ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತೃಣಮೂಲ ಕಾಂಗ್ರೆಸ್ ಬಂಡಾಯಗಾರರಿರುವ ಎನ್‌ಸಿಪಿಐಗೆ ಅಹ್ವಾನ: ಸರ್ವಪಕ್ಷ ಸಭೆಯಿಂದ ಹೊರನಡೆದ ವಿರೋಧ ಪಕ್ಷದ ನಾಯಕರು

ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯಗಾರರು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಅನ್ನು ಸೇರಿದ್ದು ಸರ್ವಪಕ್ಷ ಸಭೆಗೆ ಅಹ್ವಾನ ನೀಡಲಾಗಿತ್ತು. ಇದು ವಿರೋಧ ಪಕ್ಷದ ನಾಯಕರನ್ನು ಕೆರಳಿಸಿದ್ದು ಮಳೆಗಾಲದ ಅಧಿವೇಶನಕ್ಕೂ ಮುನ್ನ ಕರೆದಿರುವ ಸಭೆಯಿಂದ ಅವರು ಹೊರನಡೆದು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಸರ್ವಪಕ್ಷ ಸಭೆ ಬಹಿಷ್ಕರಿಸಿದ ವಿರೋಧ ಪಕ್ಷದ ನಾಯಕರು

ಸಂಗ್ರಹ ಚಿತ್ರ -

ನವದೆಹಲಿ: ಮಳೆಗಾಲದ ಅಧಿವೇಶನಕ್ಕೂ (Monsoon Session) ಮೊದಲು ಕರೆಯಲಾದ ಸರ್ವಪಕ್ಷಗಳ ಸಭೆಯಲ್ಲಿ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾದ (Nationalist Citizens Party of India) ನಾಯಕರು ಪಾಲ್ಗೊಂಡಿದ್ದು, ಇದು ವಿರೋಧ ಪಕ್ಷದ ನಾಯಕರನ್ನು (Opposition leader) ಕೆರಳಿಸಿದೆ. ಇದನ್ನು ವಿರೋಧಿಸಿ ಅವರು ಸಭೆಯಿಂದ ಹೊರ ನಡೆದು ಸಾಂಕೇತಿಕ ಪ್ರತಿಭಟನೆ ನಡೆಸಿದರು. ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯಗಾರರು ( Trinamool rebel) ಎನ್‌ಸಿಪಿಐ ಸೇರಿದ ಬಳಿಕ ಸಂಸತ್ತಿನ ವಿರೋಧ ಪಕ್ಷವು ಎನ್‌ಸಿಪಿಐ ತನ್ನ ಪ್ರಬಲ ಪ್ರತಿಸ್ಪರ್ಧಿ ಎಂದೇ ಭಾವಿಸಿದೆ.

ಮಳೆಗಾಲದ ಅಧಿವೇಶನಕ್ಕೂ ಮೊದಲು ಭಾನುವಾರ ನಡೆದ ಸರ್ವಪಕ್ಷ ಸಭೆಯನ್ನು ವಿರೋಧ ಪಕ್ಷದ ನಾಯಕರು ಬಹಿಷ್ಕಾರ ಮಾಡಿದರು. ತೃಣಮೂಲ ಕಾಂಗ್ರೆಸ್ ನಿಂದ ಹೊರನಡೆದಿರುವ ಬಂಡಾಯಗಾರರ ದೊಡ್ಡ ಸಮೂಹ ಕಳೆದ ಜೂನ್ ತಿಂಗಳಲ್ಲಿ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾವನ್ನು ಸೇರಿದೆ. ಅದು ಸಂಸತ್ತಿನ ವೆಬ್ ಸೈಟ್ ನಲ್ಲಿ ಗುರುತು ಇಲ್ಲದ ಪಕ್ಷ ಎಂದು ಹೇಳಿ ವಿರೋಧ ಪಕ್ಷದ ನಾಯಕರು ಅವರು ಸಭೆಯಲ್ಲಿ ಭಾಗಿಯಾಗಿರುವುದನ್ನು ವಿರೋಧಿಸಿದರು. ಸಭೆಯಿಂದ ಕೆಲ ಕಾಲ ಹೊರ ನಡೆದು ಪ್ರತಿಭಟನೆ ತೋರಿದರು.

ಆಸ್ಪತ್ರೆಯಲ್ಲಿ ಅಕ್ರಮವಾಗಿ ಸೋನಮ್ ವಾಂಗ್‌ಚುಕ್ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಗೀತಾಂಜಲಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷದ ಸುಮಾರು 20 ಬಂಡಾಯ ಶಾಸಕರು ಕಳೆದ ಜೂನ್‌ ತಿಂಗಳಲ್ಲಿ ಎನ್‌ಸಿಪಿಐ ಸೇರಿದ್ದರು. ತೃಣಮೂಲ ಕಾಂಗ್ರೆಸ್ ನಲ್ಲಿ ಒಡಕಿನ ಬಳಿಕ ಎನ್‌ಸಿಪಿಐ ಸಂಸದರ ಸಂಖ್ಯೆ ಸಂಸತ್ತಿನಲ್ಲಿ ಏಕಾಏಕಿ ಏರಿಕೆಯಾಗಿರುವುದು ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ಸಂಸತ್ತಿನಲ್ಲಿ ತನಗೆ ಪ್ರಬಲ ಪ್ರತಿಸ್ಪರ್ಧಿ ಎಂದೇ ಅದು ಭಾವಿಸಿದೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ತೃಣಮೂಲ ಸಂಸದ ಸೌಗತ ರಾಯ್, ಸರ್ವಪಕ್ಷದ ಸಭೆಯಲ್ಲಿ ಎನ್‌ಸಿಪಿಐ ಭಾಗವಹಿಸಲು ಸಾಧ್ಯವಿಲ್ಲ. ಯಾಕೆಂದರೆ ತೃಣಮೂಲದ ಬಂಡಾಯ ಸಂಸದರು ಅದಕ್ಕೆ ಸೇರಿರುವುದಕ್ಕೆ ಇನ್ನು ಅನುಮೋದನೆ ಸಿಕ್ಕಿಲ್ಲ. ಅಲ್ಲದೇ ಸಂಸತ್ತಿನ ವೆಬ್‌ಸೈಟ್‌ನಲ್ಲಿ ಗುರುತಿಸಲಾಗದ ಪಕ್ಷ ಅದು. ಹೀಗಾಗಿ ಅದನ್ನು ಸರ್ವಪಕ್ಷಗಳ ಸಭೆಗೆ ಕರೆದಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಮಾಧ್ಯಮ ಉಸ್ತುವಾರಿ ಈ ಕುರಿತು ಪ್ರತಿಕ್ರಿಯಿಸಿ, ಸರ್ವಪಕ್ಷಗಳ ಸಭೆಯಿಂದ ಎಲ್ಲಾ ವಿರೋಧ ಪಕ್ಷಗಳು ಕೆಲವು ನಿಮಿಷಗಳ ಕಾಲ ಹೊರನಡೆದವು. ಸ್ಪೀಕರ್ ಅವರೊಂದಿಗೆ ಅಂತಿಮ ನಿರ್ಧಾರ ಬಾಕಿ ಇರುವಾಗ ಎನ್‌ಸಿಪಿಐ ಅನ್ನು ಆಹ್ವಾನಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಇದು ಪ್ರತಿಭಟನೆಯಾಗಿದೆ ಎಂದು ಹೇಳಿದರು.

ರಾಜ್ಯಸಭೆಯ ವಿರೋಧ ಪಕ್ಷದ ಉಪ ನಾಯಕ ಕಾಂಗ್ರೆಸ್‌ನ ಪ್ರಮೋದ್ ತಿವಾರಿ ಅವರು ಎನ್‌ಸಿಪಿಐ ಅನ್ನು ಸಭೆಗೆ ಆಹ್ವಾನಿಸಿದ್ದರ ವಿರುದ್ಧ ನಾವು ಸಾಂಕೇತಿಕ ಬಹಿಷ್ಕಾರ ಮಾಡಿರುವುದಾಗಿ ತಿಳಿಸಿದರು.

ಮಳೆಗಾಲದ ಅಧಿವೇಶನದಲ್ಲಿ ರಾಮ ಮಂದಿರ ದೇಣಿಗೆ ಹಗರಣ, ನೀಟ್ ಪತ್ರಿಕೆ ಸೋರಿಕೆ, ಕೃಷಿ ಮತ್ತು ಪೆಟ್ರೋಲ್‌ನಲ್ಲಿ ಎಥಾನಲ್ 20 ಮಿಶ್ರಣ, ಗಡಿ ನಿರ್ಣಯ ಕುರಿತ ವಿಷಯಗಳಿಗೆ ಸಂಬಂಧಿಸಿ ಪ್ರಶ್ನೆ ಎತ್ತಲಾಗುವುದು ಎಂದು ಹೇಳಿದರು.

ಸಿಜೆಪಿ ಸಂಸತ್ ಮೆರವಣಿಗೆಗೆ ದೆಹಲಿ ಪೊಲೀಸರಿಂದ ನಿರಾಕರಣೆ; ಕಾಕ್ರೋಚ್‌ ಪಕ್ಷಕ್ಕೆ ಕೊಟ್ಟ ವಾರ್ನಿಂಗ್‌ ಏನು?

ಎನ್‌ಸಿಪಿಐ ಬಣದ ನಾಯಕ ಲೋಕಸಭಾ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಸಂಸದೀಯ ವ್ಯವಹಾರಗಳ ಸಚಿವರಿಗೆ ಧನ್ಯವಾದ ಸಲ್ಲಿಸಿದರು. ಎನ್‌ಸಿಪಿಐ ಬಣದೊಂದಿಗಿನ ವಿಲೀನ ನಿರ್ಧಾರಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಅಗತ್ಯ ದಾಖಲೆಗಳನ್ನು ಸ್ಪೀಕರ್‌ಗೆ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.