ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನವೆಂಬರ್ 30ರಂದು ಲೋಕಸಭೆ, ಡಿಸೆಂಬರ್ 2ರಂದು ರಾಜ್ಯಸಭೆ ಕಲಾಪ ಆರಂಭ; ಕ್ಷೇತ್ರ ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಚರ್ಚೆಗಳ ನಡುವೆ ಅಧಿವೇಶನ

Parliament’s Monsoon Session: ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಸಂಸತ್‌ ಅಧಿವೇಶನ ಮುಂದಿನ ವಾರ ಪುನರಾರಂಭಗೊಳ್ಳಲಿದೆ. ನವೆಂಬರ್ 30ರಿಂದ ಲೋಕಸಭೆ ಮತ್ತು ಡಿಸೆಂಬರ್ 2ರಿಂದ ರಾಜ್ಯಸಭೆ ಅಧಿವೇಶನ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ವಿಶೇಷ ಅಧಿವೇಶನದಲ್ಲಿ ಯಾವ ಮಸೂದೆಗಳನ್ನು ಮಂಡಿಸಲಾಗುವುದು ಎನ್ನುವ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ.

ನ. 30ರಿಂದ ಲೋಕಸಭೆ, ಡಿ. 2ರಿಂದ ರಾಜ್ಯಸಭೆ ಕಲಾಪ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 26, 2026 9:32 PM

ದೆಹಲಿ, ನ. 26: ವಿಪಕ್ಷಗಳು ಅಡ್ಡಿಪಡಿಸಿದ್ದರಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಸಂಸತ್‌ ಅಧಿವೇಶನ ಮುಂದಿನ ವಾರ ಪುನರಾರಂಭಗೊಳ್ಳಲಿದೆ. ನವೆಂಬರ್ 30ರಿಂದ ಲೋಕಸಭೆ ಮತ್ತು ಡಿಸೆಂಬರ್ 2ರಿಂದ ರಾಜ್ಯಸಭೆ ಅಧಿವೇಶನ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju), ಈ ಕಲಾಪ ಸಂಸತ್ತಿನ ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿರಲಿದೆ (Parliament’s Monsoon Session) ಮತ್ತು ಡಿಸೆಂಬರ್ 3ರಂದು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ವಿಶೇಷ ಅಧಿವೇಶನದಲ್ಲಿ ಯಾವ ಮಸೂದೆಗಳನ್ನು ಮಂಡಿಸಲಾಗುವುದು ಎಂಬುದರ ಕುರಿತು ಅವರು ತಿಳಿಸಿಲ್ಲ. ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಯನ್ನು ಕೇಂದ್ರ ಸರ್ಕಾರ ಮತ್ತೆ ಮಂಡಿಸಬಹುದು ಎನ್ನುವ ಅನುಮಾನದ ನಡುವೆ ಈ ಘೋಷಣೆ ಹೊರ ಬಿದ್ದಿದೆ.

ಸಚಿವ ಕಿರಣ್ ರಿಜಿಜು ಅವರ ಎಕ್ಸ್‌ ಪೋಸ್ಟ್‌:



ಆಗಸ್ಟ್ 13ರಂದು ಎರಡೂ ಸದನಗಳನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸದೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಔಪಚಾರಿಕವಾಗಿ ಮುಕ್ತಾಯಗೊಳಿಸದ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನವು ಈಗಲೂ ಚಾಲ್ತಿಯಲ್ಲಿದ್ದು ಇದು 100 ದಿನ ದಾಟಿದೆ. ಆ ಮೂಲಕ 2008ರಲ್ಲಿ ದಾಖಲಾಗಿದ್ದ 87 ದಿನಗಳ ಹಿಂದಿನ ದಾಖಲೆಯನ್ನು ಇದು ಮೀರಿಸಿದೆ.

ಕ್ಷೇತ್ರ ಮರುವಿಂಗಡನೆ ಮಾರಕವೇ ?

ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ?

ವರ್ಷಾರಂಭದಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ಬಹುನಿರೀಕ್ಷಿತ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ವಿಫಲವಾಗಿದ್ದರಿಂದ ಮತ್ತೊಮ್ಮೆ ಮಂಡಿಸುವ ಸಾಧ್ಯತೆ ಇದೆ. ಏಪ್ರಿಲ್ 17ರಂದು ಲೋಕಸಭೆಯು ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿತು. ಹೊಸ ಜನಗಣತಿಗಾಗಿ ಕಾಯದೆ ಕ್ಷೇತ್ರ ಮರುವಿಂಗಡಣೆಗೆ ಅವಕಾಶ ಕಲ್ಪಿಸುವ ಮೂಲಕ ಮಹಿಳಾ ಮೀಸಲಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಈ ಮಸೂದೆಯ ಉದ್ದೇಶವಾಗಿತ್ತು. ಏಪ್ರಿಲ್ 16ರಿಂದ 18ರವರೆಗೆ ನಡೆದ ಸಂಸತ್ತಿನ 3 ದಿನಗಳ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಈ ಮತದಾನ ನಡೆಯಿತು.

ಮತ ಚಲಾಯಿಸಿದ 528 ಸದಸ್ಯರಲ್ಲಿ 298 ಮಂದಿ ಮಸೂದೆಯನ್ನು ಬೆಂಬಲಿಸಿದರೆ, 230 ಮಂದಿ ವಿರೋಧಿಸಿದರು. ಆ ಮೂಲಕ 3ನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿದ್ದ 352 ಮತಗಳಿಗಿಂತ 54 ಮತಗಳ ಕೊರತೆ ಹೊಂದಿತು. ಹೀಗಾಗಿ ಇದನ್ನು ಮತ್ತೆ ಮಂಡಿಸುವ ಸಾಧ್ಯತೆ ಇದೆ.

ಉದ್ದೇಶಿತ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಒದಗಿಸುತ್ತದೆ. ಏಪ್ರಿಲ್‌ನಲ್ಲಿ ಮಂಡಿಸಲಾದ ಮಸೂದೆಯು, ಕ್ಷೇತ್ರಗಳ ಮರುವಿಂಗಡಣಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮೂಲಕ, 2029ರ ಲೋಕಸಭಾ ಚುನಾವಣೆಯ ಮೊದಲು ಈ ಮೀಸಲಾತಿಯನ್ನು ಜಾರಿಗೆ ತರುವ ಗುರಿಯನ್ನು ಹೊಂದಿತ್ತು.

ಮಹಿಳಾ ಮೀಸಲಾತಿ ಮಸೂದೆ ಅನುಷ್ಠಾನಕ್ಕೆ ವಿಶೇಷ ಸಂಸತ್ ಅಧಿವೇಶನ ಕರೆಯಲು ಕೇಂದ್ರ ಸಿದ್ಧತೆ

ಈ ಮಸೂದೆಯು ಲೋಕಸಭೆಯ ಸದಸ್ಯ ಬಲವನ್ನು 543 ಸ್ಥಾನಗಳಿಂದ ಗರಿಷ್ಠ 850 ಸ್ಥಾನಗಳಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಒಳಗೊಂಡಿದೆ. ಪ್ರತಿ ರಾಜ್ಯಕ್ಕೂ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇಕಡಾ 50ರಷ್ಟು ಹೆಚ್ಚಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಪ್ರಸ್ತುತ ಸ್ಥಾನಗಳ ಹಂಚಿಕೆಯು 1971ರ ಜನಗಣತಿಯನ್ನು ಆಧರಿಸಿದೆ. ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.