ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಬಾಹ್ಯಾಕಾಶದಲ್ಲಿದ್ದಾಗ ಸುನಿತಾ ವಿಲಿಯಮ್ಸ್‌ ಸಂಬಳ ಎಷ್ಟಿತ್ತು ಗೊತ್ತಾ? ಇಲ್ಲಿದೆ ಮಾಹಿತಿ

ಸುನಿತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಲು ಕೋಟಿಗಟ್ಟಲೆ ವೇತನ ಪಡೆದಿದ್ದಾರೆ ಎಂಬ ವಿಷಯದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಬಾಹ್ಯಾಕಾಶದಲ್ಲಿದ್ದಾಗ ಸುನಿತಾ ವಿಲಿಯಮ್ಸ್‌ ಪಡೆದ ಸಂಬಳದ ಮಾಹಿತಿ ಇಲ್ಲಿದೆ.

ಬಾಹ್ಯಾಕಾಶದಲ್ಲಿದ್ದಾಗ ಸುನಿತಾ ವಿಲಿಯಮ್ಸ್‌  ಪಡೆದ ಸಂಬಳ ಎಷ್ಟು ಗೊತ್ತಾ?

ಸುನಿತಾ ವಿಲಿಯಮ್ಸ್

Profile Vishakha Bhat Mar 19, 2025 4:18 PM

ವಾಷಿಂಗ್ಟನ್‌: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದು, ಈಗ ಭೂಮಿಗೆ ಮರಳಿದ್ದಾರೆ. ಮಾ.19ರ ಅಂದ್ರೆ ಇಂದು ಮುಂಜಾನೆ 3.27ಕ್ಕೆ ಅವರು ಭೂಮಿ ತಲುಪಿದ್ದು, ಸುನೀತಾ ವಿಲಿಯಮ್ಸ್‌ ಜೊತೆ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಕೂಡ ಜೂನ್ 2024 ರಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ISS) ಸಿಲುಕಿಕೊಂಡಿದ್ದರು. ಶನಿವಾರ ರಾತ್ರಿ ಬದಲಿ ಸಿಬ್ಬಂದಿ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದ ನಂತರ, ಅನುಭವಿ ಗಗನಯಾತ್ರಿಗಳಾದ ವಿಲ್ಮೋರ್ ಮತ್ತು ವಿಲಿಯಮ್ಸ್ ಮತ್ತು ಇತರ ಇಬ್ಬರು ಗಗನಯಾತ್ರಿಗಳು ಮಂಗಳವಾರ ಬೆಳಿಗ್ಗೆ 1:05 AM ET (0505 GMT) ಕ್ಕೆ ISS ನಿಂದ 17 ಗಂಟೆಗಳ ಪ್ರಯಾಣದ ಬಳಿಕ ಅವರು ಭೂಮಿಯನ್ನು ತಲುಪಿದ್ದಾರೆ.

ಹೌದು ಕಳೆದ 9 ತಿಂಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದರು. ತಾಂತ್ರಿಕ ಸಮಸ್ಯೆಯಿಂದ ಅವರು ಭೂಮಿಗೆ ಬರಲು ಸಾಧ್ಯವಾಗಿರಲಿಲ್ಲ. ಕಡೆಗೂ ಅವರ ಬಾಹ್ಯಾಕಾಶ ವಾಸ ಮುಗಿದಿದ್ದು ಭೂಮಿಗೆ ಸುರಕ್ಷಿತವಾಗಿ ವಾಪಾಸಾಗಿದ್ದಾರೆ. ಹೌದು ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ 8 ದಿನಗಳ ಪರೀಕ್ಷಾ ಕಾರ್ಯಾಚರಣೆಗಾಗಿ ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಆದರೆ ತಾಂತ್ರಿಕ ದೋಷದಿಂದಾಗಿ ಅಲ್ಲಿ ಸಿಲುಕಿಕೊಂಡರು. ಅವರನ್ನು ಬಾಹ್ಯಾಕಾಶದಿಂದ ಮರಳಿ ಕರೆತರಲು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ವಿಮಾನವನ್ನು ಕಳುಹಿಸಲಾಯಿತು. ಕ್ರೂ-10ರ ಬಾಹ್ಯಾಕಾಶ ವಿಜ್ಞಾನಿಗಳು ಅವರಿಬ್ಬರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮಧ್ಯೆ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಲು ಕೋಟಿಗಟ್ಟಲೆ ವೇತನ ಪಡೆದಿದ್ದಾರೆ ಎಂಬ ವಿಷಯದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಹಾಗಾದ್ರೆ ಸುನಿತಾ ಬಾಹ್ಯಾಕಾಶದಲ್ಲಿದ್ದಾಗ ಪಡೆದ ಸಂಬಳ ಎಷ್ಟು?ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಅವರಿಗೆ ಎಷ್ಟು ಡಾಲರ್ ನೀಡುತ್ತದೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ನಾಸಾದ ಅತ್ಯುನ್ನತ ಜಿಎಸ್‌-15 ವೇತನ ಶ್ರೇಣಿ ಅಡಿಯಲ್ಲಿ ಹೊಂದಿರುವ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್‌ಮೋರ್‌ ಅವರು ಬರಲಿದ್ದು, ಸರಕಾರಿ ನೌಕರರಾಗಿರುವ ಇವರಿಗೆ ವಾರ್ಷಿಕ ವೇತನವಾಗಿ 1.08 ಕೋಟಿ ರೂ.ಗಳಿಂದ 1.41 ಕೋಟಿ ರೂ.ವರೆಗೆ ಪಡೆದಿದ್ದಾರೆ ಎನ್ನಲಾಗಿದೆ.

ಅಲ್ಲದೇ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ದಲ್ಲಿ 9 ತಿಂಗಳು ಹೆಚ್ಚುವರಿಯಾಗಿ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಸುನಿತಾ, ಬುಚ್‌ ಅವರಿಗೆ ಹೆಚ್ಚುವರಿಯಾಗಿ ಕೇವಲ 1 ಲಕ್ಷ ರೂ.ವರೆಗೆ (1,148 ಡಾಲರ್‌) ನೀಡಬಹುದು ಎಂದು ನಾಸಾದ ನಿವೃತ್ತ ಗಗನಯಾತ್ರಿ ಕ್ಯಾಡಿ ಕೋಲ್‌ಮನ್‌ ಅವರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Sunita Williams: 260 ದಿನಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್; 'ದೇವರ ಕೃಪೆ' ಎಂದ ಆರ್. ಮಾಧವನ್

ಇನ್ನು NASA ಗಗನಯಾತ್ರಿಗಳಿಗೆ ಓವರ್‌ಟೈಮ್ ಸಂಬಳ ನೀಡುವ ನಿಯಮ ಇರುವುದಿಲ್ಲ ಎಂದು ನಿವೃತ್ತ NASA ಗಗನಯಾತ್ರಿ ಕ್ಯಾಡಿ ಕೋಲ್‌ಮನ್‌ ಹೇಳಿದ್ದು. ಗಗನಯಾತ್ರಿಗಳ ಸಂಬಳವು ಸಾಮಾನ್ಯ ಫೆಡರಲ್ ಉದ್ಯೋಗಿಗಳಂತೆ ಇರುತ್ತದೆ. ಅವರ ಆಹಾರ, ವಸತಿ ಮತ್ತು ಸಾರಿಗೆಯ ವೆಚ್ಚವನ್ನು NASA ಸಂಪೂರ್ಣವಾಗಿ ಭರಿಸುತ್ತದೆ. ಆದರೆ, ಪ್ರತಿದಿನದ ಸಣ್ಣ ಖರ್ಚುಗಳಿಗಾಗಿ (ಇನ್ಸಿಡೆಂಟಲ್ ಅಲೌವೆನ್ಸ್) ಕೇವಲ $4 (ಸುಮಾರು ₹347) ಮಾತ್ರ ಭತ್ಯೆಯಾಗಿ ಸಿಗುತ್ತದೆ ಎಂದು ಹೇಳಿದ್ದಾರೆ.