High Waist Pants Fashion: ಕ್ಲಾಸಿಕ್ ಲುಕ್ ಪ್ರಿಯರನ್ನು ಸವಾರಿ ಮಾಡುತ್ತಿರುವ ಹೈ ವೇಸ್ಟ್ ಪ್ಯಾಂಟ್ ಫ್ಯಾಷನ್!
High Waist Pants Fashion: ಕ್ಲಾಸಿಕ್ ಲುಕ್ಗಾಗಿ ಇದೀಗ ಹೈ ವೇಸ್ಟ್ ಪ್ಯಾಂಟ್ಗಳು ಮರಳಿವೆ. ಮಾನಿನಿಯರಿಗೆ ಸ್ಲಿಮ್ ಲುಕ್ ನೀಡುವ ಇವು ಕಾಲುಗಳು ಉದ್ದವಾಗಿ ಕಾಣುವಂತೆ ಭ್ರಮೆ ಸೃಷ್ಟಿಸುತ್ತವೆ. ಹಾಗಾಗಿ ಇವುಗಳನ್ನು ಧರಿಸುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಚಿತ್ರಕೃಪೆ: ಪಿಕ್ಸೆಲ್


ಹೈ ವೇಸ್ಟ್ ಪ್ಯಾಂಟ್ ಫ್ಯಾಷನ್ ಮರಳಿದೆ. ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಲೋ ವೇಸ್ಟ್ ಪ್ಯಾಂಟ್ಗಳ ಟ್ರೆಂಡ್ ಇಂದು ಕಡಿಮೆಯಾಗುತ್ತಿದ್ದು, ಅದರ ಬದಲಾಗಿ ಸ್ತ್ರೀಯರಿಗೆ ಒಪ್ಪುವ ಕ್ಲಾಸಿ ಹೈ ವೇಸ್ಟ್ ಟ್ರೌಸರ್ಸ್ ಮತ್ತು ಸ್ಕರ್ಟ್ಗಳು ಈ ಟ್ರೆಂಡ್ಗೆ ಲಗ್ಗೆ ಇಟ್ಟಿವೆ.

ಡಿಸೈನರ್ ರೀಟಾ ಪ್ರಕಾರ, ಉತ್ತಮ ಟೈಲರ್ನಿಂದ ತಯಾರಾದ ಹೈ ವೇಸ್ಟ್ ಶಾರ್ಟ್ ಹಾಗೂ ಟಾಪ್ಗಳ ಜತೆ ಇವು ನೋಡಲು ಸುಂದರವಾಗಿ ಕಾಣುತ್ತವೆ. ಕ್ಲಾಸಿಕ್ ಶರ್ಟ್ ಮತ್ತು ಹೈ ವೇಸ್ಟ್ ಇರುವ ಪ್ಯಾಂಟ್ಗಳು ಉದ್ಯೋಗಸ್ಥ ಮಹಿಳೆಯರಿಗೆ ಹೇಳಿ ಮಾಡಿಸಿದಂತಿರುತ್ತದೆ.

ಹೈ ವೇಸ್ಟ್ ಪ್ಯಾಂಟ್ ಮಿಕ್ಸ್ ಮ್ಯಾಚ್
ಈ ಟ್ರೆಂಡ್ ಸುಲಭವಾಗಿ ರೂಪ ಬದಲಾಯಿಸುವಂತಹದ್ದಾಗಿದ್ದು, ಬಹುತೇಕ ಉಡುಪುಗಳು ನೋಡಲು ಅಗಲವಾಗಿರುತ್ತವೆ. ಇವು ದಿನನಿತ್ಯದ ಬಳಕೆಯಲ್ಲಿ ಹೈ ಲುಕ್ ನೀಡುತ್ತವೆ. ಕ್ಯಾಶುವಲ್ ಲುಕ್ಗಾಗಿ ಹೈ ವೇಸ್ಟ್ ಸ್ಕರ್ಟ್ ಜತೆ ಮಣ್ಣಿನ ಆಭರಣಗಳು ಮತ್ತು ಹೀಲ್ಸ್ ಸಕತ್ ಮ್ಯಾಚ್ ಆಗುತ್ತದೆ. ಗ್ಲಾಮರ್ ಲುಕ್ ಬೇಕಾದಲ್ಲಿ ಚಂಕಿ ನೆಕ್ಲೆಸ್ ಅಥವಾ ಒಂದು ತೆಳುವಾದ ಬೆಲ್ಟನ್ನು ಧರಿಸಬಹುದು ಎಂದು ಸ್ಟೈಲಿಸ್ಟ್ ದಿಶಾ ಸಿಂಪಲ್ ಸಲಹೆ ನೀಡಿದ್ದಾರೆ.

ಸ್ಲಿಮ್ ಎಫೆಕ್ಟ್ ನೀಡುವ ಹೈ ವೇಸ್ಟ್ ಪ್ಯಾಂಟ್
ಸಂಜೆಯ ಗ್ಲಾಮರಸ್ ಲುಕ್ಗಾಗಿ ಅನುಕ್ರಮವಾಗಿರುವ ಸ್ಕರ್ಟ್ ಅಥವಾ ಸಿಲ್ಕ್ ಸ್ಯಾಟಿನ್ ಸ್ಕರ್ಟ್ನೊಂದಿಗೆ ಅತ್ಯುತ್ತಮವಾದ ವಿನ್ಯಾಸವಿರುವ ಬ್ಲೌಸನ್ನು ಧರಿಸಬಹುದು. ಡಿಸೈನರ್ ಪಾಲಿ ಸಚ್ದೇವ್ ಹೇಳುವಂತೆ, ಹೈ ವೇಸ್ಟ್ ವಿನ್ಯಾಸದ ಉಡುಪುಗಳು ಸ್ಲಿಮ್ ಎಫೆಕ್ಟ್ ನೀಡುತ್ತವೆ. ಕಾಲುಗಳು ಉದ್ದವಾಗಿ ಕಾಣುವಂತೆ ಭ್ರಮೆ ಸೃಷ್ಟಿಸುತ್ತದೆ. ಬ್ಲಾಕ್ ಹೈ ವೇಸ್ಟ್ ಟ್ರೌಸರ್ ಮತ್ತು ಕಂಫರ್ಟಬಲ್ ಆಗಿ ಫಿಟ್ ಇರುವ ವೈಟ್ ಟಾಪ್ ಕ್ಲಾಸಿಕ್ ಲುಕ್ ನೀಡುತ್ತವೆ.

ನೆನಪಿರಲಿ
- ಉದ್ಯೋಗಸ್ಥ ಮಹಿಳೆಯರಿಗೆ ಬೆಸ್ಟ್ ಚಾಯ್ಸ್.
- ಇವಕ್ಕೆ ಧರಿಸಲು ಆಫ್ ಶೂ ಸೂಕ್ತ.
- ಪಾಶ್ಚಿಮಾತ್ಯ ವಿನ್ಯಾಸವಿದ್ದರೂ ಎಕ್ಸ್ಪೋಸ್ಗೆ ಆಸ್ಪದ ನೀಡುವುದಿಲ್ಲ.
- ಬ್ಲ್ಯಾಕ್ ಪ್ಯಾಂಟ್ ಎಂತಹ ಸಂದರ್ಭಕ್ಕಾದರೂ ಮ್ಯಾಚ್ ಅಗುತ್ತದೆ.