ಗುಜರಾತ್‌ನಲ್ಲೊಂದು ಅಪರೂಪದ ಘಟನೆ: ಹಿಂದೂ ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸಿದ ಮುಸ್ಲಿಂ ಮತದಾರರು
ಅಹಮದಾಬಾದ್ ಗೋಧ್ರಾ ಪುರಸಭೆ ಚುನಾವಣೆಯಲ್ಲೊಂದು ಐತಿಹಾಸಿಕ ಗೆಲುವು ದಾಖಲಾಗಿದೆ. ಶೇಕಡಾ 100ರಷ್ಟು ಮುಸ್ಲಿಂ ಮತದಾರರಿರುವ ಕ್ಷೇತ್ರವಾದ ವಾರ್ಡ್ ಸಂಖ್ಯೆ 7ರಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ. ಇದು ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಅಪರೂಪದ ಉದಾಹರಣೆಯಾಗಿ ಈಗ ಗುರುತಿಸಿಕೊಂಡಿದೆ.
ಅಪೇಕ್ಷಾಬೆನ್ ನೈನೇಶ್‌ಭಾಯ್ ಸೋನಿ (ಸಂಗ್ರಹ ಚಿತ್ರ) -
ಅಹಮದಾಬಾದ್: ಗುಜರಾತ್‌ನ ಸ್ಥಳೀಯ ಸಂಸ್ಥೆಯ (Godhra Municipality) ಚುನಾವಣೆಯಲ್ಲಿ (Election 2026) ಗೋಧ್ರಾ ಪುರಸಭೆಯ ವಾರ್ಡ್ (Godhra Municipality Ward) ಸಂಖ್ಯೆ 7 ಒಂದು ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಿದೆ. ಶೇಕಡಾ 100ರಷ್ಟು ಮುಸ್ಲಿಂ ಮತದಾರರಿರುವ (Muslim ward) ಈ ಕ್ಷೇತ್ರದಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ. ಇದು ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಅಪರೂಪದ ಉದಾಹರಣೆಯಾಗಿ ಈಗ ಗುರುತಿಸಿಕೊಂಡಿದೆ. ಸ್ವತಂತ್ರ ಹಿಂದೂ ಮಹಿಳಾ ಅಭ್ಯರ್ಥಿ ಅಪೇಕ್ಷಾಬೆನ್ ನೈನೇಶ್‌ಭಾಯ್ ಸೋನಿ ಅವರು ಸ್ಥಳೀಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್ಚಾಗಿ ಕೋಮು ಸಂಘರ್ಷಕ್ಕೆ ಸಾಕ್ಷಿಯಾಗುವ ನಗರದ ಜನರು ಈಗ ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಅದು ಕೂಡ 2026ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ. ಗೋಧ್ರಾ ಪುರಸಭೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವತಂತ್ರ ಹಿಂದೂ ಮಹಿಳಾ ಅಭ್ಯರ್ಥಿ ಅಪೇಕ್ಷಾಬೆನ್ ನೈನೇಶ್‌ಭಾಯ್ ಸೋನಿ ಅವರು ಆಯ್ಕೆಯಾಗಿದ್ದಾರೆ.
ಶೇಕಡಾ 100 ರಷ್ಟು ಮುಸ್ಲಿಂ ಸಮುದಾಯಕ್ಕೆ ಸೇರಿದ ಕ್ಷೇತ್ರವಾದ ವಾರ್ಡ್ ಸಂಖ್ಯೆ 7ರಲ್ಲಿ ಅದ್ಭುತ ಗೆಲುವು ದಾಖಲಿಸಿರುವ ಅಪೇಕ್ಷಾಬೆನ್ ಸೋನಿ ಅವರ ಗೆಲುವು ಈ ಪ್ರದೇಶದ ರಾಜಕೀಯ ಇತಿಹಾಸದಲ್ಲಿ ಒಂದು ದೊಡ್ಡ ತಿರುವು.
ಸಾಂಪ್ರದಾಯಿಕ, ಧಾರ್ಮಿಕ, ಜಾತಿ ಆಧಾರಿತ ಮಾದರಿಗಳನ್ನು ಮೀರಿ ಸ್ಥಳೀಯ ಆಡಳಿತಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಸ್ಲಿಂ ಮತದಾರರ ನಿರ್ಣಯಿಸಿದ್ದರಿಂದಲೇ ಅವರ ಗೆಲುವು ಸಾಧ್ಯವಾಯಿತು ಎನ್ನುತ್ತಾರೆ ವಿಶ್ಲೇಷಕರು.
ಗೋಧ್ರಾದ ರಾಜಕೀಯ ಇತಿಹಾಸದಲ್ಲಿ ಇದು ಒಂದು ಮೈಲಿಗಲ್ಲು. ಸಂಪೂರ್ಣವಾಗಿ ಮುಸ್ಲಿಂ ಜನಸಂಖ್ಯೆಯ ವಾರ್ಡ್‌ನಲ್ಲಿ ಹಿಂದೂ ಮಹಿಳೆಯನ್ನು ಆಯ್ಕೆ ಮಾಡುವ ಮೂಲಕ ಗೋಧ್ರಾದ ಮತದಾರರು ಜಾತಿ, ಧರ್ಮಕ್ಕಿಂತ ವೈಯಕ್ತಿಕ ಅರ್ಹತೆಗೆ ಆದ್ಯತೆ ನೀಡಿರುವುದು ಸ್ಪಷ್ಟವಾಗಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣ; ನ್ಯಾ.ಸ್ವರ್ಣಕಾಂತ ಅವರ ಪೀಠದ ಮುಂದೆ ಹಾಜರಾಗಲು ನಿರಾಕರಿಸಿದ ಅರವಿಂದ್ ಕೇಜ್ರಿವಾಲ್
ಗುಜರಾತ್‌ನ ನಗರದ ಬಹುತೇಕ ಸಂಪೂರ್ಣ ಸ್ವೀಪ್‌ನಲ್ಲಿ ಬಿಜೆಪಿ ಎಲ್ಲಾ 15 ಪುರಸಭೆಗಳ ಮೇಲೆ ನಿಯಂತ್ರಣ ಸಾಧಿಸಿದ್ದು, ಅಹಮದಾಬಾದ್‌ನಲ್ಲಿ ಮಾತ್ರ 192 ಸ್ಥಾನಗಳಲ್ಲಿ 146 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ 18 ಸ್ಥಾನಗಳನ್ನು ಗೆದ್ದಿದೆ. ಸೂರತ್‌ನಲ್ಲಿ, ಬಿಜೆಪಿ 115, ಆಪ್ ನಾಲ್ಕು ಸ್ಥಾನಗಳನ್ನು ಗಳಿಸಿದೆ. ರಾಜ್‌ಕೋಟ್ ಮತ್ತು ವಡೋದರಾದಲ್ಲಿ ಬಿಜೆಪಿ ತಲಾ 65, ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗಳಿಸಿದೆ.