Holi 2025: ಹೋಳಿ ಬಣ್ಣ ತೆಗೆಯಬೇಕೆ? ಇಲ್ಲಿದೆ ಟಿಪ್ಸ್!
ಹೋಳಿ ಆಡಿದ ಮೇಲೆ ಬಣ್ಣ ತ್ವಚೆ ಹಾಗೂ ಕೂದಲಿಗೆ ತಾಗಿ ಅಲರ್ಜಿ, ತರಿಕೆ, ಚರ್ಮದ ಕಿರಿಕಿರಿಯಂಥವು ಕಾಣ ಬಹುದು. ಆದರೆ ಹೋಗದೆ ಹಠ ಮಾಡುವ ಬಣ್ಣಗಳನ್ನು ಸುರಕ್ಷಿತವಾಗಿ ತೆಗೆಯುವುದು ಹೇಗೆ? ಹೆಚ್ಚು ರಾಸಾ ಯನಿಕಗಳನ್ನು ಬಳಸಿದಷ್ಟೂ ಚರ್ಮಕ್ಕೆ ಇನ್ನಷ್ಟು ಹಾನಿ ಯಾಗುತ್ತದೆ. ಈ ವಿಷಯದಲ್ಲಿ ನಮ್ಮ ಅಡುಗೆಮನೆಯ ಕೆಲವು ವಸ್ತುಗಳು ಉಪಯುಕ್ತ ನೆರವು ನೀಡಬಲ್ಲವು.


ನವದೆಹಲಿ: ಹೋಳಿ (Holi 2025) ಆಡಿದ ಮೇಲೆ ಆ ಬಣ್ಣವನ್ನು ತೆಗೆ ಯುವುದು ಒದ್ದಾಟದ ಕೆಲಸ. ಹಾಗೆಂದು ಆ ಬಣ್ಣವನ್ನು ಮೋರೆಯೆಲ್ಲಾ ಬಳಿದುಕೊಂಡು, ಕೆಂಪು ಕೋತಿಯಂಥ ಮುಖವರ್ಣಿಕೆಯಲ್ಲಿ ದಿನಗಟ್ಟಲೆ ಊರೆಲ್ಲ ಸುತ್ತುವುದು ಇಷ್ಟವಾಗುವ ಸಂಗತಿಯಲ್ಲ. ಜೊತೆಗೆ, ಅಲರ್ಜಿ, ತರಿಕೆ, ಚರ್ಮದ ಕಿರಿಕಿರಿಯಂಥವು ಕಾಣಬಹುದು. ಆದರೆ ಹೋಗದೆ ಹಠ ಮಾಡುವ ಬಣ್ಣಗಳನ್ನು ಸುರಕ್ಷಿತವಾಗಿ ತೆಗೆಯುವುದು ಹೇಗೆ? ಹೆಚ್ಚು ರಾಸಾಯನಿಕಗಳನ್ನು ಬಳಸಿದಷ್ಟೂ ಚರ್ಮಕ್ಕೆ ಇನ್ನಷ್ಟು ಹಾನಿ ಯಾಗು ತ್ತದೆ. ಈ ವಿಷಯದಲ್ಲಿ ನಮ್ಮ ಅಡುಗೆಮನೆಯ ಕೆಲವು ವಸ್ತುಗಳು ಉಪ ಯುಕ್ತ ನೆರವು ನೀಡಬಲ್ಲವು.
ಕೊಬ್ಬರಿ ಎಣ್ಣೆ: ಬಣ್ಣಗಳನ್ನು ತೆಗೆಯುವುದರಲ್ಲಿ ಮತ್ತು ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ಕಾಪಾಡುವು ದರಲ್ಲಿ ಕೊಬ್ಬರಿ ಎಣ್ಣೆ ನಂಬರ್ 1! ಚರ್ಮ ದ ಒಳಗೆ ಪ್ರವೇಶಿಸಿ ಕಾಡುವ ಬಣ್ಣದ ಸೂಕ್ಷ್ಮ ಕಣಗಳನ್ನು ತೆಗೆದು ಚರ್ಮದ ಕೋಶಗಳಿಗೆ ಅಗತ್ಯವಾದ ಆರೈಕೆಯನ್ನು ಈ ಎಣ್ಣೆ ನೀಡುತ್ತದೆ. ತ್ವಚೆಯ ತೇವವನ್ನು ಹೆಚ್ಚಿಸಿ, ಯಾವು ದೇ ಹಾನಿಯಾಗುವುದನ್ನು ತಡೆಯುತ್ತದೆ. ಸಾಮಾನ್ಯ ವಾಗಿ ಯಾವುದೇ ಬಣ್ಣಗಳನ್ನಾದರೂ ಈ ಎಣ್ಣೆ ಕ್ಷಿಪ್ರವಾಗಿ ಕರಗಿಸಿ ಬಿಡಿಸಬಲ್ಲದು. ಬಣ್ಣದೋಕುಳಿ ಆಡುವುದಕ್ಕೆ ಮುನ್ನ ಚರ್ಮಕ್ಕೆ ಢಾಳಾಗಿ ಕೊಬ್ಬರಿ ಎಣ್ಣೆಯನ್ನು ಲೇಪಿಸಿಕೊಳ್ಳುವುದು ಉತ್ತಮ ಮಾರ್ಗ.
ನಿಂಬೆರಸ: ಹಠಮಾರಿ ಬಣ್ಣಗಳನ್ನು ಒದ್ದೋಡಿಸುವುದಕ್ಕೆ ನಿಂಬೆರಸವೂ ಒಳ್ಳೆಯ ಉಪಾಯ. ಇದರಲ್ಲಿರುವ ನೈಸರ್ಗಿಕ ಆಮ್ಲೀಯ ಅಂಶಗಳು ಬಣ್ಣ ತೆಗೆಯುತ್ತವೆ. ಇದನ್ನು ಚರ್ಮದ ಮೇಲೆ ಸ್ವಲ್ಪವೇ ಹಾಕಿ ನಯವಾಗಿ ಮಸಾ ಜ್ ಮಾಡಿದರೆ ಸಾಕಾದೀತು. ಮುಖದ ಚರ್ಮಕ್ಕೆ ಇದನ್ನು ಬಳಸಿದರೆ ಕೊಂಚ ಕಠೋರವಾಗಬಹುದು; ಹಾಗಾಗಿ ಮುಖಕ್ಕೆ ಬೇಡ. ಆದರೆ ದೇಹದ ಉಳಿದೆಡೆ ಇದನ್ನು ಅಲ್ಪ ಪ್ರಮಾಣದಲ್ಲಿ ಬಳಸಬಹುದು. ಒಂದೊಮ್ಮೆ ಬಟ್ಟೆ ಗೆ ಅಂಟಿರುವ ಬಣ್ಣ ಹೋಗದಿದ್ದರೆ, ಅದಕ್ಕೂ ನಿಂಬೆರಸ ಹಾಕಿ ಉಜ್ಜಿ ತೊಳೆದರೆ ಬಟ್ಟೆಗಳೂ ಬಣ್ಣದಿಂದ ಮುಕ್ತಿ ಪಡೆಯುತ್ತವೆ.
ಅಲೊವೆರಾ: ಬಹಳಷ್ಟು ಮನೆಗಳಲ್ಲಿ ಸಣ್ಣದೊಂದು ಕುಂಡದಲ್ಲಿ ಇದ್ದಿರ ಬಹುದು ಲೋಳೆಸರ. ಇದರ ಒಳಗಿನ ಲೋಳೆಯಂಥ ಅಥವಾ ಜೆಲ್ ಅಂಶವನ್ನು ಚರ್ಮಕ್ಕೆ ಧಾರಾಳವಾಗಿ ಹಾಕಿ ನಯವಾಗಿ ಮಸಾಜ್ ಮಾಡಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬಿಸಿ ನೀರಿ ನಿಂದ ತೊಳೆಯಿರಿ. ಚರ್ಮಕ್ಕೆ ಯಾವುದೇ ಕಿರಿಕಿರಿ ಆಗದಂತೆ ಜೋಪಾ ನವಾಗಿ ಬಣ್ಣ ವನ್ನು ಸೂಕ್ಷ್ಮ ರಂಧ್ರಗಳಿಂದ ಬಿಡಿಸುವ ಕೆಲಸವನ್ನಿದು ಮಾಡುತ್ತದೆ. ಒಂದೊಮ್ಮೆ ಲೋಳೆಸರ ಇಲ್ಲದಿದ್ದರೆ, ರಾಸಾಯನಿಕಗಳು ಸೇರದ ಶುದ್ಧ, ನೈಸರ್ಗಿಕ ಅಲೋವೇರಾ ಜೆಲ್ ಮಾರುಕಟ್ಟೆಯಲ್ಲಿ ದೊರೆತರೆ, ಅದನ್ನೂ ಉಪಯೋಗಿಸಬಹುದು.
ಇತರ ತೈಲಗಳು: ಯಾವುದೇ ರಾಸಾಯನಿಕಗಳಿಲ್ಲದ ಸಾಸಿವೆ ಎಣ್ಣೆ ಅಥವಾ ಆಲಿವ್ ಎಣ್ಣೆಯೂ ಹೋಗ ಲೊಲ್ಲದ ಬಣ್ಣಗಳನ್ನು ಚರ್ಮದಿಂದ ಬಿಡಿಸಬಲ್ಲವು. ಬಣ್ಣ ಅಂಟಿಕೊಂಡಿರುವ ಭಾಗಕ್ಕೆ ಸಾಸಿವೆ ಎಣ್ಣೆ/ ಆಲಿವ್ ಎಣ್ಣೆಯನ್ನು ಹಾಕಿ ನಯವಾಗಿ ಮಸಾಜ್ ಮಾಡಿ, ಉಗುರು ಬಿಸಿ ನೀರಿನಿಂದ ತೊಳೆಯಿರಿ. ಚರ್ಮಕ್ಕೆ ಬೇಕಿರುವ ತೇವವನ್ನು ನೀಡಿ, ಬಣ್ಣವನ್ನು ತೆಗೆದು, ತ್ವಚೆಯನ್ನು ಹೊಳಪಾಗಿಸಿ ಮೃದುವಾಗಿಸಬಲ್ಲವು ಈ ತೈಲಗಳು.
ಮೊಸರು: ಮಜ್ಜಿಗೆ ಅಥವಾ ಮೊಸರಿನಲ್ಲಿರುವ ನೈಸರ್ಗಿಕ ಹುಳಿಯಂಶವು ಬಣ್ಣಗಳನ್ನು ಕರಗಿಸಲು ನೆರವಾಗುತ್ತದೆ. ಜೊತೆಗೆ ಜಿಡ್ಡಿನಂಶವು ಚರ್ಮಕ್ಕೆ ಬೇಕಾದ ತೇವವನ್ನು ನೀಡುತ್ತದೆ. ಬಣ್ಣದ ಕಲೆಯಾಗಿರುವ ಚರ್ಮದ ಭಾಗ ಕ್ಕೆ ಗಟ್ಟಿ ಮೊಸರನ್ನು ಧಾರಾಳವಾಗಿ ಲೇಪಿಸಿ ಹತ್ತಾರು ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬಿಸಿ ನೀರಿ ನಿಂದ ತೊಳೆಯಿರಿ. ಇದರಿಂದ ಚರ್ಮಕ್ಕೆ ಅಗತ್ಯವಾಗ ಪೋಷಣೆಯೂ ದೊರೆಯುತ್ತದೆ.
ಇದನ್ನು ಓದಿ: Holi 2025: ಬೆರೆತು ಬಾಳುವ ಸಂದೇಶವನ್ನು ನೀಡುವ ಹೋಳಿ ಹಬ್ಬ!
ಸೈಂಧವ ಲವಣ: ಈ ಉಪ್ಪನ್ನು ನುಣ್ಣನೆಯ ಪುಡಿ ಮಾಡಿ ತೆಂಗಿನೆಣ್ಣೆಯ ಜೊತೆಗೆ ಸೇರಿಸಿ, ಸ್ಕ್ರಬ್ ಮಾಡಬಹುದು. ಇದನ್ನು ಮಾಡುವಾಗ ಕೆಲವು ಹನಿ ಎಸೆನ್ಶಿಯಲ್ ಆಯಿಲ್‌ಗಳಲ್ಲಿ ಯಾವುದನ್ನಾದರೂ ಒಂದೆರಡು ಹನಿ ಸೇರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಆದರೆ ಮುಖಕ್ಕಿಂತ ಕೈ-ಕಾಲುಗಳಿಗೆ ಸೂಕ್ತವಾದ ಸ್ಕ್ರಬ್ ಇದು. ದೇಹದ ಉಳಿದೆಡೆಗಾದರೂ ಬಳಸುವಾಗ ನಾಜೂಕಿರಲಿ. ಇದನ್ನು ತೆಂಗಿನೆಣ್ಣೆಯ ಬದಲು ನಿಂಬೆರಸದೊಂದಿಗೆ ಸೇರಿಸಿ, ವಸ್ತ್ರಗಳ ಕಲೆ ತೆಗೆಯಲು ಸಹ ಉಪಯೋಗಿಸಬಹುದು.