ಶಾಲೆಯ ಬಳಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆ; ಭದ್ರತಾ ಪಡೆಗಳು ಹೈ ಅಲರ್ಟ್
Uttarakhand News: ದೆಹಲಿಯಲ್ಲಿ ನಡೆದಿದ್ದ ಸ್ಫೋಟದ ಘಟನೆ ಮಾಸುವ ಮುನ್ನವೇ ಭಾರೀ ಅನಾಹುತವೊಂದು ತಪ್ಪಿದೆ. ಉತ್ತರಾಖಂಡದ ಹಳ್ಳಿಯೊಂದರ ಶಾಲೆಯ ಬಳಿ ಹೆಚ್ಚಿನ ಪ್ರಮಾಣದ ಸ್ಫೋಟಕ ಜಿಲಾಟಿನ್ ಕಡ್ಡಿಗಳು ಪತ್ತೆಯಾಗಿದೆ. ಸುಲ್ಟ್ ಪ್ರದೇಶದ ಪೊದೆಯೊಂದರಲ್ಲಿ 20 ಕೆಜಿಗಿಂತ ಹೆಚ್ಚು ತೂಕದ 161 ಜಿಲಾಟಿನ್ ಪತ್ತೆಯಾಗಿವೆ.
ವಶಕ್ಕೆ ಪಡೆದ ಸ್ಫೋಟಕಗಳು -
ಡೆಹ್ರಾಡೂನ್: ದೆಹಲಿಯಲ್ಲಿ ನಡೆದಿದ್ದ ಸ್ಫೋಟದ (Delhi Blast) ಘಟನೆ ಮಾಸುವ ಮುನ್ನವೇ ಭಾರೀ ಅನಾಹುತವೊಂದು ತಪ್ಪಿದೆ. ಉತ್ತರಾಖಂಡದ (UttaraKhand) ಹಳ್ಳಿಯೊಂದರ ಶಾಲೆಯ ಬಳಿ ಹೆಚ್ಚಿನ ಪ್ರಮಾಣದ ಸ್ಫೋಟಕ ಜಿಲಾಟಿನ್ ಕಡ್ಡಿಗಳು (Explosives Found) ಪತ್ತೆಯಾಗಿದೆ. ಸುಲ್ಟ್ ಪ್ರದೇಶದ ಪೊದೆಯೊಂದರಲ್ಲಿ 20 ಕೆಜಿಗಿಂತ ಹೆಚ್ಚು ತೂಕದ 161 ಜಿಲಾಟಿನ್ ಕಡ್ಡಿಗಳು ಪತ್ತೆಯಾಗಿದೆ. ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಸುಮಾರು 3,000 ಕೆಜಿ ಸ್ಫೋಟಕಗಳು ಪತ್ತೆಯಾದ ಕೆಲವು ದಿನಗಳ ನಂತರ, ದಬಾರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಳಿ ಪತ್ತೆಯಾಗಿದೆ.
ಪ್ರಾಂಶುಪಾಲ ಸುಭಾಷ್ ಸಿಂಗ್ ಮೊದಲು ಪೊದೆಗಳಲ್ಲಿ ಅನುಮಾನಾಸ್ಪದ ಪ್ಯಾಕೆಟ್‌ಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಎರಡು ಪೊಲೀಸ್ ತಂಡಗಳು ತಕ್ಷಣ ಶಾಲೆಗೆ ತಲುಪಿ ಪ್ರದೇಶವನ್ನು ಸುತ್ತುವರೆದವು. ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳಿಂದ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳನ್ನು ಸಹ ಕರೆಸಲಾಯಿತು. ಶ್ವಾನ ಘಟಕವು ಕೂಲಂಕಷ ಶೋಧ ನಡೆಸಿದಾಗ, ಪೊದೆಗಳಲ್ಲಿ ಕೆಲವು ಜೆಲಾಟಿನ್ ಕಡ್ಡಿಗಳ ಪ್ಯಾಕೆಟ್‌ಗಳು ಕಂಡುಬಂದವು. ಇನ್ನೂ ಕೆಲವು ಪ್ಯಾಕೆಟ್‌ಗಳು ಸುಮಾರು 20 ಅಡಿ ದೂರದಲ್ಲಿ ಕಂಡುಬಂದವು.
ದಾಬ್ರಾ ಗ್ರಾಮದ ಶಾಲೆಯ ಬಳಿಯ ಪೊದೆಗಳಿಂದ 161 ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದರು. ಬಾಂಬ್ ನಿಷ್ಕ್ರಿಯ ದಳ ಕೂಡ ವಿಚಾರಣೆ ನಡೆಸಿತು. ಹತ್ತಿರದ ಪ್ರದೇಶಗಳಲ್ಲೂ ಶೋಧ ನಡೆಸಲಾಯಿತು" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದೇವೇಂದ್ರ ಪಿಂಚಾ ತಿಳಿಸಿದ್ದಾರೆ. ಜೆಲಾಟಿನ್ ಕಡ್ಡಿಗಳು ನಿರ್ಮಾಣ ಮತ್ತು ಗಣಿಗಾರಿಕೆ ಉದ್ದೇಶಗಳಿಗಾಗಿ ಬಂಡೆಗಳನ್ನು ಸ್ಫೋಟಿಸಲು ಸಾಮಾನ್ಯವಾಗಿ ಬಳಸುವ ಸ್ಫೋಟಕ ವಸ್ತುಗಳಾಗಿವೆ. ಗ್ರಾಮಕ್ಕೆ ಸ್ಫೋಟಕಗಳನ್ನು ತರುತ್ತಿರುವುದರ ಹಿಂದಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
Delhi Blast: "ದೆಹಲಿ ಸ್ಫೋಟ ಮಾಡಿದ್ದು ನಾವೇ"; ಎರಡು ವರ್ಷದ ಪ್ಲಾನ್ ವಿಫಲವಾಗಿದ್ದೆಲ್ಲಿ? ಕೊನೆಗೂ ಬಾಯ್ಬಿಟ್ಟ ಉಗ್ರ
ಸ್ಫೋಟಕ ವಸ್ತುಗಳ ಕಾಯ್ದೆ 1908 ರ ಸೆಕ್ಷನ್ 4 (ಎ) ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 288 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಎಸ್‌ಪಿ ಪಿಂಚಾ ಹೇಳಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸ್ಫೋಟ ಮತ್ತು ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡ ನಂತರ ದೇಶಾದ್ಯಂತ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.