ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಧರ್ಮಸ್ಥಳ ಬುರುಡೆ ಪ್ರಕರಣ: SIT ಮಧ್ಯಂತರ ವರದಿ ಬಹಿರಂಗಗೊಳಿಸಲು ವಿಳಂಬ ಏಕೆ? ಸರ್ಕಾರಕ್ಕೆ ಸುರೇಶ್ ಕುಮಾರ್ ಪ್ರಶ್ನೆ

ಧರ್ಮಸ್ಥಳದ ಕುರಿತಾದ ಸತ್ಯಾಸತ್ಯತೆ ಹೊರಬರಲಿ ಎಂದು ಸರ್ಕಾರ ಎಸ್‌ಐಟಿ ರಚಿಸಿತ್ತು. "ಸಾಮಾನ್ಯ ಪೊಲೀಸ್‌ ತನಿಖೆಯಿಂದ ಜನರಲ್ಲಿ ನಂಬಿಕೆ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಎಸ್‌ಐಟಿ ಮಾಡಲಾಗಿತ್ತು, ಆದರೆ ತನಿಖೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. “ಧರ್ಮಸ್ಥಳ ವಿಚಾರದಲ್ಲಿ SIT ಅಗತ್ಯವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೂ SIT ರಚನೆ ಮಾಡಲಾಯಿತು. ನಂತರ SIT ಸದಸ್ಯರು ಹೊರಬಂದರು. ಸತ್ಯ ಹೊರಬರಲಿ ಎಂಬ ಕಾರಣಕ್ಕೆ ನಾವು ವಿರೋಧಿಸಲಿಲ್ಲ. ಈಗ ತನಿಖೆ ಯಾವ ಹಂತದಲ್ಲಿದೆ?” ಎಂದು ಪ್ರಶ್ನಿಸಿದರು.

ಬುರುಡೆ ಗ್ಯಾಂಗ್ ವಿರುದ್ಧ ಸುರೇಶ್ ಕುಮಾರ್ ಕಿಡಿ

ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ -

Profile
Sushmitha Jain Jan 30, 2026 6:35 PM

ಬೆಂಗಳೂರು: ಧರ್ಮಸ್ಥಳ ಬುರುಡೆ (Dharmasthala Mass Burial) ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಇಂದು ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಧ್ವನಿ ಎತ್ತಿದ್ದು, ಎಸ್ಐಟಿಯ ತನಿಖೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ರಾಜ್ಯದ ಪ್ರಮುಖ ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ಹಾಗೂ ವಿಶೇಷ ತನಿಖಾ ತಂಡ (SIT) ತನಿಖೆಯ ವಿಳಂಬದ ಬಗ್ಗೆ ಅಸಮಾಧಾನ ಹೊರಹಾಕಿದ ಅವರು, ಧರ್ಮಸ್ಥಳ ಕುರಿತಾದ ಸತ್ಯಾಸತ್ಯತೆ ಹೊರಬರಲಿ ಎಂಬ ಉದ್ದೇಶದಿಂದಲೇ ಸರ್ಕಾರ SIT ರಚನೆ ಮಾಡಿತ್ತು. ತನಿಖೆಯೂ ನಡೆಯಿತು, ನಾವು ಮಧ್ಯಂತರ ವರದಿ ಕೇಳಿದ್ದೇವು..? ಆದರೆ ಇಲ್ಲಿಯವರೆಗೂ ವರದಿ ಬಂದಿಲ್ಲ ಎಂದು ಕಿಡಿಕಾರಿದರು

SIT ತನಿಖೆ ಬಗ್ಗೆ ಪ್ರಶ್ನೆ

ಧರ್ಮಸ್ಥಳದ ಕುರಿತಾದ ಸತ್ಯಾಸತ್ಯತೆ ಹೊರಬರಲಿ ಎಂದು ಸರ್ಕಾರ ಎಸ್‌ಐಟಿ ರಚಿಸಿತ್ತು. "ಸಾಮಾನ್ಯ ಪೊಲೀಸ್‌ ತನಿಖೆಯಿಂದ ಜನರಲ್ಲಿ ನಂಬಿಕೆ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಎಸ್‌ಐಟಿ ಮಾಡಲಾಗಿತ್ತು, ಆದರೆ ತನಿಖೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. “ಧರ್ಮಸ್ಥಳ ವಿಚಾರದಲ್ಲಿ SIT ಅಗತ್ಯವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೂ SIT ರಚನೆ ಮಾಡಲಾಯಿತು. ನಂತರ SIT ಸದಸ್ಯರು ಹೊರಬಂದರು. ಸತ್ಯ ಹೊರಬರಲಿ ಎಂಬ ಕಾರಣಕ್ಕೆ ನಾವು ವಿರೋಧಿಸಲಿಲ್ಲ. ಈಗ ತನಿಖೆ ಯಾವ ಹಂತದಲ್ಲಿದೆ?” ಎಂದು ಪ್ರಶ್ನಿಸಿದರು. ಮಧ್ಯಂತರ ವರದಿ ಬಿಡುಗಡೆ ಮಾಡುವಂತೆ ಕೇಳಿದ್ದರೂ ಅದು ನಡೆದಿಲ್ಲ, “ಎಲ್ಲವೂ ಮುಸುಕುಧಾರಿಯಂತೆ ಹೇಳಿದಂತೆ ನಡೆಯಿತು. ಶ್ರದ್ಧಾ ಕೇಂದ್ರದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸವೂ ಆಯಿತು. ಧರ್ಮಸ್ಥಳಕ್ಕೆ ಜನರು ಬರುತ್ತಿಲ್ಲ ಎಂದು ಅಪಪ್ರಚಾರ ಮಾಡಿದರು. ಮುಸುಕುದಾರಿ ಅಂದ್ರು, ಇನ್ಯಾರನ್ನೋ ಬಂಧನ ಮಾಡಿದ್ರು, ಗಡಿಪಾರು ಮಾಡಿದ್ರು. ಇಷ್ಟಾದರೂ SIT ವರದಿ ಹೊರಬಂದಿಲ್ಲ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ಧರ್ಮಸ್ಥಳ ಎಷ್ಟು ಅಪವಾದ ಹೊತ್ತು ತಿರುಗಬೇಕು?’

ಈ ಪ್ರಕರಣವನ್ನು “ಪೈಸಾ ವಸೂಲ್ ಅರ್ಜಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪೂರ್ವನಿರ್ಧಾರಿತ ತೀರ್ಪುಗಳು ನಡೆಯುತ್ತಿವೆ. ಧರ್ಮಸ್ಥಳ ಎಷ್ಟು ಅಪವಾದ ಹೊತ್ತು ತಿರುಗಬೇಕು?” ಎಂದು ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Dharmasthala Case: ಬುರುಡೆ ಕೇಸ್‌ಗೆ ಶ್ರೀಕ್ಷೇತ್ರ ಧರ್ಮಸ್ಥಳ ಎಂಟ್ರಿ; ಎಸ್‌ಐಟಿ ವರದಿ ವಿಚಾರಣೆಗೆ ಪ್ರತಿವಾದಿಯಾಗಿಸಲು ಅರ್ಜಿ

ಬಳ್ಳಾರಿ ಬ್ಯಾನರ್ ಗಲಾಟೆ ಉಲ್ಲೇಖ

ಇದೇ ಸಂದರ್ಭದಲ್ಲಿ ಅವರು ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆಯನ್ನೂ ಪ್ರಸ್ತಾಪಿಸಿದರು. “ರಾಜಕೀಯ ದುರುದ್ದೇಶಕ್ಕಾಗಿ ಕಾರ್ಯಕರ್ತನ ಶವವನ್ನು ಸುಟ್ಟುಹಾಕಲಾಗಿದೆ. ಅವರ ಜಾತಿ ಸಂಪ್ರದಾಯದಂತೆ ಶವ ಹೂಳಬೇಕಿತ್ತು. ಅದಕ್ಕಾಗಿ ಗುಂಡಿಯನ್ನೂ ತೆಗೆಯಲಾಗಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಶವ ದಹನ ಮಾಡಲಾಗಿದೆ” ಎಂದು ಆರೋಪಿಸಿದರು.

ಸರ್ಕಾರದ ವಿರುದ್ಧ ತೀವ್ರ ಟೀಕೆ

ಸರ್ಕಾರದ ಕಾರ್ಯವೈಖರಿಯನ್ನೂ ಅವರು ಕಟುವಾಗಿ ಟೀಕಿಸಿದರು. “ಇದು ಒಳಜಗಳಗಳಿಂದ ಕೂಡಿರುವ ಸರ್ಕಾರ. ಬೆಲೆ ಏರಿಕೆ ಮಾಡುವ ಸರ್ಕಾರ. ರಾಜಕೀಯ ಸೇಡು ತೀರಿಸಿಕೊಳ್ಳುವ ಸರ್ಕಾರ. ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದು ವಾಗ್ದಾಳಿ ನಡೆಸಿದರು. ಅಂತಿಮವಾಗಿ, “ಸರ್ಕಾರದಲ್ಲಿರುವವರು ಆತ್ಮವಲೋಕನ ಮಾಡಿಕೊಳ್ಳಬೇಕು. ನಾವು ರಾಜ್ಯಪಾಲರಿಗೆ ವಂದನೆ ಸಲ್ಲಿಸುತ್ತೇವೆ, ಆದರೆ ಅವರ ಭಾಷಣಕ್ಕೆ ಅಲ್ಲ” ಎಂದು ಸುರೇಶ್ ಕುಮಾರ್ ಹೇಳಿದರು..