ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ruturaj Gaikwad: ಸಿಎಸ್‌ಕೆ ನಾಯಕತ್ವದ ಬಗ್ಗೆ ಸ್ಪಷ್ಟನೆ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌

ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿಯೂ ಋತುರಾಜ್‌ ಗಾಯಕ್ವಾಡ್‌ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆಂದು ಚೆನ್ನೈ ಫ್ರಾಂಚೈಸಿ ಖಚಿತಪಡಿಸಿದೆ. ಏಕೆಂದರೆ ರಾಜಸ್ಥಾನ್‌ ರಾಯಲ್ಸ್‌ನಿಂದ ಸಂಜು ಸ್ಯಾಮ್ಸನ್‌ ಅವರನ್ನು ಟ್ರೇಡ್‌ ಮಾಡಿಕೊಂಡ ಬಳಿಕ ಸಿಎಸ್‌ಕೆ ನಾಯಕತ್ವದ ಬಗ್ಗೆ ಅನುಮಾನಗಳು ಶುರುವಾಗಿದ್ದವು. ಇದೀಗ ಸಿಎಸ್‌ಕೆ ನಾಯಕತ್ವದ ಬಗ್ಗೆ ಸ್ಪಷ್ಟನೆ ನೀಡಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಋತುರಾಜ್‌ ಗಾಯಕ್ವಾಡ್‌ ನಾಯಕ!

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಋತುರಾಜ್‌ ಗಾಯಕ್ವಾಡ್‌ ನಾಯಕ. -

Profile
Ramesh Kote Nov 15, 2025 10:34 PM

ನವದೆಹಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವನ್ನು ಋತರಾಜ್‌ ಗಾಯಕ್ವಾಡ್‌ (Ruturaj Gaikwad) ಮುನ್ನಡೆಸಲಿದ್ದಾರೆಂದು ಚೆನ್ನೈ ಫ್ರಾಂಚೈಸಿ ಖಚಿತಪಡಿಸಿದೆ. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ನಿಂದ ಸಂಜು ಸ್ಯಾಮ್ಸನ್‌ ಅವರನ್ನು ಟ್ರೇಡ್‌ ಡೀಲ್‌ ಮಾಡಿಕೊಂಡ ಬಳಿಕ ನಾಯಕತ್ವದ ಬಗ್ಗೆ ಎದ್ದಿದ್ದ ಎಲ್ಲಾ ಅನುಮಾನಗಳಿಗೂ ಇದೀಗ ಸ್ಪಷ್ಟನೆ ಸಿಕ್ಕಿದೆ. ಶನಿವಾರ ಉಳಿಸಿಕೊಂಡ ಹಾಗೂ ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಸಿಎಸ್‌ಕೆ ಫ್ರಾಂಚೈಸಿ ಈ ಮಹತ್ವದ ಸುದ್ದಿಯನ್ನು ಪ್ರಕಟಿಸಿದೆ.

ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್‌ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವವವನ್ನು ನೀಡಬಹುದೆಂದು ಅಂದಾಜಿಸಲಾಗಿತ್ತು. ಏಕೆಂದರೆ ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಅವರನ್ನು ಟ್ರೇಡ್‌ ಡೀಲ್‌ ಮಾಡಿಕೊಂಡಿರುವುದು ಕೂಡ ಇದೇ ಕಾರಣಕ್ಕೆ ಎಂದು ಹಲವು ಕ್ರಿಕೆಟ್‌ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಸಿಎಸ್‌ಕೆ ತನ್ನ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಋತುರಾಜ್‌ ಗಾಯಕ್ವಾಡ್‌ ಅವರೇ ನಮ್ಮ ಎಂದು ಖಚಿತಪಡಿಸಿದೆ.

2024ರ ಐಪಿಎಲ್ ಟೂರ್ನಿಯ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಗಾಯಕ್ವಾಡ್ ಅವರನ್ನು ಘೋಷಿಸಲಾಗಿತ್ತು. ಆದರೆ ಅವರ ನಾಯಕತ್ವದಲ್ಲಿ ಸಿಎಸ್‌ಕೆ ಆ ಸೀಸನ್‌ನಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಮಹಾರಾಷ್ಟ್ರದ ಬ್ಯಾಟ್ಸ್‌ಮನ್ 2025ರಲ್ಲಿಯೂ ನಾಯಕನಾಗಿ ಬಂದಿದ್ದರು. ಆದರೆ, ಗಾಯಕ್ಕೆ ತುತ್ತಾದ ಕಾರಣ ಟೂರ್ನಿಯ ಮಧ್ಯದಲ್ಲಿ ತಂಡದಿಂದ ನಿರ್ಗಮಿಸಿದ್ದರು ಹಾಗೂ ಎಂಎಸ್ ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.

IPL 2026: ಆರ್‌ಸಿಬಿ ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ, ಬಿಡುಗಡೆ ಮಾಡಿದ ಆಟಗಾರರ ಪಟ್ಟಿ!

2025ರ ಐಪಿಎಲ್‌ ಟೂರ್ನಿಯಲ್ಲಿ ಸಿಎಸ್‌ಕೆ ಅತ್ಯಂತ ನೀರಸ ಪ್ರದರ್ಶನವನ್ನು ತೋರಿತ್ತು. ಏಕೆಂದರೆ ನಿಧಾನಗತಿಯ ಆರಂಭದ ನಂತರ ತಂಡವನ್ನು ಕಮ್‌ಬ್ಯಾಕ್‌ ಮಾಡಿಸಲು ಎಂಎಸ್‌ ಧೋನಿಯಿಂದ ಸಾಧ್ಯವಾಗಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಸಿಎಸ್‌ಕೆ ಕೊನೆಯ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಮುಗಿಸಿತ್ತು.

ಋತುರಾಜ್ ಗಾಯಕ್ವಾಡ್‌ ಹಲವು ವರ್ಷಗಳಲ್ಲಿ ಸಿಎಸ್‌ಕೆ ಪರ ಅತ್ಯಂತ ಸ್ಥಿರವಾದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. 2020 ರಲ್ಲಿ ಪಾ=ದಾರ್ಪಣೆ ಮಾಡಿದ ನಂತರ, ಅವರು 71 ಪಂದ್ಯಗಳಲ್ಲಿ 40.35ರ ಸರಾಸರಿ ಮತ್ತು 137.47ರ ಸ್ಟ್ರೈಕ್ ರೇಟ್‌ನಲ್ಲಿ 2502 ರನ್ ಗಳಿಸಿದ್ದಾರೆ.



ಚೆನ್ನೈಸೂಪರ್‌ ಕಿಂಗ್ಸ್‌ ಉಳಿಸಿಕೊಂಡ ಆಟಗಾರರು: ಋತುರಾಜ್‌ ಗಾಯಕ್ವಾಡ್‌, ಡೆವಾಲ್ಡ್‌ ಬ್ರೆವಿಸ್‌, ಎಂಎಸ್‌ ಧೋನಿ, ಊರ್ವಿಲ್‌ ಪಟೇಲ್‌, ಶಿವಂ ದುಬೆ, ಜೇಮಿ ಓವರ್ಟನ್‌, ರಾಮಕೃಷ್ಣ ಘೋಷ್‌, ನೂರ್‌ ಅಹ್ಮದ್‌, ಖಲೀಲ್‌ ಅಹ್ಮದ್‌, ಅನ್ಶುಲ್‌ ಕಾಂಬೋಜ್‌, ಗುರ್ಜನ್‌ಪ್ರೀತ್‌ ಸಿಂಗ್‌, ನೇಥನ್‌ ಎಲ್ಲಿಸ್‌, ಶ್ರೇಯಸ್‌ ಗೋಪಾಲ್‌, ಮುಕೇಶ್‌ ಚೌಧರಿ

ಬಿಡುಗಡೆಯಾದ ಆಟಗಾರರು: ರಚಿನ್‌ ರವೀಂದ್ರ, ದೀಪಕ್‌ ಹೂಡ, ವಿಜಯ್‌ ಶಂಕರ್‌, ಶೇಖ್‌ ರಶೀದ್‌, ಕಮಲೇಶ್‌ ನಾಗರಕೋಟಿ, ಮತೀಶ ಪತಿರಣ, ರಾಹುಲ್‌ ತ್ರಿಪಾಠಿ, ವಂಶ್‌ ಬೇಡಿ, ಆಂಡ್ರೆ ಸಿದ್ದಾರ್ಥ್‌, ಡೆವೋನ್‌ ಕಾನ್ವೆ, ಸ್ಯಾಮ್‌ ಕರನ್‌ (ಟ್ರೇಡ್‌ ಔಟ್‌), ರವೀಂದ್ರ ಜಡೇಜಾ (ಟ್ರೇಡ್‌ ಔಟ್‌)