Nagpur Violence: ನಾಗ್ಪುರ ಹಿಂಸಾಚಾರ- ಆರೋಪಿ ಫಾಹೀಮ್ ಖಾನ್ ಅಕ್ರಮ ಆಸ್ತಿಯ ಮೇಲೆ ಬುಲ್ಡೋಜರ್ ಕಾರ್ಯಾಚರಣೆ
Nagpur Violence: ನಾಗ್ಪುರ ಗಲಭೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದ್ದ ಫಾಹೀಮ್ ಖಾನ್ ನಿರ್ಮಿಸಿದ್ದ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು 24 ಗಂಟೆಗಳ ಅಂತಿಮ ಗಡುವನ್ನು ಮೀರಿದ ನಂತರ ಸ್ಥಳೀಯಾಡಳಿತವು ಅವರ ಮನೆಯನ್ನು ಕೆಡುವ ಕಾರ್ಯಾಚರಣೆ ಆರಂಭಿಸಿದೆ. ಅಷ್ಟುಕ್ಕೂ ಈ ಫಾಹೀಮ್ ಖಾನ್ ಯಾರು..? ನಾಗ್ಪುರ ಗಲಭೆಗೂ ಫಾಹೀಮ್ ಖಾನ್ ಏನು ನಂಟು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.


ಮುಂಬೈ: ಔರಂಗಜೇಬ್ ಸಮಾಧಿ ತೆರವಿಗೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯ ಮೇಲೆ ದಾಳಿ ನಡೆಸಿ ನಾಗ್ಪುರ(Nagpur Violence)ದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದವರ ಮೇಲೆ ಮಹಾರಾಷ್ಟ್ರ(Maharashtra News) ಸರ್ಕಾರಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ ಗಲಭೆಗೆ ಕಾರಣವಾಗಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖವಾಗಿ, ಗಲಭೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದ್ದ ಫಾಹೀಮ್ ಖಾನ್(Fahim Khan)ನನ್ನು ಪೊಲೀಸರು ಲಾಕಪ್ ಹಿಂದೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಫಾಹೀಮ್ ಖಾನ್ ಗಲಭೆಗೂ ಮುನ್ನ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ, ಗಲಭೆಗೆ ಪ್ರಚೋದಿಸಿದ ವಿಡಿಯೋ(Viral Video) ಕೂಡಾ ಬೆಳಕಿಗೆ ಬಂದಿತ್ತು. ಈಗ ಅದೇ ಫಾಹೀಮ್ ಖಾನ್‌ಗೆ ಮಹಾರಾಷ್ಟ್ರ ಸರ್ಕಾರ ದೊಡ್ಡ ಶಾಕ್ ನೀಡಿದೆ.
ಫಾಹೀಮ್ ಖಾನ್ ನಿರ್ಮಿಸಿದ್ದ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು 24 ಗಂಟೆಗಳ ಅಂತಿಮ ಗಡುವನ್ನು ಮೀರಿದ ನಂತರ ಸ್ಥಳೀಯಾಡಳಿತವು ಅವರ ಮನೆಯನ್ನು ಕೆಡವುವ ಕಾರ್ಯಾಚರಣೆ ಆರಂಭಿಸಿದೆ. ಸಂಜಯ್ ಬಾಗ್ ಕಾಲೋನಿಯಲ್ಲಿರುವ ಫಾಹೀಮ್ ಖಾನ್ ಅವರ ಎರಡು ಅಂತಸ್ತಿನ ಮನೆಯನ್ನು ಕೆಡವಲು ನಾಗ್ಪುರ ಮಹಾನಗರ ಪಾಲಿಕೆ ಬುಲ್ಡೋಜರ್‌ಗಳನ್ನು ಬಳಸಿದೆ. ಗಲಭೆ ಆರೋಪಿಯ ಆಸ್ತಿಯನ್ನು ಸ್ಥಳೀಯಾಡಳಿತ ಧ್ವಂಸಗೊಳಿಸುತ್ತಿರುವುದು ಇದೇ ಮೊದಲು. ಫಾಹೀಮ್ ಖಾನ್ ಅವರ ಕುಟುಂಬವು ಪುರಸಭೆಯ ಒಡೆತನದ ಭೂಮಿಯನ್ನು ಅತಿಕ್ರಮಣ ಮಾಡಿದೆ ಎಂದು ವರದಿಯಾಗಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ನ್ಯಾಯ ನೀಡುವ ಮಾದರಿಯನ್ನು ಅನುಸರಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ "ಕಾನೂನು ಅನುಮತಿಸಿದರೆ ಬುಲ್ಡೋಜರ್‌ಗಳು ತಮ್ಮ ಕೆಲಸ ಪ್ರಾರಂಭಿಸುತ್ತವೆ" ಎಂದು ಹೇಳಿದ್ದರು. ಇದಾದ ಕೇವ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಮಾರ್ಚ್ 20ರಂದು ಪಾಲಿಕೆ ಅಧಿಕಾರಿಗಳು ಮನೆಯನ್ನು ಪರಿಶೀಲಿಸಿದ್ದು, ಅದು ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆ, 1966 ಅನ್ನು ಉಲ್ಲಂಘಿಸಿದೆ ಎಂದು ಹೇಳಿದ್ದರು.
ನಾಗ್ಪುರದಲ್ಲಿ ಗಲಭೆ ನಡೆಸಿದ ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ (MDP) ಗಲಭೆಕೋರರು ಫಾಹಿಮ್ ಖಾನ್ ಅವರ ಎರಡು ಅಂಗಡಿಗಳನ್ನು ಗಲಭೆಗೆ ಬಳಸಿದ್ದರು ಎಂದು ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದ್ದರು. ಇದಾದ ನಂತರ, ಶನಿವಾರ ಮುಂಜಾನೆ ಪೊಲೀಸರು ಆ ಎರಡು ಅಂಗಡಿಗಳನ್ನು ಮುಚ್ಚಿದ್ದರು.
ಘಟನೆಗೆ ಸಂಬಂಧಿಸಿದ ವೈರಲ್ ವಿಡಿಯೊ ಇಲ್ಲಿದೆ
#WATCH | Maharashtra: House of Nagpur violence accused Faheem Khan being demolished in Nagpur. Police personnel are present at the spot. pic.twitter.com/RKzAFCokED
— ANI (@ANI) March 24, 2025
ಈ ಸುದ್ದಿಯನ್ನು ಓದಿ: Viral Video: ಯಾರೀಕೆ ʼಯಂಗ್ ಮೊನಾಲಿಸಾ...? ಇವಳನ್ನು ನೋಡಿದ್ರೆ ನೀವು ಕೂಡ ಶಾಕ್ ಆಗ್ತೀರಿ!
ಏನಿದು ಘಟನೆ?
ಔರಂಗಜೇಬನ ಸಮಾಧಿ ವಿವಾದದ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಧಾರ್ಮಿಕ ಪಠ್ಯವನ್ನು ಸುಟ್ಟುಹಾಕಲಾಗಿದೆ ಎಂಬ ಗಾಳಿ ಸುದ್ದಿ ವೇಗವಾಗಿ ಹರಡಿದ್ದು, ಇದರಿಂದಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿತ್ತು. ಇದರಲ್ಲಿ ಪೊಲೀಸ್ ಅಧಿಕಾರಿಗಳೂ ಸೇರಿದಂತೆ 40 ಜನರು ಗಾಯಗೊಂಡರು. ಅವರಲ್ಲಿ ಒಬ್ಬರು ಶನಿವಾರ ಸಾವನ್ನಪ್ಪಿದ್ದಾರೆ. ಹಿಂಸಾಚಾರದ ಬಳಿಕ ನಾಗ್ಪುರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಸುಮಾರು ಒಂದು ವಾರದ ಗಲಭೆ ಪೀಡಿತ ಪ್ರದೇಶಗಳಲ್ಲಿ ಹೇರಲಾಗಿದ್ದ ಕರ್ಫ್ಯೂ ಅನ್ನು ಭಾನುವಾರ ತೆಗೆದುಹಾಕಲಾಯಿತು.