ಮಧ್ಯರಾತ್ರಿ ಬಾಲ್ಕನಿಯಲ್ಲಿ ಲಾಕ್ ಆದ ಯುವಕರ ರಕ್ಷಣೆಗೆ ಬಂದ ಬ್ಲಿಂಕ್‌ಇಟ್ ಡೆಲಿವರಿ ಬಾಯ್
ಪುಣೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಯುವಕರ ಗುಂಪೊಂದು ಅಜಾಗರೂಕತೆಯಿಂದ ತಮ್ಮದೇ ಮನೆಯ ಬಾಲ್ಕನಿಯಲ್ಲಿ ಲಾಕ್ ಆಗಿ ಇಡೀ ರಾತ್ರಿ ಸಿಲುಕಿಕೊಂಡಿದ್ದಾರೆ. ಬಳಿಕ ಬ್ಲಿಂಕ್‌ಇಟ್ ಡೆಲಿವರಿ ಬಾಯ್ ಬಂದು ರಕ್ಷಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಬಾಲ್ಕನಿಯಲ್ಲಿ ಲಾಕ್ ಆದ ಯುವಕರು -
ಮುಂಬೈ, ಜ. 6: ಯುವಕರ ಗುಂಪೊಂದು ತಮ್ಮದೇ ಮನೆಯ ಬಾಲ್ಕನಿಯಲ್ಲಿ ಆಕಸ್ಮಿಕವಾಗಿ ಲಾಕ್ ಆಗಿ ಇಡೀ ರಾತ್ರಿ ಕಳೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್ ಬಳಕೆದಾರ ಮಿಹಿರ್ ಗಾಹುಕರ್ (Mihir Gahukar) ಇದರ ವಿಡಿಯೊ ಹಂಚಿಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆ ವಿಡಿಯೊದ ಶೀರ್ಷಿಕೆಯಲ್ಲಿ “ನಮ್ಮದೇ ಮನೆಯ ಬಾಲ್ಕನಿಯಲ್ಲಿ ರಾತ್ರಿ 3 ಗಂಟೆ ಹೊತ್ತಿನಲ್ಲಿ ಲಾಕ್ ಆಗಿಬಿಟ್ಟೆವು, ಆಗ ನಾವು ಹೀಗೆ ಮಾಡಿದೆವು” ಎಂದು ಬರೆಯಲಾಗಿದೆ. ಅದಾದ ಬಳಿಕ ಆ ವಿಡಿಯೊ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಅಚ್ಚರಿ ಮತ್ತು ನಗುವಿನಲ್ಲೂ ಮುಳುಗುವಂತೆ ಮಾಡಿದೆ.
ಮಧ್ಯ ರಾತ್ರಿಯಲ್ಲಿ ಬಾಲ್ಕನಿಯಲ್ಲಿ ಸಿಲುಕಿದ್ದ ಸ್ನೇಹಿತರು ದೊಡ್ಡ ಸಮಸ್ಯೆ ಎದುರಿಸಿದ್ದರು. ಮನೆಯೊಳಗೆಯೇ ನಿದ್ರಿಸುತ್ತಿದ್ದು ಪೋಷಕರಿಗೂ, ಈ ವಿಷಯ ಗೊತ್ತಿರಲಿಲ್ಲ. ಯುವಕರಿಗೆ ಬಾಗಿಲು ತೆಗೆಯಲು ಯಾವುದೇ ಮಾರ್ಗವಿರಲಿಲ್ಲ ಮತ್ತು ಎಲ್ಲರೂ ಎದ್ದುಬಿಡುತ್ತಾರೋ ಅಪಾಯವೂ ಇತ್ತು. ಇಂತಹ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಗಾಬರಿಯಾಗುವುದು ಸಹಜ. ಆದರೆ ಆ ಯುವಕತು ಶಾಂತವಾಗಿದ್ದು, ಯೋಚಿಸಿ ಉಪಾಯವೊಂದನ್ನು ಮಾಡಿದ್ದಾರೆ.
ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು
ದೇವರಂತೆ ರಕ್ಷಣೆಗೆ ಬ್ಲಿಂಕ್‌ಇಟ್ ಡಿಲಿವರಿ ಬಾಯ್!
ಈ ಯುವಕರು ನೆರೆಹೊರೆಯವರನ್ನು ಅಥವಾ ತುರ್ತು ಸೇವೆಗಳಿಗೆ ಕರೆ ಮಾಡುವ ಬದಲು ಹತ್ತಿರದಲ್ಲೇ ಇದ್ದ ಬ್ಲಿಂಕ್‌ಇಟ್ ಡೆಲಿವರಿ ಬಾಯ್‌ನನ್ನು ರಕ್ಷಣೆಗಾಗಿ ಸಂಪರ್ಕಿಸಿದ್ದಾರೆ. ವಿಡಿಯೊದಲ್ಲಿ ಸ್ನೇಹಿತರಲ್ಲೊಬ್ಬ ಡೆಲಿವರಿ ಬಾಯ್‌ಗೆ ಫೋನ್‌ನಲ್ಲಿ ಪರಿಸ್ಥಿತಿಯನ್ನು ನಿಧಾನವಾಗಿ ವಿವರಿಸುತ್ತ, ಹಂತ ಹಂತವಾಗಿ ಮಾರ್ಗದರ್ಶನ ನೀಡುತ್ತಿರುವುದು ಕಾಣಿಸಿದೆ. ಸ್ಪೇರ್ ಕೀ ಎಲ್ಲಿದೆ, ಮೇನ್ ಡೋರ್ ಅನ್ನು ಹೇಗೆ ನಿಶ್ಶಬ್ದವಾಗಿ ತೆರೆಯಬೇಕು, ಯಾರಿಗೂ ತಿಳಿಯದಂತೆ ಬಾಲ್ಕನಿಯವರೆಗೆ ಹೇಗೆ ಬರಬೇಕು ಎಂಬುದನ್ನು ಯುವಕರ ಸ್ಪಷ್ಟವಾಗಿ ವಿವರಿಸಿದ್ದಾರೆ. ಡೆಲಿವರಿ ಬಾಯ್ ಸಹ ಎಲ್ಲ ಸೂಚನೆಗಳನ್ನು ಶಾಂತವಾಗಿ ಕೇಳಿ, ಪ್ರತಿಯೊಂದು ಅತ್ಯಂತ ನಾಜೂಕಿನಿಂದ ಅನುಸರಿಸಿದ್ದಾನೆ.
ವಿಡಿಯೊ ಇಲ್ಲಿದೆ:
ಕೊನೆಗೂ ಬ್ಲಿಂಕ್‌ಇಟ್ ಡೆಲಿವರಿ ಬಾಯ್ ಆ ಯುವಕರ ಮನೆಗೆ ಪ್ರವೇಶಿಸಿ ಬಾಲ್ಕನಿಯ ಕಡೆಗೆ ಹೋಗುತ್ತಿರುವುದು ವಿಡಿಯೊದಲ್ಲಿ ಕಾಣುತ್ತದೆ. ಡೆಲಿವರಿ ಬಾಯ್ ಬಾಲ್ಕನಿಗೆ ಬಂದ ಕ್ಷಣದಲ್ಲೇ, ಅಲ್ಲಿದ್ದ ಸ್ನೇಹಿತರೆಲ್ಲ ಜೋರಾಗಿ ನಗುತ್ತಾ, ನಿರಾಳರಾಗಿದ್ದಾರೆ. ಅಂದು ಕಳೆದ ಆ ರೋಚಕ ರಾತ್ರಿಯು, ಯುವಕರ ಜೀವನದ ಎಂದೂ ಮರೆಯಲಾಗದ ಕ್ಷಣವಾಗಿ ಮಾರ್ಪಟ್ಟಿತು.
ನೆಟ್ಟಿಗರಿಂದ ಭಾರೀ ರಿಸ್ಪಾನ್ಸ್
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊಗೆ ಕಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. ಆ ಡೆಲಿವರಿ ಬಾಯ್ ಮನೆಗೆ ಬಂದಾಗ ಪೋಷಕರು ಎದ್ದಿದ್ದರೆ ಎಷ್ಟು ಮಜವಾಗಿರುತ್ತಿತ್ತು ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಆ ಡೆಲಿವರಿ ಬಾಯ್‌ನ ಸಹಾಯ ಮಾಡುವ ಮನೋಭಾವ ಮತ್ತು ಶಾಂತ ಸ್ವಭಾವವನ್ನು ಶ್ಲಾಘಿಸಿದ್ದಾರೆ.