Viral Video: ವಿಮಾನ ನಿಲ್ದಾಣದಲ್ಲಿ ಅರೆಬೆತ್ತಲಾದ ಮಹಿಳೆ- ವಿಡಿಯೊ ಪುಲ್ ವೈರಲ್
ಅಮೆರಿಕದ ಫೋರ್ಟ್ ಲಾಡರ್‌ಡೇಲ್ ಹಾಲಿವುಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪಿರಿಟ್ ಏರ್ ಲೈನ್ಸ್ ನ ಪ್ರಯಾಣಿಕಳಾಗಿದ್ದ ಮಹಿಳೆಯೊಬ್ಬರು ಬಿಳಿ ಒಳ ಉಡುಪು ಮತ್ತು ಬೂಟುಗಳನ್ನು ಮಾತ್ರ ಧರಿಸಿ ಓಡಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಅನೇಕ ನೆಟ್ಟಿಗರು ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ.


ಫ್ಲೋರಿಡಾ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Airport ) ಮಹಿಳೆಯೊಬ್ಬರು ಅರೆನಗ್ನರಾಗಿ ಓಡಾಡುತ್ತಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ. ಸ್ಪಿರಿಟ್ ಏರ್‌ಲೈನ್ಸ್ (Spirit Airlines ) ಪ್ರಯಾಣಿಕಳಾಗಿದ್ದ ಆ ಮಹಿಳೆ ಬಿಳಿ ಒಳ ಉಡುಪು ಮತ್ತು ಬೂಟುಗಳನ್ನು ಮಾತ್ರ ಧರಿಸಿದ್ದಳು. ಅಮೆರಿಕದ ಫೋರ್ಟ್ ಲಾಡರ್‌ಡೇಲ್ ಹಾಲಿವುಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸುಮಾರು 24 ಸೆಕೆಂಡುಗಳ ಈ ವಿಡಿಯೋದಲ್ಲಿ ಅನೇಕ ಪ್ರಯಾಣಿಕರು ಕುರ್ಚಿಗಳ ಮೇಲೆ ಕುಳಿತಿರುವುದು ಕಂಡು ಬಂದಿದೆ. ಅವರೆಲ್ಲರ ಎದುರು ಅರೆನಗ್ನ ಸ್ಥಿತಿಯಲ್ಲಿ ಬಂದ ಮಹಿಳೆ ಜೋರಾಗಿ ಕೂಗಾಡುತ್ತಿರುವುದು ಕಂಡು ಬಂದಿದೆ. ಆಕೆಯೊಂದಿಗೆ ಇದ್ದ ವ್ಯಕ್ತಿಯೊಬ್ಬರು ಆಕೆ ತೆಗೆದ ಬಟ್ಟೆಗಳನ್ನು ಹಿಂತಿರುಗಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಸ್ಪಿರಿಟ್ ಏರ್‌ಲೈನ್ಸ್‌ನ ಗೇಟ್ ಜಿ12 ನಲ್ಲಿ ಕೇವಲ ಬಿಳಿ ಒಳ ಉಡುಪು, ದೊಡ್ಡ ಹೂಪ್ ಕಿವಿಯೋಲೆಗಳು ಮತ್ತು ಬೂಟುಗಳನ್ನು ಧರಿಸಿದ್ದ ಮಹಿಳೆ ಟಾಪ್‌ಲೆಸ್ ಆಗಿರುವುದನ್ನು ನೋಡಿದ ಪೊಲೀಸರು ಆಕೆಗೆ ಕಪ್ಪು ಟಿ-ಶರ್ಟ್ ನೀಡಿದ್ದಾರೆ. ಬಳಿಕ ಮಹಿಳೆ ಅದನ್ನು ಧರಿಸಿಕೊಂಡಿದ್ದಾರೆ. ಮಹಿಳೆ ಯಾಕೆ ಹೀಗೆ ವರ್ತಿಸಿದರು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಅವರ ಮಾತು ಕೂಡ ಸ್ಪಷ್ಟವಾಗಿಲ್ಲ. ಆಕೆಯನ್ನು ನೋಡಿದ ಕೆಲವರು ಆಕೆಯಿಂದ ದೂರ ಸರಿಯುತ್ತಿದ್ದರು. ಕೆಲವರು ತಮ್ಮ ಫೋನ್‌ಗಳನ್ನು ಹಿಡಿದುಕೊಂಡು ವಿಡಿಯೋ ರೆಕಾರ್ಡ್ ಮಾಡುವುದನ್ನು ಕೂಡ ಇದರಲ್ಲಿ ಕಾಣಬಹುದು.
ಮಹಿಳೆಯ ವಿಡಿಯೊ ಇಲ್ಲಿದೆ
Let’s check in n Spirit Airlines shall we……….just another day in paradise. pic.twitter.com/RvN5nelV1Q
— Spitfire (@DogRightGirl) April 2, 2025
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯನ್ನು ಸ್ಪಿರಿಟ್ ಏರ್‌ಲೈನ್ಸ್‌ಗೆ ಪ್ರಯಾಣಿಕರನ್ನು ಆಕರ್ಷಿಸಲು ಬಳಸಿಕೊಂಡರು. ಇತ್ತೀಚಿನ ಆಕ್ಸಿಯೋಸ್- ಹ್ಯಾರಿಸ್ ಸಮೀಕ್ಷೆಯ ಪ್ರಕಾರ 100 ಪ್ರಮುಖ ಏರ್ ಲೈನ್ಸ್ ಕಂಪೆನಿಗಳಲ್ಲಿ ಸ್ಪಿರಿಟ್ 98 ನೇ ಸ್ಥಾನದಲ್ಲಿದೆ. ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು, ಒಬ್ಬರು ಇದು ತುಂಬಾ ವಿಚಿತ್ರ ಮಾದರಿಯಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ನಾನು ಮೊದಲು ಕೋಪಗೊಂಡಿದ್ದೇನೆ. ಆದರೆ ಎಂದಿಗೂ ಬೆತ್ತಲೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Ghibli: ಎಲ್ಲೆಡೆ ಘಿಬ್ಲಿ ಫೋಟೊಗಳ ಹವಾ; ವೈಯಕ್ತಿಕ ಮಾಹಿತಿ ಸೋರಿಕೆ?
ಮತ್ತೊಬ್ಬರು ಈ ವಾರ ನಾನು ನೋಡಿದ ಮೂರನೇ ವಿಡಿಯೊ ಇದಾಗಿದೆ ಎಂದು ಹೇಳಿದ್ದಾರೆ. ಈ ನಡುವೆ ಹೂಸ್ಟನ್ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿದೆ. ಘಟನೆ ನಡೆದ ಕೆಲವು ದಿನಗಳ ಬಳಿಕ ಈ ವಿಡಿಯೋ ವೈರಲ್ ಆಗಿದೆ. ಇಲ್ಲಿ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದ ಪ್ರಯಾಣಿಕರೊಬ್ಬರು ಬೆತ್ತಲೆಯಾಗಿ ಹಜಾರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಕೆಯನ್ನು ಬಳಿಕ ವಿಮಾನದಿಂದ ಕೆಳಗಿಳಿಸಿ ವೈದ್ಯಕೀಯ ಸಹಾಯಕ್ಕಾಗಿ ಹೂಸ್ಟನ್‌ನ ಹ್ಯಾರಿಸ್ ಹೆಲ್ತ್ ಬೆನ್ ಟೌಬ್ ಆಸ್ಪತ್ರೆಯಲ್ಲಿರುವ ನರಮನೋ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಯಿತು ಎನ್ನಲಾಗಿದೆ.