ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget 2026 Live: ಕೇಂದ್ರದ ಬಜೆಟ್‌ ಮಂಡನೆಗೆ ಕ್ಷಣಗಣನೆ; ಜನ ಸಾಮಾನ್ಯರಿಗೆ ಸಿಗುತ್ತಾ ಬಂಪರ್‌ ಕೊಡುಗೆ?

Budget Session 2026 Parliament LIVE: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು 2026-27 ನೇ ಸಾಲಿನ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದು ಸೀತಾರಾಮನ್ ಅವರು ಮಂಡಿಸುತ್ತಿರುವ ಸತತ ಒಂಬತ್ತನೇ ಬಜೆಟ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಒಂಬತ್ತನೇ ಬಜೆಟ್‌ ಆಗಿದೆ. ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷದ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಲಾಗುವುದು. ಕಳೆದ ಬಾರಿಯಂತೆ ಈ ಬಾರಿಯ ಬಜೆಟ್‌ ಸಹ ಜನ ಸಾಮಾನ್ಯರ ಬಜೆಟ್‌ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಕೇಂದ್ರದ ಬಜೆಟ್‌ ಮಂಡನೆಗೆ ಕ್ಷಣಗಣನೆ

ಕೇಂದ್ರ ಬಜೆಟ್‌ 2026-27 -

Vishakha Bhat
Vishakha Bhat Feb 1, 2026 8:35 AM

ನಿರ್ಮಲಾ ಸೀತಾರಾಮನ್‌ ಅವರು 11 ಗಂಟೆಗೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಪ್ರಾದೇಶಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ನೇಯ್ಗೆಯ ಸೀರೆಗಳನ್ನು ಆಯ್ಕೆ ಮಾಡುತ್ತಾರೆ. ಕಳೆದ ಬಾರಿ ಕರ್ನಾಟಕದ ಇಳಕಲ್‌ ಸೀರೆಯುಟ್ಟು ಅವರು ಸಂಸತ್ತಿಗೆ ಬಂದಿದ್ದರು. ಈ ಬಾರಿ ಯಾವ ಬಣ್ಣದ ಸೀರೆ ಧರಿಸಲಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ.

Live News
Feb. 1, 2026, 9:18 a.m.

ಸಂಸತ್‌ ಭವನಕ್ಕೆ ನಿರ್ಮಲಾ ಸೀತಾರಾಮನ್‌ ಆಗಮನ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ತಂಡದೊಂದಿಗೆ, ಹಣಕಾಸು ಸಚಿವಾಲಯದ ಹೊರಗೆ ಬಜೆಟ್ ಟ್ಯಾಬ್ಲೆಟ್‌ನೊಂದಿಗೆ ಆಗಮಿಸಿದರು. ಸಂಪ್ರದಾಯದಂತೆ ಮೊಸರು ಸಕ್ಕರೆಯನ್ನು ತಿಂದು ಬಜೆಟ್‌ನ ಆಚರಣೆಯನ್ನು ಪ್ರಾರಂಭಿಸಲಾಯಿತು.

Feb. 1, 2026, 9:13 a.m.

ಕಡಿಮೆಯಾಗುತ್ತಾ ಚಿನ್ನ ಬೆಳ್ಳಿ ದರ?

ಸತತವಾಗಿ ಏರಿಕೆ ಕಾಣುತ್ತಿರುವ ಚಿನ್ನ, ಬೆಳ್ಳಿದರದಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಪ್ರಸ್ತುತ, ಭಾರತದಲ್ಲಿ ಬೆಳ್ಳಿ 7.5 ಪ್ರತಿಶತ ಆಮದು ಸುಂಕಕ್ಕೆ ಒಳಪಟ್ಟಿರುತ್ತದೆ, ಜೊತೆಗೆ 3 ಪ್ರತಿಶತ GST ಕೂಡ ಇದೆ. ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕಗಳನ್ನು ಕಡಿಮೆ ಮಾಡುವುದರಿಂದ ಬೆಲೆಗಳು ಕಡಿಮೆಯಾಗುತ್ತವೆ ಮತ್ತು ಬೇಡಿಕೆ ಹೆಚ್ಚಾಗುತ್ತದೆ.

Feb. 1, 2026, 8:55 a.m.

20 ವರ್ಷಗಳ ಬಳಿಕ ಭಾನುವಾರ ಬಜೆಟ್‌!

2000ನೇ ಇಸವಿಯ ನಂತರ ಕೇಂದ್ರ ಬಜೆಟ್ ಅನ್ನು ಭಾನುವಾರದಂದು ಮಂಡಿಸಲಾಗುತ್ತಿರುವುದು ಇದೇ ಮೊದಲು. ಕೊನೆಯ ಬಾರಿಗೆ ಭಾನುವಾರ ಬಜೆಟ್ ಮಂಡಿಸಿದ್ದು ಫೆಬ್ರವರಿ 28, 1999 ರಂದು. ವಾಜಪೇಯಿ ಆಡಳಿತಾವಧಿಯಲ್ಲಿ, ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಭಾನುವಾರದಂದು ಬಜೆಟ್ ಮಂಡಿಸಿದ್ದರು. ಇದೀಗ ನಿರ್ಮಲಾ ಸೀತಾರಾಮನ್‌ ಭಾನುವಾರದಂದು ಈ ಬಾರಿಯ ಬಜೆಟ್‌ ಮಂಡನೆ ಮಾಡಲಿದ್ದಾರೆ.

Feb. 1, 2026, 8:35 a.m.

ಜನಪರ ಬಜೆಟ್‌?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್‌ ಮಂಡಿಸಲಿದ್ದಾರೆ. ಸರ್ಕಾರ ಈ ಬಜೆಟ್‌ ಕುರಿತು ಜನಪರ ಬಜೆಟ್‌ ಎಂದು ಸುಳಿವು ನೀಡಿದ್ದು, ಜನರಿಗೆ ಬಜೆಟ್‌ ಮೇಲೆ ಇನ್ನಷ್ಟು ನಿರೀಕ್ಷೆ ಹೆಚ್ಚಾಗಿದೆ.