ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Men’s Day: ನವೆಂಬರ್‌ 19ರಂದೇ ಅಂತಾರಾಷ್ಟ್ರೀಯ ಪುರುಷ ದಿನ ಆಚರಿಸಲು ಕಾರಣವೇನು? ಇಲ್ಲಿದೆ ಇತಿಹಾಸ

ಪುರುಷರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದಿನವೂ ಹೌದು. ಜತೆಗೆ ಅವರು ಮಾಡುವ ಕೆಲಸಗಳನ್ನು ಗುರುತಿಸಿ ಗೌರವಿಸಲು ಪ್ರತೀ ವರ್ಷ ಪುರುಷ ದಿನವನ್ನು ನವೆಂಬರ್ 19ರಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಇಲ್ಲಿದೆ.

ಅಂತಾರಾಷ್ಟ್ರೀಯ ಪುರುಷ ದಿನ; ಇಲ್ಲಿದೆ ಇದರ ಮಹತ್ವ

ಪುರುಷ ದಿನಾಚರಣೆ -

Profile
Sushmitha Jain Nov 19, 2025 7:00 AM

ಬೆಂಗಳೂರು: ಪುರುಷ ಕುಟುಂಬದ ಶಕ್ತಿ, ಬದುಕಿನ ಎಲ್ಲ ಮಜಲುಗಳಲ್ಲಿ ತನಗೆ ಬರುವ ಕಷ್ಟಗಳನ್ನು ಎದುರಿಸಿ ನಿಲ್ಲುವ ತ್ಯಾಗಮಯಿ ಆತ. ಕುಟುಂಬದ ಖುಷಿಗಾಗಿ ತನ್ನ ಸರ್ವಸ್ವವನ್ನು ಧಾರೆ ಎರೆಯುವ ನಿಸ್ವಾರ್ಥಿ. ಅವನಕ್ಕೆ ಶ್ರಮವನ್ನು, ತನ್ನ ಸಂಸಾರವನ್ನು ಕಣ್ಣಲ್ಲಿ ಕಣ್ಣಿಟ್ಟು ಸಲಹುವ ಪರಿಯನ್ನು, ವರ್ತನೆಯಲ್ಲಿ ಗಡುಸಾದರು ಆತನಲ್ಲಿರುವ ಮಗು ಮನಸ್ಸನ್ನು, ಆತ್ಮಸ್ಥೈರ್ಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಅಪ್ಪನಾಗಿ, ತಮ್ಮನಾಗಿ, ಅಣ್ಣನಾಗಿ, ಗಂಡನಾಗಿ, ಮಗನಾಗಿ ಈ ಎಲ್ಲ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಆತನಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದಿನ ಮೀಸಲಾಗಿದೆ. ಅದುವೇ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ. ಪ್ರತೀ ವರ್ಷ ನವೆಂಬರ್ 19ರಂದು ಪುರುಷರ ದಿನವನ್ನು (Men’s Day) ಆಚರಿಸಲಾಗುತ್ತದೆ.

ಪುರುಷರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದಿನವೂ ಹೌದು. ಜತೆಗೆ ಅವರು ಮಾಡುವ ಕೆಲಸಗಳಿಗಾಗಿ ಗುರುತಿಸಿ ಗೌರವದ ಮೂಲಕ ಮೂಲಕ ಪ್ರತೀ ವರ್ಷ ಪುರುಷ ದಿನವನ್ನು ಆಚರಿಸಲಾಗುತ್ತದೆ.

ಸರಿಸುಮಾರು 33 ವರ್ಷಗಳಿಂದ ಪುರುಷರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರೆ ಎಂದಾದರೂ ಪುರುಷರ ದಿಚಾರಣೆ ಆಚರಣೆಗೆ ಬಂದಿದ್ದು ಹೇಗೆ? ನವೆಂಬರ್ 19ರಂದೇ ಯಾಕೆ ಈ ದಿನಾಚರಣೆಯನ್ನು ಆಚರಿಸುತ್ತಾರೆ? ಈ ಬಾರಿಯ ಥೀಮ್ ಏನು? ಆಚರಣೆ ಹೇಗೆ? ಎಂಬುದರ ಬಗ್ಗೆ ವಿವರ ಇಲ್ಲಿದೆ.

1992ರಲ್ಲಿ ಪ್ರಾರಂಭ

ಮೊದಲಿಗೆ 1992ರಲ್ಲಿ ಥಾಮಸ್ ಓಸ್ಟರ್ ಎಂಬವವರು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಪ್ರಾರಂಭಿಸಿದರು. ಹಾಗೆ 1999ರಲ್ಲಿ ಟ್ರಿನಿಡಾಟ್ ಮತ್ತು ಟೊಬಾಗೋದಲ್ಲಿ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಇತಿಹಾಸ ಉಪನ್ಯಾಸಕ ಡಾ. ಜೆರೋಮ್ ಟೆಲುಕ್ಸಿಂಗ್ ಅದರ ಪ್ರಾಮುಖ್ಯತೆಯನ್ನು ಎಲ್ಲೆಡೆ ಸಾರಿದರು. ಹಾಗೇ ಅವರ ತಂದೆಯ ಹುಟ್ಟುಹಬ್ಬವನ್ನು ಅಂತಾರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಲು ನಿರ್ಧರಿಸಿದರು. ಅಂದಿನಿಂದ ಪ್ರತಿ ವರ್ಷ ಪುರುಷರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇನ್ನು ಈ ದಿನವನ್ನು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಿ ಇಡದೇ ಅರ್ಥ ಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಡಾ. ಟೀಲುಕ್ಸಿಂಗ್ ವಿಶ್ವದಾದ್ಯಂತ ಪುರುಷರು ಮತ್ತು ಹುಡುಗರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪ್ರತಿಬಿಂಬಿಸುವ ದಿನವಾಗಿ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಪ್ರಚಾರ ಮಾಡಿದರು.

ಈ ಸುದ್ದಿಯನ್ನು ಓದಿ: Viral Video: ಓವರ್ ಟೇಕ್ ಮಾಡಲು ಹೋಗಿ ಲಾರಿಯ ಚಕ್ರದಡಿಗೆ ಸಿಲುಕಿ ಸ್ಕೂಟರ್ ಸವಾರ ಅಪ್ಪಚ್ಚಿ: ವಿಡಿಯೊ ವೈರಲ್

ಆಚರಣೆ ಹೇಗೆ?

ಪುರುಷರ ಮತ್ತು ಹುಡುಗರ ಆರೋಗ್ಯದ ಮೇಲೆ ಗಮನ ಹರಿಸುವುದು ಮತ್ತು ಜಾಗೃತಿ ಮೂಡಿಸುವುದು, ಲಿಂಗ ಅಸಮಾನತೆ ಹೋಗಲಾಡಿಸಿ, ಸಮಾನತೆಯ ಬಗ್ಗೆ ಅರಿವು ಮೂಡಿಸುವುದು, ಸಮಾಜಕ್ಕೆ ಪುರುಷರ ಸಕಾರಾತ್ಮಕ ಕೊಡುಗೆಗಳನ್ನು ಗೌರವಿಸುವುದು, ಸುರಕ್ಷಿತ ಹಾಗೂ ಉತ್ತಮ ಸಮಾಜವನ್ನು ನಿರ್ಮಿಸುವುದು ಹೀಗೆ ಹಲವು ಧೈಯೋದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಆರಂಭದಲ್ಲಿ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಇದ್ದ ಈ ಆಚರಣೆ ಈಗ ಜಗತ್ತಿನಾದ್ಯಂತ ಹರಡಿದೆ.

ಪುರುಷರ ದಿನಾಚರಣೆಯ ಉದ್ದೇಶ ಏನು?

  • ಸಮಾಜಕ್ಕೆ ಪುರುಷರ ಕೊಡುಗೆಗಳನ್ನು ಗುರುತಿಸುವುದು.
  • ಪುರುಷರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸುವುದು, ವಿಶೇಷವಾಗಿ ಮಾನಸಿಕ ಆರೋಗ್ಯ ಬಗ್ಗೆ ಅರಿವು ಮೂಡಿಸುವುದು.
  • ಲಿಂಗ ಸಮಾನತೆಯನ್ನು ಉತ್ತೇಜಿಸುವುದು.
  • ಸಮಾಜದಲ್ಲಿ ಪುರುಷರ ಮೇಲಿನ ಶೋಷಣೆ ಮತ್ತು ತಾರತಮ್ಯದ ಕುರಿತು ಧ್ವನಿ ಎತ್ತುವುದು.

ಪುರುಷರದ ದಿನಾಚರಣೆಯ ಅಂಗವಾಗಿ ಕಚೇರಿ, ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪುರುಷರಿಗೆ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ.