ಪಶ್ಚಿಮ ಬಂಗಾಳ ಮರು ಮತದಾನದ ನಡುವೆಯೇ ಬಿಜೆಪಿ, ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ
ಪಶ್ಚಿಮ ಬಂಗಾಳದಲ್ಲಿ 15 ಬೂತ್‌ಗಳಲ್ಲಿ ಶನಿವಾರ ಮರು ಮತದಾನ ನಡೆಯುತ್ತಿದ್ದ ನಡುವೆಯೇ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಎರಡನೇ ಹಂತದ ಮತದಾನದ ವೇಳೆ ನಡೆದಿರುವ ದುಷ್ಕೃತ್ಯಗಳ ಕಾರಣದಿಂದ ಭಾರತೀಯ ಚುನಾವಣಾ ಆಯೋಗವು ಮಗ್ರಹತ್ ಪಶ್ಚಿಮ್ ಮತ್ತು ಡೈಮಂಡ್ ಹಾರ್ಬರ್ ನ ಒಟ್ಟು 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶಿಸಿತ್ತು.
ಸಂಗ್ರಹ ಚಿತ್ರ -
ಕೋಲ್ಕತ್ತಾ: ಎರಡನೇ ಹಂತದ ಮತದಾನದ (Voting) ವೇಳೆ ಪಶ್ಚಿಮ ಬಂಗಾಳದ (west bengal) ಕೆಲವು ಮತಗಟ್ಟೆಗಳಿಂದ ಬಂದ ದೂರುಗಳ ಆಧರಿಸಿ ಭಾರತೀಯ ಚುನಾವಣಾ ಆಯೋಗವು (Election Commission) 15 ಬೂತ್‌ಗಳಲ್ಲಿ ಶನಿವಾರ ಮರು ಮತದಾನವನ್ನು (Repolling) ಪ್ರಾರಂಭಿಸಿತ್ತು. ಆರಂಭದಲ್ಲಿ ಶಾಂತಿಯುತವಾಗಿ ನಡೆದಿದ್ದ ಮತದಾನ ಬಳಿಕ ಕೆಲವೆಡೆ ಘರ್ಷಣೆಗೆ ಕಾರಣವಾಯಿತು. ದಕ್ಷಿಣ 24 ಪರಗಣದ ಎರಡು ವಿಧಾನಸಭಾ ಕ್ಷೇತ್ರಗಳಾದ ಮಗ್ರಹತ್ ಪಶ್ಚಿಮದ 11 ಮತಗಟ್ಟೆಗಳು ಮತ್ತು ಡೈಮಂಡ್ ಹಾರ್ಬರ್‌ನ ನಾಲ್ಕು ಮತಗಟ್ಟೆಗಳಲ್ಲಿ ಮರು ಮತದಾನವನ್ನು ನಡೆಸಲಾಗಿದೆ.
ದಕ್ಷಿಣ 24 ಪರಗಣದ ಎರಡು ವಿಧಾನಸಭಾ ಕ್ಷೇತ್ರಗಳಾದ ಮಗ್ರಹತ್ ಪಶ್ಚಿಮ್ ವಿಧಾನಸಭಾ ಕ್ಷೇತ್ರದ 11 ಮತಗಟ್ಟೆಗಳು ಮತ್ತು ಡೈಮಂಡ್ ಹಾರ್ಬರ್‌ನ ನಾಲ್ಕು ಮತಗಟ್ಟೆಗಳಲ್ಲಿ ಶನಿವಾರ ಬೆಳಗ್ಗೆ 7 ಗಂಟೆಗೆ ಸರಿಯಾಗಿ ಶಾಂತಿಯುತವಾಗಿ ಮರು ಮತದಾನ ಆರಂಭವಾಗಿತ್ತು. ಕೆಲವು ಹೊತ್ತಿನ ಬಳಿಕ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ಘರ್ಷಣೆ ನಡೆಸಿದ್ದಾರೆ. ಇದರಿಂದ ಎರಡೂ ಕಡೆಯವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಹಂತದ ಮತದಾನದ ವೇಳೆ ನಡೆದಿರುವ ಚುನಾವಣಾ ದುಷ್ಕೃತ್ಯದ ಆರೋಪದ ಕಾರಣದಿಂದಾಗಿ ಭಾರತೀಯ ಚುನಾವಣಾ ಆಯೋಗವು ಒಟ್ಟು 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶಿಸಿತ್ತು. ಸೋಮವಾರ ಮತ ಎಣಿಕೆಗೆ ಮುನ್ನ ನಡೆದಿರುವ ಈ ಬೆಳವಣಿಗೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಫಾಲ್ಟಾದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದು ಘರ್ಷಣೆಗೆ ಕಾರಣವಾಗಿದೆ.
ಬಿಜೆಪಿಯವರು ಗೆದ್ದರೆ ಮನೆಗಳನ್ನು ಸುಟ್ಟುಹಾಕಲಾಗುವುದು, ರಕ್ತಪಾತ ಮಾಡುವುದಾಗಿ ತೃಣಮೂಲದ ಇಸ್ರಾಫಿಲ್ ಚೌಕಿದಾರ್ ನಮಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ನಾವು ತೃಣಮೂಲಕ್ಕೆ ಮತ ಹಾಕಿದ್ದೇವೆ. ಆದರೆ ಅದಷ್ಟೇ ಪಕ್ಷದವರು ನಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ. ನಾವು ತೃಣಮೂಲಕ್ಕೆ ಮತ ಹಾಕಿದ್ದೇವೆ. ಆದರೆ ಅವರು ನಮ್ಮ ಮೇಲೆ ದಾಳಿ ಮಾಡಿದರು. ಅವರನ್ನು ಕೂಡಲೇ ಬಂಧಿಸಬೇಕೆಂದು ನಾವು ಬಯಸುವುದಾಗಿ ಮತ್ತೋರ್ವ ಮಹಿಳೆ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಮಗ್ರಹತ್ ಪಶ್ಚಿಮದಲ್ಲಿ ಶೇ. 56.33ರಷ್ಟು ಮತ್ತು ಡೈಮಂಡ್ ಹಾರ್ಬರ್‌ನಲ್ಲಿ ಶೇ. 54.9 ರಷ್ಟು ಮತದಾನವಾಗಿದ್ದು, ಇದು ಒಟ್ಟಾರೆ ಮತದಾನ ಶೇಕಡಾ 55.57ರಷ್ಟು ಎಂದು ಹೇಳಿದೆ.
ಗುರುವಿಗೆ ತಿರುಗಿ ಬಿದ್ದ ಶಿಷ್ಯ: ಮಮತಾ ಬ್ಯಾನರ್ಜಿಯನ್ನು ಸಿಎಂ ಪಟ್ಟದಿಂದ ಇಳಿಸುವರೇ ಬಿಜೆಪಿಯ ಸುವೇಂದು ಅಧಿಕಾರಿ ?
ಈ ನಡುವೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಇರಿಸಲಾಗಿದ್ದ ಸ್ಟ್ರಾಂಗ್ ರೂಮ್‌ಗಳಲ್ಲಿ ಅಕ್ರಮ ನಡೆದಿರುವುದಾಗಿ ತೃಣಮೂಲ ಕಾಂಗ್ರೆಸ್ ಆರೋಪಿಸಿದ್ದು, ಖುದಿರಾಮ್ ಅನುಶಿಲನ್ ಕೇಂದ್ರದ ಚುನಾವಣಾ ಅಧಿಕಾರಿ ವಿರುದ್ಧ ದೂರು ನೀಡಿದೆ. ಇದರೊಂದಿಗೆ ಬಿಜೆಪಿ ನಾಯಕರು ಕೂಡ ಅನುಮತಿಯಿಲ್ಲದೆ ಸ್ಟ್ರಾಂಗ್ ರೂಮ್ ತೆರೆಯಲಾಗಿದೆ ಎಂದು ಆರೋಪಿಸಿರುವುದಾಗಿ ಟಿಎಂಸಿ ಹೇಳಿದೆ.