BJP Leader's Inappropriate Video : ಮಹಿಳಾ ಕಾರ್ಯಕರ್ತೆಯೊಂದಿಗೆ ಅನುಚಿತ ವರ್ತನೆ: ಬಿಜೆಪಿ ಗೊಂಡಾ ಜಿಲ್ಲಾಧ್ಯಕ್ಷನಿಗೆ ನೊಟೀಸ್
BJP show-cause notice: ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕೆಮರಾದ ರೆಕಾರ್ಡ್ ಮಾಡಲಾದ ವಿಡಿಯೊದಲ್ಲಿ ಭಾರತೀಯ ಜನತಾ ಪಕ್ಷದ ಗೊಂಡಾ ಜಿಲ್ಲಾಧ್ಯಕ್ಷ ಅಮರ್ ಕಿಶೋರ್ ಕಶ್ಯಪ್ ಕಚೇರಿಯ ಮೆಟ್ಟಿಲುಗಳನ್ನು ಏರಿ ಬರುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ತೋರಿಸಲಾಗಿದೆ. ಈ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ಕಶ್ಯಪ್ ಗೆ ಶೋಕಾಸ್ ನೊಟೀಸ್ ನೀಡಲಾಗಿದೆ.


ನವದೆಹಲಿ: ಮಹಿಳಾ ಕಾರ್ಯಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ (Inappropriate) ಭಾರತೀಯ ಜನತಾ ಪಕ್ಷದ (Bharatiya Janata Party) ಗೊಂಡಾ ಜಿಲ್ಲಾಧ್ಯಕ್ಷ (BJP Gonda district president ) ಅಮರ್ ಕಿಶೋರ್ ಕಶ್ಯಪ್ ಗೆ ಪಕ್ಷದಿಂದ ನೊಟೀಸ್ (show-cause notice) ನೀಡಲಾಗಿದೆ. ಏಪ್ರಿಲ್ 12 ರಂದು ಬಿಜೆಪಿ ಜಿಲ್ಲಾ ಕಚೇರಿಯ ಸಿಸಿಟಿವಿಯಲ್ಲಿ ಅಮರ್ ಕಿಶೋರ್ ಕಶ್ಯಪ್ ಪಕ್ಷದ ಕಾರ್ಯಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೊ ದಾಖಲಾಗಿದೆ. ಇದು ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದರಿಂದ ಅಮರ್ ಕಿಶೋರ್ ಗೆ ಭಾರತೀಯ ಜನತಾ ಪಕ್ಷದ ವತಿಯಿಂದ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕೆಮರಾದ ರೆಕಾರ್ಡ್ ಮಾಡಲಾದ ವಿಡಿಯೊದಲ್ಲಿ ಕಶ್ಯಪ್ ಕಚೇರಿಯ ಮೆಟ್ಟಿಲುಗಳನ್ನು ಏರಿ ಬರುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ತೋರಿಸಲಾಗಿದೆ. ಈ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಬಳಿಕ ಕಶ್ಯಪ್ ಗೆ ಶೋಕಾಸ್ ನೊಟೀಸ್ ನೀಡಲಾಗಿದೆ.
ಅಮರ್ ಕಿಶೋರ್ ಕಶ್ಯಪ್ ವಿಡಿಯೊ ವೈರಲ್ ಆಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರೊಬ್ಬರು ಇದನ್ನು ನಾಚಿಕೆಗೇಡು ಎಂದು ಹೇಳಿದ್ದು, ಬಿಜೆಪಿ ನಾಯಕರಿಗೆ ಈ ಬಗ್ಗೆ ಔಪಚಾರಿಕ ದೂರು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲಾ ಅವರು ಏಳು ದಿನಗಳಲ್ಲಿ ಲಿಖಿತ ವಿವರಣೆ ಕೇಳಿ ಕಶ್ಯಪ್ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ.
In UP's Gonda, a purported CCTV footage of BJP district president Amar Kishor Kashyap alias "Bam Bam" hugging a woman at the party office has surfaced. He reportedly claimed he was merely assisting the woman who was feeling unwell. pic.twitter.com/g171smPo3V
— Piyush Rai (@Benarasiyaa) May 25, 2025
ಇದಕ್ಕೆ ಪ್ರತಿಕ್ರಿಯಿಸಿರುವ ಕಶ್ಯಪ್, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದರು. ರಾಜಕೀಯ ವಿರೋಧಿಗಳು ವಿಡಿಯೊವನ್ನು ತಪ್ಪಾಗಿ ನಿರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ವಿಡಿಯೊದಲ್ಲಿರುವ ಮಹಿಳೆ ಪಕ್ಷದ ಕಾರ್ಯಕರ್ತೆ. ಆ ದಿನ ಅವರು ಅಸ್ವಸ್ಥರಾಗಿದ್ದರು ಮತ್ತು ವಿಶ್ರಾಂತಿ ಪಡೆಯಲು ಸ್ಥಳವನ್ನು ಕೋರಿದ್ದರು. ನಾನು ಅವರನ್ನು ಕಚೇರಿಗೆ ಕರೆದೊಯ್ದೆ ಎಂದು ಕಶ್ಯಪ್ ತಿಳಿಸಿದ್ದಾರೆ.
ಇದನ್ನೂ ಓದಿ: Shweta Basu:17ರ ವಯಸ್ಸಿನಲ್ಲೇ ಸ್ಟಾರ್, 23ನೇ ವಯಸ್ಸಲ್ಲಿ ಅರೆಸ್ಟ್, ಮದುವೆಯಾಗಿ 9 ವರ್ಷಕ್ಕೆ ಡಿವೋರ್ಸ್! ಯಾರು ಆ ನಟಿ?
ಮೆಟ್ಟಿಲುಗಳನ್ನು ಹತ್ತುವಾಗ ಅವರಿಗೆ ತಲೆ ತಿರುಗಿದ್ದು, ಅವರು ಬೀಳದಂತೆ ನಾನು ತಡೆದಿದ್ದೆ. ಆದರೆ ನನ್ನ ಮೇಲೆ ಅಪಪ್ರಚಾರ ಮಾಡಲು ಈ ದೃಶ್ಯಾವಳಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೊ ಪಕ್ಷದ ಖ್ಯಾತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಮತ್ತು ಅಶಿಸ್ತಿನ ನಡವಳಿಕೆಯಾಗಿರುವುದರಿಂದ ಈ ಕುರಿತು ಸ್ಪಷ್ಟನೆ ಕೇಳಲಾಗುತ್ತಿದೆ ಎಂದು ಕಶ್ಯಪ್ ಅವರಿಗೆ ನೀಡಿರುವ ನೊಟೀಸ್ ನಲ್ಲಿ ತಿಳಿಸಲಾಗಿದೆ. ಅಲ್ಲದೇ ನಿಗದಿತ ಸಮಯದಲ್ಲಿ ಸರಿಯಾದ ಸ್ಪಷ್ಟಿಕರಣ ನೀಡಲು ವಿಫಲವಾದರೆ ಕಠಿಣ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ನೊಟೀಸ್ ನಲ್ಲಿ ಎಚ್ಚರಿಸಲಾಗಿದೆ.