2026ರ ಗಣರಾಜ್ಯೋತ್ಸವ ಪರೇಡ್ ನೀವೂ ವೀಕ್ಷಿಸಬೇಕೆ? ಹೀಗೆ ಟಿಕೆಟ್ ಬುಕ್ ಮಾಡಿ
Republic Day 2026: ದೇಶದ ಸಂಸ್ಕೃತಿ, ಶಕ್ತಿ ಮತ್ತು ಪ್ರತಿಷ್ಠೆಯನ್ನು ಪ್ರದರ್ಶಿಸುವ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶವಿದೆ. 2026ರ ಗಣರಾಜ್ಯೋತ್ಸವ ಮೆರವಣಿಗೆ ವೀಕ್ಷಿಸಲು ಬಯಸುವವರು ರಕ್ಷಣಾ ಸಚಿವಾಲಯದ ಆಮಂತ್ರಣ ಪೋರ್ಟಲ್ ಮೂಲಕ ಅಥವಾ ನಿಗದಿತ ಕೌಂಟರ್ ಗಳಲ್ಲಿ ಟಿಕೆಟ್ ಪಡೆಯಬಹುದಾಗಿದೆ. ಟಿಕೆಟ್ ಗಳ ಮಾರಾಟ ಪ್ರಕ್ರಿಯೆ ಜನವರಿ 5ರಿಂದ ಆರಂಭವಾಗಲಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ದೆಹಲಿಯಲ್ಲಿ (Delhi) ಜನವರಿ 26ರಂದು ನಡೆಯಲಿರುವ 2026ರ ಗಣರಾಜ್ಯೋತ್ಸವ ಪರೇಡ್ (Republic Day Parade 2026) ಟಿಕೆಟ್‌ಗಳ ಮಾರಾಟ (Republic Day Ticket) ಜನವರಿ 5ರಿಂದ ಆರಂಭವಾಗಲಿದೆ. ಜನವರಿ 26ರಂದು ಗಣರಾಜ್ಯೋತ್ಸವ ಮೆರವಣಿಗೆ (Republic Day Parade), ಜನವರಿ 28 ರಂದು ಬೀಟಿಂಗ್ ರಿಟ್ರೀಟ್ ಫುಲ್ ಡ್ರೆಸ್ ರಿಹರ್ಸಲ್ (Full Dress Rehearsal of Beating Retreat), ಜನವರಿ 29 ರಂದು ಮುಖ್ಯ ಬೀಟಿಂಗ್ ರಿಟ್ರೀಟ್ (Beating Retreat) ಸಮಾರಂಭ ನಡೆಯಲಿದೆ. ಇದರ ವೀಕ್ಷಣೆಗೆ ಆಸಕ್ತಿ ಇರುವವರು ರಕ್ಷಣಾ ಸಚಿವಾಲಯದ ಆಮಂತ್ರಣ ಪೋರ್ಟಲ್ ಮೂಲಕ ಅಥವಾ ನಿಗದಿತ ಕೌಂಟರ್ ಗಳಲ್ಲಿ ಟಿಕೆಟ್ ಪಡೆಯಬಹುದಾಗಿದೆ.
ಗಣರಾಜ್ಯೋತ್ಸವ 2026ರ ಟಿಕೆಟ್ ಪಡೆಯಲು ರಕ್ಷಣಾ ಸಚಿವಾಲಯದ ಆಮಂತ್ರಣ ಪೋರ್ಟಲ್ www.aamantran.mod.gov.in ನಲ್ಲಿ ನೋಂದಣಿ ಮಾಡಿ ಆನ್‌ಲೈನ್ ಟಿಕೆಟ್‌ಗಳನ್ನು ಪಡೆಯಬೇಕು. ದೇಶಾದ್ಯಂತ ಯಾರು ಬೇಕಾದರೂ ಇದರಲ್ಲಿ ಟಿಕೆಟ್ ಪಡೆದು ಸುಲಭವಾಗಿ ತಮ್ಮ ಟಿಕೆಟ್ ಗಳನ್ನೂ ಬುಕ್ ಮಾಡಬಹುದಾಗಿದೆ.
ಭಾರತದ ಗಣರಾಜ್ಯೋತ್ಸವದ ಮೆರವಣಿಗೆ 2026, ಸಂಪೂರ್ಣ ಡ್ರೆಸ್ ರಿಹರ್ಸಲ್ ಮತ್ತು ಬೀಟಿಂಗ್ ರಿಟ್ರೀಟ್ ಸಮಾರಂಭಗಳ ಜೊತೆಗೆ ಮಿಲಿಟರಿ, ಸಾಂಸ್ಕೃತಿಕ ಪ್ರದರ್ಶನವನ್ನು ವೀಕ್ಷಿಸಬಹುದು. ಗಣರಾಜ್ಯೋತ್ಸವ 2026ರ ಸಾರ್ವಜನಿಕ ಟಿಕೆಟ್ ಮಾರಾಟವು ಜನವರಿ 5ರಿಂದ ಪ್ರಾರಂಭವಾಗಲಿದೆ ಎಂದು ರಕ್ಷಣಾ ಸಚಿವಾಲಯ ಘೋಷಿಸಿದೆ.
ನಿಧಿ ಆಸೆಗಾಗಿ ದತ್ತು ಮಗು ಬಲಿ ಕೊಡಲು ಸಿದ್ಧರಾಗಿದ್ರಾ ಮುಸ್ಲಿಂ ದಂಪತಿ? 8 ತಿಂಗಳ ಕಂದಮ್ಮನ ರಕ್ಷಣೆ
Sale of tickets for the Republic Day Parade 2026, Full Dress Rehearsal of Beating Retreat and Beating Retreat in New Delhi will start from 5 January 2026, with tickets available online on https://t.co/lWmCgpPs64 and at designated counters in Delhi. pic.twitter.com/Jjx8ok5beL
— मुकुल गुप्ता 🇮🇳 (@m_mukul_gupta) January 3, 2026
ಗಣರಾಜ್ಯೋತ್ಸವದ ಟಿಕೆಟ್ ನಲ್ಲಿ ಮೂರು ವಿಭಿನ್ನ ಪ್ರದರ್ಶನಗಳನ್ನು ವೀಕ್ಷಿಸಲು ಅವಕಾಶವಿದೆ. 1. ಗಣರಾಜ್ಯೋತ್ಸವ ಮೆರವಣಿಗೆ- ಜನವರಿ 26ರಂದು ನಡೆಯಲಿದೆ. ಇದರಲ್ಲಿ ಮೆರವಣಿಗೆ, ಟ್ಯಾಬ್ಲೋಗಳನ್ನು ವೀಕ್ಷಿಸಬಹುದಾಗಿದೆ. 2. ಬೀಟಿಂಗ್ ರಿಟ್ರೀಟ್ ಇದರಲ್ಲಿ ಮಿಲಿಟರಿಯ ಪೂರ್ಣ ಡ್ರೆಸ್ ರಿಹರ್ಸಲ್ ಅನ್ನು ಕಣ್ತುಂಬಿಕೊಳ್ಳಬಹುದು. 3. ಬೀಟಿಂಗ್ ರಿಟ್ರೀಟ್ ಜನವರಿ 29ರಂದು ನಡೆಯಲಿದ್ದು, ಇದರಲ್ಲಿ ವಿಭಿನ್ನ ರೀತಿಯ ಪ್ರದರ್ಶನಗಳು, ಉತ್ಸವಗಳು ನಡೆಯಲಿದೆ. ಅಪಾರ ಪ್ರಮಾಣದಲ್ಲಿ ಜನರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಟಿಕೆಟ್ ದರ
ಗಣರಾಜ್ಯೋತ್ಸವದ ಮೆರವಣಿಗೆ ವೀಕ್ಷಣೆಗೆ 20 ರೂ. ಅಥವಾ 100 ರೂ., ಪೂರ್ಣ ಡ್ರೆಸ್ ರಿಹರ್ಸಲ್ 20 ರೂ, ಬೀಟಿಂಗ್ ರಿಟ್ರೀಟ್ 100 ರೂ. ನಲ್ಲಿ ಟಿಕೆಟ್ ಲಭ್ಯವಿರುತ್ತದೆ. ಟಿಕೆಟ್ ಮಾರಾಟ ಜನವರಿ 5 ರಿಂದ 14ರವರೆಗೆ ಅಂದರೆ ಕೋಟಾಗಳು ಖಾಲಿಯಾಗುವವರೆಗೆ ಪ್ರತಿದಿನ ಬೆಳಗ್ಗೆ 9 ರಿಂದ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ.
ಟಿಕೆಟ್ ಬುಕ್ಕಿಂಗ್ ಮಾಡಲು ಅಧಿಕೃತ ಪೋರ್ಟಲ್ www.aamantran.mod.gov.in ನಲ್ಲಿ ಯಾರು ಬೇಕಾದರೂ ಮಾಡಬಹುದಾಗಿದೆ. ಟಿಕೆಟ್ ಬುಕ್ ಮಾಡಲು ಆಫ್‌ಲೈನ್ ಕೌಂಟರ್‌ಗಳು ಲಾಭವಿದೆ. ದೆಹಲಿಯಲ್ಲಿ ಆರು ದೆಹಲಿ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಜನವರಿ 5– 14ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ. ಇಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತು ಚೀಟಿ, ಪಾಸ್‌ಪೋರ್ಟ್ ಇತ್ಯಾದಿ ಯಾವುದಾದರು ಒಂದು ಗುರುತು ಪತ್ರವನ್ನು ತೋರಿಸಿ ಟಿಕೆಟ್ ಬುಕ್ಕಿಂಗ್ ಮಾಡಬಹುದು.
M V Negalur Column: ಸಾಲುಮರದ ಸಾಧಕಿಯೊಂದಿಗೆ ಮೊದಲ ಭೇಟಿ
ಟಿಕೆಟ್ ಬುಕ್ ಮಾಡಲು ತೆಗೆದಿರುವ ಕೌಂಟರ್ ಗಳು ಸೇನಾ ಭವನ (ಗೇಟ್ 5), ಶಾಸ್ತ್ರಿ ಭವನ (ಗೇಟ್ 3), ಜಂತರ್ ಮಂತರ್ (ಮುಖ್ಯ ದ್ವಾರ), ಸಂಸತ್ತಿನ ಭವನ (ಸ್ವಾಗತ), ರಾಜೀವ್ ಚೌಕ್ ಮೆಟ್ರೋ (ಡಿ ಬ್ಲಾಕ್, ಗೇಟ್ಸ್ 3– 4), ಕಾಶ್ಮೀರ ಗೇಟ್ ಮೆಟ್ರೋ (ಕಾನ್ಕೋರ್ಸ್, ಗೇಟ್ 8).
ಟಿಕೆಟ್ ಬುಕ್ಕಿಂಗ್ ಬಳಿಕ rashtraparv.mod.gov.in ನಲ್ಲಿ ಎಲ್ಲಾ ಮಾರ್ಗದರ್ಶಿ ವಿವರಗಳನ್ನು ಪಡೆಯಬಹುದಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.