L P Kulkarni Column: ಬಂಜರು ಭೂಮಿಯನ್ನು ಕಾಡನ್ನಾಗಿ ಪರಿವರ್ತಿಸಿದ ಹಿಕ್ಮತ್ !
ನಿವೃತ್ತ ಟರ್ಕಿಶ್ ಅರಣ್ಯ ನಿರ್ವಹಣಾ ಮುಖ್ಯಸ್ಥರು ತಾವು ಮತ್ತು ತಮ್ಮ ತಂಡವು ಸೊಂಪಾದ ಅರಣ್ಯ ವಾಗಿ ಪರಿವರ್ತಿಸಿರುವ ಬಂಜರು ಭೂಮಿಯ ಮುಂದೆ ಹೆಮ್ಮೆಯಿಂದ ಪೋಸ್ ನೀಡಿದ್ದಾರೆ. ಹಿಕ್ಮತ್ ಅವರು 1978ರಲ್ಲಿ ಸಿನೋಪ್ ಪಟ್ಟಣದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 19 ವರ್ಷಗಳ ಸೇವಾ ಅನುಭವದ ನಂತರ ಅವರು ನಿವೃತ್ತರಾದರು
Source : Vishwavani Daily News Paper
ತಿಳಿಯೋಣ
ಎಲ್.ಪಿ.ಕುಲಕರ್ಣಿ
ಚಿತ್ರದಲ್ಲಿ ಬಂಜರು ಭೂಮಿಯ ಪಟ ಹಿಡಿದು ನಿಂತು ಈ ಇಳಿವಯಸ್ಸಿನ ಹಿರಿಯರು ನಮಗೇನು ತಿಳಿಸಲು ಹೊರಟಿದ್ದಾರೆ? ಎಂಬ ಪ್ರಶ್ನೆ ನಮ್ಮ ಮನದಲ್ಲಿ ಮೂಡುತ್ತದೆ. ಹೌದು, ಇವರ ಹೆಸರು ಹಿಕ್ಮೆತ್ ಕಾಯ. ಟರ್ಕಿ ದೇಶದ ನಿವೃತ್ತ ಅರಣ್ಯ ನಿರ್ವಹಣಾ ಮುಖ್ಯಸ್ಥರು. ಹಿಕ್ಮೆತ್ ಕಾಯ ಅವರು ವ್ಯಕ್ತಿಯ ಒಳ್ಳೆಯ ಉದ್ದೇಶ ಗಳು ಮತ್ತು ಕಠಿಣ ಪರಿಶ್ರಮವು ದೊಡ್ಡ ಪ್ರತಿಫಲವನ್ನು ನೀಡುತ್ತವೆ ಎಂದು ಸಾಬೀತುಪಡಿಸಿದ್ದಾರೆ.
ನಿವೃತ್ತ ಟರ್ಕಿಶ್ ಅರಣ್ಯ ನಿರ್ವಹಣಾ ಮುಖ್ಯಸ್ಥರು ತಾವು ಮತ್ತು ತಮ್ಮ ತಂಡವು ಸೊಂಪಾದ ಅರಣ್ಯವಾಗಿ ಪರಿವರ್ತಿಸಿರುವ ಬಂಜರು ಭೂಮಿಯ ಮುಂದೆ ಹೆಮ್ಮೆಯಿಂದ ಪೋಸ್ ನೀಡಿದ್ದಾರೆ. ಹಿಕ್ಮತ್ ಅವರು 1978ರಲ್ಲಿ ಸಿನೋಪ್ ಪಟ್ಟಣದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 19 ವರ್ಷಗಳ ಸೇವಾ ಅನುಭವದ ನಂತರ ಅವರು ನಿವೃತ್ತರಾದರು.
ಬಹುಪಾಲು ಸೇವೆಯಿಂದ ನಿವೃತ್ತರಾದವರು ತಮ್ಮ ಮಗ, ಮಗಳು, ಅಳಿಯ, ಸೊಸೆ, ಮೊಮ್ಮಕ್ಕಳು ಹೀಗೆ ಅವರ ಸಂಸಾರದ ಬಗ್ಗೆನೆ ಯೋಚನೆ ಮಾಡುತ್ತಾ, ಹಾಳು ಹರಟೆ ಹೊಟೆಯುತ್ತಾ ಕಾಲ ಕಳೆಯುವವರೇ ಹೆಚ್ಚು ಅಂಥವರಲ್ಲಿ ಈ ಹಿಕ್ಮತ್ ವಿಭಿನ್ನ ವ್ಯಕ್ತಿಯಾಗಿ ನಮಗೆ ಕಾಣುತ್ತಾರೆ. ಹಿಕ್ಮತ್ ತಮ್ಮ ತಂಡ ಮತ್ತು ಗ್ರಾಮಸ್ಥರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಾ, ಅವರು ತಮ್ಮ ಅಧಿಕಾರಾ ವಧಿಯಲ್ಲಿ 30000000 ಸಸಿಗಳನ್ನು ತಂದು ನೆಟ್ಟರು. ಅವರ ನಿವೃತ್ತಿಯ ನಂತರವೂ, ಈ ಮರಗಳು ಬೆಳೆಯುತ್ತಲೇ ಇವೆ; ಅವುಗಳಿಗೆ ನಿತ್ಯ ನೀರುಣಿಸುವುದು, ಗೊಬ್ಬರ ಹಾಕುವುದು ಇವರ ನಿರಂತರ ಕಾಯಕವಾಗಿಬಿಟ್ಟಿದೆ.
ಅವರ ನಿರಂತರ ಶ್ರಮದ ಪರಿಣಾಮವಾಗಿ ಇಂದು, ಈ ಬಂಜರು ಮೆಟ್ಟಿಲುಗಳ ಭೂಮಿ ನಂಬಲಾ ಗದ ರೂಪಾಂತರಕ್ಕೆ ಒಳಗಾಗಿದೆ. 19 ವರ್ಷಗಳ ಅರಣ್ಯೀಕರಣ ಪ್ರಯತ್ನಗಳಲ್ಲಿ, ಹಿಕ್ಮತ್ ಎಂದಿಗೂ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಅಲ್ಲದೆ ಅವರು ಈ ಮಹತ್ವಾಕಾಂಕ್ಷೆಯ ಅರಣ್ಯೀ ಕರಣ ಯೋಜನೆಯನ್ನು ಮೊದಲು ಪ್ರಾರಂಭಿಸಿದ 41 ವರ್ಷಗಳ ಹಿಂದೆ ಬಂಜರು ಭೂಮಿಯಾಗಿದ್ದ ಈ ಪ್ರದೇಶ ಸೋಂಪಾಗಿ ಬೆಳೆದ ಮರಗಿಡಗಳಿಂದ ಹಸಿರಾಗಿ ಕಂಗೊಳಿಸುತ್ತಿದೆ.
ಭೂದೃಶ್ಯದಲ್ಲಿ ಎಷ್ಟು ದೊಡ್ಡ ವ್ಯತ್ಯಾಸವಿದೆ ಎಂಬುದನ್ನು ಎತ್ತಿ ತೋರಿಸಲು ಹಿಕ್ಮತ್, ಅಸ ಪ್ರದೇಶದ ಮೊದಲ ಚಿತ್ರವನ್ನು ಹಿಡಿದು ನಿಂತಿದ್ದಾರೆ. ಇವರ ಕಾರ್ಯ ದೇಶದ ಉಳಿದ ಭಾಗಗಳಿಗೆ ಒಂದು ಅದ್ಭುತ ಉದಾಹರಣೆಯಾಗಿದೆ.
ಗ್ಲೋಬಲ್ ಫಾರೆಸ್ಟ್ ವಾಚ್ ಪ್ರಕಾರ, 2000ರಿಂದ ಟರ್ಕಿಯಲ್ಲಿ ಮರಗಳ ಹೊದಿಕೆಯಲ್ಲಿ ಶೇ.5.4 ಇಳಿಕೆ ಕಂಡುಬಂದಿದೆ. ಈ ಇಳಿಕೆಗೆ ಅರಣ್ಯನಾಶವು ಪ್ರಮುಖ ಕಾರಣವಾಗಿದೆ. ಆದ್ದರಿಂದ, ಅಲ್ಲಿ ಅರಣ್ಯೀಕರಣ ಮಾಡುವುದು ಅತಿ ಜರೂರುಗಳಂದು ಎಂದು ಅಲ್ಲಿನ ಸರಕಾರ ಹೇಳುತ್ತಿದೆ. ಅರಣ್ಯ ನಾಶವನ್ನು ಎದುರಿಸುವುದು ಹೆಚ್ಚಾಗಿ ಸರಕಾರಿ ನೀತಿ ಬದಲಾವಣೆಗಳಿಗೆ ಸಂಬಂಧಿಸಿದೆ. ಇದು ವ್ಯಕ್ತಿಗಳು ತಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಅವರ ಪರಿಸರ ಕಾಳಜಿಗಳನ್ನು ಕೇಳಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
ಆದರೂ, ವ್ಯಕ್ತಿಗಳು ಅರಣ್ಯೀಕರಣದಂತಹ ಇಂತಹ ಗಂಭೀರ ವಿಷಯವನ್ನು ತಮ್ಮ ಕೈಗೆ ತೆಗೆದು ಕೊಂಡು ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ. ಸದ್ಯ, ಹಿಕ್ಮತ್ ಅವರಿಂದ ಪ್ರೇರಣೆ ಗೊಂಡ ಕೆಲವು ಪರಿಸರ ಪ್ರೇಮಿಗಳು ಭಾರತದಿಂದ ಘಾನಾದಿಂದ ಚೀನಾದವರೆಗೆ, ಈ ಕಾರ್ಯ ವನ್ನು ಕೈಗೆತ್ತಿಕೊಂಡು ವ್ಯತ್ಯಾಸವನ್ನುಂಟುಮಾಡಲು ಮರಗಳನ್ನು ನೆಡುತ್ತಿದ್ದಾರೆ.