ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jaguar fighter jet crash: ಜಾಗ್ವಾರ್ ಫೈಟರ್ ಜೆಟ್ ಪತನ, ವಾಯುಪಡೆಯ ಪೈಲಟ್ ದುರ್ಮರಣ

Jaguar fighter jet crash: ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್ ಜೆಟ್ ವಿಮಾನವೊಂದು ಗುಜರಾತ್ ನ ಜಾಮ್ ನಗರದ ಬಳಿಯ ಸುವರ್ಧಾ ಎಂಬ ಹಳ್ಳಿಯ ಹೊರವಲಯದಲ್ಲಿ ಅಪಘಾತಕ್ಕೀಡಾಗಿದೆ. ಎಂದಿನಂತೆ ಈ ವಿಮಾನವನ್ನು ತರಬೇತಿಗಾಗಿ ಇಬ್ಬರು ಪೈಲಟ್ ಗಳು ಕೊಂಡೊಯ್ದಿದ್ದರು. ಆದರೆ, ಆಕಾಶದಲ್ಲಿ ಹಾರಾಡುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಯುದ್ಧ ವಿಮಾನ ಪತನ; ಪೈಲಟ್‌ ಧಾರುಣ ಸಾವು

ವಿಮಾನ ಪತನದ ದೃಶ್ಯ

Profile Sushmitha Jain Apr 3, 2025 12:18 PM

ನವದೆಹಲಿ: ಗುಜರಾತ್‌ನ ಜಾಮ್‌ನಗರ(Gujarat's Jamnagar)ದಲ್ಲಿ ಬುಧವಾರ ರಾತ್ರಿ ನಡೆದ ದುರ್ಘಟನೆಯೊಂದರಲ್ಲಿ ಜಾಗ್ವಾರ್ ಫೈಟರ್ ಜೆಟ್ ಪತನ(Jaguar fighter jet crashed) ಗೊಂಡಿದ್ದು, ವಾಯುಪಡೆಯ ಪೈಲಟ್‌ ಮೃತಪಟ್ಟಿದ್ದಾರೆ. ಮತ್ತೋರ್ವ ಪೈಲಟ್‌ಗೆ ಗಂಭೀರವಾದ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಾಯುಪಡೆಯು, “ಫೈಟರ್‌ ಜೆಟ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಬಳಿಕ ಪೈಲಟ್‌ಗಳು ವಿಮಾನವನ್ನು ಜನವಸತಿ ಪ್ರದೇಶ ಹಾಗೂ ವಾಯುಪಡೆಯ ನೆಲೆಯಿಂದ ದೂರ ಕೊಂಡೊಯ್ದಿದ್ದಾರೆ. ಬಳಿಕ, ಜೆಟ್‌ನಿಂದ ಹೊರ ಬರಲು ಯತ್ನಿಸಿದ್ದಾರೆ” ಎಂದಿದೆ. ಪೈಲಟ್‌ ಮೃತಪಟ್ಟ ಕುರಿತು ಪ್ರತಿಕಿಯಿಸಿದ IAF, “ಈ ಘಟನೆಯಿಂದ ಉಂಟಾದ ಜೀವ ನಷ್ಟಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಮೃತ ಪೈಲಟ್‌ ಕುಟುಂಬದ ಬೆಂಬಲಕ್ಕೆ IAF ದೃಢವಾಗಿ ನಿಲ್ಲಲಿದೆ. ಅಪಘಾತದ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ಸೇನಾ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ” ಎಂದಿದೆ.

ಎರಡು ಆಸನಗಳ ಈ ಜಾಗ್ವಾರ್‌ ಜೆಟ್‌ ಎಂದಿನಂತೆ ತರಬೇತಿ ಹಾರಾಟ ನಡೆಸುತ್ತಿತ್ತು ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಜಾಮ್‌ನಗರದಲ್ಲಿ ಜಾಗ್ವಾರ್ ಯುದ್ಧ ವಿಮಾನ ಪತನಗೊಳ್ಳುವ ವೇಳೆ ಓರ್ವ ಪೈಲಟ್‌ ಯಶಸ್ವಿಯಾಗಿ ವಿಮಾನದಿಂದ ಹೊರ ಬಂದಿದ್ದರು. ಆದರೆ, ಅಪಘಾತದ ಹಲವು ಸಮಯದ ಬಳಿಕವೂ ಮತ್ತೋರ್ವ ಪೈಲಟ್‌ ನಾಪತ್ತೆಯಾಗಿದ್ದು. ವಿಮಾನ ಪತನಗೊಂಡ ಸ್ಥಳವಾದ, ಜಾಮ್‌ನಗರ ನಗರದಿಂದ 12 ಕಿಮೀ ದೂರದಲ್ಲಿರುವ ಸುವರ್ದಾ ಗ್ರಾಮದ ಹೊಲದಲ್ಲಿ ಸಂಪೂರ್ಣ ಬೆಂಕಿ ಆವರಿಸಿಕೊಂಡಿತ್ತು.



ಘಟನಾಸ್ಥಳದ ವಿಡಿಯೋಗಳು ಬೆಳಕಿಗೆ ಬಂದಿದ್ದು, ಹೊಲದ ಸುತ್ತಮುತ್ತ ವಿಮಾನದ ಕಾಕ್‌ಪಿಟ್‌, ಜೆಟ್‌ನ ಹಿಂಭಾಗ ಸೇರಿದಂತೆ ಹಲವು ತುಂಡುಗಳಾಗಿ ಜೆಟ್‌ ವಿಭಾಜಿಸಲ್ಪಟ್ಟಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಬುಧವಾರ ರಾತ್ರಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಜಾಮ್‌ನಗರ ಜಿಲ್ಲಾಧಿಕಾರಿ ಕೆ.ಬಿ. ಠಕ್ಕರ್, "ಸುವರ್ದಾ ಗ್ರಾಮದ ಜನವಸತಿ ಪ್ರದೇಶದಿಂದ ದೂರದಲ್ಲಿರುವ ತೆರೆದ ಮೈದಾನವೊಂದರಲ್ಲಿ ಜೆಟ್‌ ಪತನಗೊಂಡಿರುವದರಿಂದ ಸಾಮಾನ್ಯ ಜನರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ" ಎಂದು ಹೇಳಿದ್ದರು.

ಈ ಸುದ್ದಿಯನ್ನು ಓದಿ: Viral Video: ವಿಮಾನ ನಿಲ್ದಾಣದಲ್ಲಿ ಅರೆಬೆತ್ತಲಾದ ಮಹಿಳೆ- ವಿಡಿಯೊ ಪುಲ್‌ ವೈರಲ್

"ಜೆಟ್ ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತು ಮತ್ತು ಪೊಲೀಸರು ಮತ್ತು ಅಗ್ನಿಶಾಮಕ ದಳ ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಘಟನೆಯಿಂದಾಗಿ ಎರಡನೇ ಪೈಲಟ್ ಸಾವನ್ನಪ್ಪಿದ್ದಾರೆ" ಎಂದು ಅವರು ಹೇಳಿದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ದೊಡ್ಡ ಸ್ಫೋಟದ ಸದ್ದು ಕೇಳಿಸಿದ ನಂತರ ಅಪಘಾತ ನಡೆದ ಸ್ಥಳದಿಂದ ದಟ್ಟ ಹೊಗೆ ಹೊರ ಬರುತ್ತಿರುವುದು ಕಾಣಿಸಿತ್ತು ಎಂದು ಹೇಳಿದ್ದಾರೆ.

ಅವಳಿ ಎಂಜಿನ್‌ ಹೊಂದಿರುವ ಜಾಗ್ವಾರ್‌ ಫೈಟರ್‌ ಬಾಂಬರ್‌ ಅಗಿದ್ದು, ಒಂದು ಮತ್ತು ಎರಡು ಸೀಟ್‌ಗಳ ರೂಪಾಂತರಗಳನ್ನು ಹೊಂದಿದೆ. ಇದು ಭಾರತೀಯ ವಾಯುಸೇನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ ಫೈಟರ್‌ ಜೆಟ್‌ ಆಗಿದೆ. 70ರ ದಶಕದ ಉತ್ತರಾರ್ಧದಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಹೆಜ್ಜೆ ಇಟ್ಟ ಈ ಫೈಟರ್‌ ಜೆಟ್‌, ನಂತರದ ದಿನಗಳಲ್ಲಿ ಹಲವು ಬದಲಾವಣೆ ಮತ್ತು ಆಧುನಿಕರಣವನ್ನು ಕಂಡಿದೆ.