ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Student Detained: ರಣರಂಗವಾದ ಹೈದರಾಬಾದ್ ವಿವಿ, ಪೊಲೀಸರಿಂದ 53 ವಿದ್ಯಾರ್ಥಿಗಳ ಬಂಧನ

Student Detained: ಹೈದರಾಬಾದ್‌ ವಿಶ್ವವಿದ್ಯಾಲಯವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ತೆಲಂಗಾಣ ಸರ್ಕಾರದ ಒಂದು ನಿರ್ಧಾರದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿ ಕ್ಯಾಂಪಸ್‌ನ ಪೂರ್ವ ಭಾಗದಲ್ಲಿರುವ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಹೈದರಾಬಾದ್ ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಕ್ಯಾಂಪಸ್ ಭೂ ಸ್ವಾಧೀನದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ವಿದ್ಯಾರ್ಥಿಗಳ ಪ್ರತಿಭಟನೆ

Profile Sushmitha Jain Apr 1, 2025 5:30 AM

ಹೈದರಾಬಾದ್‌: ಹೈದರಾಬಾದ್‌ ವಿಶ್ವವಿದ್ಯಾಲಯ(Hyderabad University)ವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ತೆಲಂಗಾಣ ಸರ್ಕಾರ(Telangana Government) ದ ಒಂದು ನಿರ್ಧಾರದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿ ಕ್ಯಾಂಪಸ್‌ನ ಪೂರ್ವ ಭಾಗದಲ್ಲಿರುವ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ(Student Protest) ನಡೆಸಿದ ಹೈದರಾಬಾದ್ ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗ(Students Detained)ಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪೊಲೀಸರ ಈ ನಡೆಯು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕ್ಯಾಂಪಸ್‌ನೊಳಗೆ ಆಗಮಿಸಿದ ಬುಲ್ಡೋಜರ್‌ಗಳನ್ನು ಗಮನಿಸಿದ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕೆಲವರು ಬುಲ್ಡೋಜರ್‌ಗಳ ಮೇಲೆ ಹತ್ತಿ ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಪ್ರತಿಭಟನೆ ತಾರಕಕ್ಕೇರಿದಾಗ, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದಾದ ನಂತರ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ 53 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರತಿಭಟನೆಗೆ ಕಾರಣವೇನು?

ಈಗಾಗಲೇ, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ತೆಲಂಗಾಣ ಸರ್ಕಾರ ಈ ಪ್ರದೇಶದಲ್ಲಿದ್ದ 400 ಎಕರೆ ಭೂಮಿಯನ್ನು ಹರಾಜು ಹಾಕಲು ಯೋಜನೆ ಹಾಕಿಕೊಂಡಿತ್ತು. ಹೈದರಾಬಾದ್ ವಿಶ್ವವಿದ್ಯಾಲಯದ ಗಡಿಯಲ್ಲಿರುವ ಕಾಂಚ ಗಚಿಬೌಲಿಯಲ್ಲಿರುವ ಭೂಮಿ ಹರಾಜಿಗೆ ವಿದ್ಯಾರ್ಥಿಗಳು ವಿರೋಧಿಸಿದ್ದರು. ಇದನ್ನು ಹರಾಜು ಹಾಕುವುದು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ವಿದ್ಯಾರ್ಥಿಗಳ ವಾದವಾಗಿದೆ. ಈ ವಾದವನ್ನು ಬೆಂಬಲಿಸುವ ವಿದ್ಯಾರ್ಥಿಗಳ ಗುಂಪು ಭಾನುವಾರ ಪ್ರತಿಭಟನೆ ನಡೆಸಿದೆ.

ಈ ಸುದ್ದಿಯನ್ನು ಓದಿ: Viral Video: ಮೆಟ್ರೋದಲ್ಲಿ ಸೀಟಿಗಾಗಿ ಮಹಿಳೆಯರೊಂದಿಗೆ ಜಗಳಕ್ಕಿಳಿದ ವ್ಯಕ್ತಿ; ಬಿದ್ದು ಬಿದ್ದು ನಕ್ಕ ಪ್ರಯಾಣಿಕರು- ಫನ್ನಿ ವಿಡಿಯೊ ಫುಲ್‌ ವೈರಲ್‌

ವಿದ್ಯಾರ್ಥಿಗಳು ಹೇಳುವುದೇನು?

ತೆರವು ಕಾರ್ಯಾಚಾರಣೆಗೆ ಬಂದ ಜೆಸಿಬಿಗಳನ್ನು ತಡೆದ ವಿದ್ಯಾರ್ಥಿಗಳು ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. "ಅರಣ್ಯ ಭೂಮಿಯನ್ನು ಏಕೆ ನಾಶ ಮಾಡುತ್ತಿದ್ದಾರೆಂದು ನಾವು ಕೇಳಲು ಬಂದಿದ್ದೆವು. ಆದರೆ, ಅವರು ನಮ್ಮನ್ನು ಬಲವಂತವಾಗಿ ಬಂಧಿಸಿದ್ದು, ಅನುಚಿತವಾಗಿ ಸ್ಪರ್ಶಿಸಲು ಮುಂದಾದರು" ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ. ಪೊಲೀಸರ ಕ್ರಮವನ್ನು ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (UoHSU) ಖಂಡಿಸಿದೆ. UoHSU ಪ್ರಕಾರ, ವಿದ್ಯಾರ್ಥಿಗಳು ಶಾಂತಿಯುತ ರ್ಯಾಲಿಯನ್ನು ಮಾತ್ರ ಆಯೋಜಿಸಿದ್ದರು. ಅರಣ್ಯ ಭೂಮಿ ತೆರವಿಗೆ ಜೆಸಿಬಿಗಳನ್ನು ಬಳಸಿದರೆ ಕ್ಯಾಂಪಸ್‌ನ ಪರಿಸರ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಪಾಯ ಉಂಟಾಗುತ್ತದೆ.

ಭೂಮಿ ನಮ್ಮದಲ್ಲ ಎಂದ ವಿವಿ

ಅತಿಕ್ರಮಣ ತೆರವು ಕುರಿತು ಪ್ರತಿಕ್ರಿಯಿಸಿದ ಹೈದರಬಾದ್‌ ವಿಶ್ವವಿದ್ಯಾಲಯವು, ತೆರವು ಕಾರ್ಯ ನಡೆಯುತ್ತಿದ್ದ ಭೂಮಿ ವಿವಿಗೆ ಸೇರಿಲ್ಲ ಎಂದಿದೆ. “ವಿವಾದಿತ ಭೂಮಿ ವಿಶ್ವವಿದ್ಯಾಲಯಕ್ಕೆ ಕಾನೂನುಬದ್ಧವಾಗಿ ಹಂಚಿಕೆಯಾದ ಪ್ರದೇಶದ ಭಾಗವಲ್ಲ” ಎಂದು ವಿವಿಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಹರಾಜು ಪ್ರಕ್ರಿಯೆ ಮತ್ತು ಭೂಮಿಯ ಬಳಕೆಯ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೊಲೀಸರು 53 ಜನರನ್ನು ಬಂಧಿಸಿದ್ದಾರೆ. ಈ ಕುರಿತು ಮಾತನಾಡಿರು ಅಧಿಕಾರಿಯೊಬ್ಬರು, “ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸರ್ಕಾರಿ ಅಧಿಕಾರಿಗಳ ಕೆಲಸ ಮಾಡದಂತೆ ಅಡ್ಡಿಪಡಿಸಿದರು ಮತ್ತು ಕೆಲವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು” ಎಂದು ತಿಳಿಸಿದ್ದಾರೆ.