ ಮಗುವನ್ನು ಕರೆ ತಂದಿದ್ದರು. ಈ ಸಂದರ್ಭದಲ್ಲಿ ಬಾಲಕಿ ಸ್ಥಿತಿ ಚಿಂತಾಜನಕವಾಗಿತ್ತು. ಆಕೆ ನಡೆಯಲು ಸಾಧ್ಯವಾಗದೇ, ಉಸಿರಾಡಲು ಕಷ್ಟಪಡುತ್ತಿದ್ದಳು. ತಕ್ಷಣಕ್ಕೆ ಬಾಲಕಿಗೆ ಐವಿಐಜಿ ನೀಡಿ ವೆಂಟಿಲೇಟರ್​ ಚಿಕಿತ್ಸೆಗೆ ಒಳಪಡಿಸಿ, ಚಿಕಿತ್ಸೆ ಆರಂಭಿಸಲಾಯಿತು. ಸದ್ಯ ಬಾಲಕಿ ಸ್ಥಿತಿ ಉತ್ತಮವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾರೆ.



ಗುಯಿಲಿನ್ ಬಾರ್ ಸಿಂಡ್ರೋಮ್ ಲಕ್ಷಣಗಳು

ಸದ್ಯ ಈ ಗುಯಿಲಿನ್ ಬಾರ್ ಸಿಂಡ್ರೋಮ್ ರೋಗಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ತಿಳಿದಿಲ್ಲ.ಇದು ಸೋಂ ಕಿನಿಂದ ಹರಡುತ್ತದೆ. ದೇಹದ ಪ್ರತಿರೋಧಕದ ಮೇಲೆ ದಾಳಿ ಮಾಡುತ್ತದೆ. ಇದು ನರವನ್ನು ಸಡಿಲಗೊಳಿಸುತ್ತದೆ. ಇದರ ಮೊದಲ ಲಕ್ಷಣವೆಂದರೆ ಅಂಗೈ ಮತ್ತು ಪಾದ ಜುಮ್ಮೆನಿಸುತ್ತದೆ. ಬಳಿಕ ಇದು ವೇಗವಾಗಿ ಹರಡಿ, ಪಾರ್ಶ್ವವಾಯುಗೂ ಕಾರಣವಾಗುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ವ್ಯಕ್ತಿಯ ಸೋಂಕಿನ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು.

ಈ ಸುದ್ದಿಯನ್ನೂ ಓದಿ:HMPV Virus: ಮತ್ತೆ ಶುರುವಾಯಿತು ಎಚ್‌ಎಂಪಿವಿ ಹಾವಳಿ; 4 ವರ್ಷದ ಬಾಲಕನಲ್ಲಿ ವೈರಸ್‌ ಪತ್ತೆ

ಮುಖ್ಯ​​ ಲಕ್ಷಣ: ಅತಿಸಾರ, ಹೊಟ್ಟೆ ನೋವು, ಜ್ವರ ಮತ್ತು ವಾಂತಿ. ಇದು ಕಲುಷಿತ ನೀರು ಮತ್ತು ಆಹಾರದಿಂದ ರೋಗ ಹರಡುತ್ತದೆ.

ಮುನ್ನೆಚ್ಚರಿಕೆ ವಹಿಸಿ: ಕಾಯಿಸಿ, ಆರಿಸಿದ ನೀರು ಸೇವನೆ. ಸುರಕ್ಷಿತ ಆಹಾರ ಸೇವನೆ ಅಗತ್ಯ. ಸ್ನಾಯು ಬಳಲಿಕೆ ಕಂಡು ಬಂದರೆ, ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಬೇಕು.