ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೀನಾ ಗುಪ್ತಾಗೆ ಗಣಿತದ ಪ್ರತಿಷ್ಠಿತ ಪ್ರಶಸ್ತಿಯ ಗರಿ

ನೀನಾ ಗುಪ್ತಾಗೆ ಗಣಿತದ ಪ್ರತಿಷ್ಠಿತ ಪ್ರಶಸ್ತಿಯ ಗರಿ

ನೀನಾ ಗುಪ್ತಾಗೆ ಗಣಿತದ ಪ್ರತಿಷ್ಠಿತ ಪ್ರಶಸ್ತಿಯ ಗರಿ

Profile Vishwavani News Dec 13, 2021 3:34 PM
image-bf8c0983-1644-41e9-8ae8-b3d766215cf0.jpg
ಎಲ್.ಪಿ.ಕುಲಕರ್ಣಿ ಬಾದಾಮಿ ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ಗಣಿತಶಾಸ್ತ್ರ ಪ್ರೊಫೆಸರ್‌ ನೀನಾ ಗುಪ್ತಾ ‘ಅಫೈನ್ ಆಲ್ಜಿಬ್ರಾಯಿಕ್ ಜ್ಯಾಮೆಟ್ರಿ ಮತ್ತು ಕಮ್ಯುಟೇಟಿವ್ ಆಲ್ಜಿಬ್ರಾ’ ದಲ್ಲಿನ ಅವರ ಕೊಡುಗೆಯನ್ನು ಗುರುತಿಸಿ ‘2021 ಡಿಎಸ್ಟಿ-ಐಸಿಟಿಪಿ-ಐಎಂಯು ರಾಮಾನುಜನ್’ ಪ್ರಶಸ್ತಿಯನ್ನು ನೀಡಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಯುವ ಗಣಿತಜ್ಞರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾ ಲಯ ತಿಳಿಸಿದೆ. ಸಚಿವಾಲಯದ ಪ್ರಕಾರ, ಪ್ರೊಫೆ ಸರ್ ಗುಪ್ತಾ ರಾಮಾನುಜನ್ ಪ್ರಶಸ್ತಿಯನ್ನು ಪಡೆದ ಮೂರನೇ ಮಹಿಳೆಯಾಗಿದ್ದಾರೆ. ಇದನ್ನು ಮೊದಲು 2005ರಲ್ಲಿ ನೀಡಲಾಯಿತು. ಅಬ್ದುಸ್ ಸಲಾಮ್ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಫಿಸಿಕ್ಸ್ ((ICTP) ಸಂಸ್ಥೆಯು ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಯೊಂದಿಗೆ ಜಂಟಿ ಯಾಗಿ ಈ ಪ್ರಶಸ್ತಿಯನ್ನು ಅರ್ಹರಿಗೆ ಕೊಡುತ್ತಾ ಬರುತ್ತಿದೆಯೆಂದು ಭಾರತ ಮತ್ತು ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಯೂನಿಯನ್(IMU) ಇತ್ತೀಚೆಗೆ ಬಹಿರಂಗ ಪಡಿಸಿದೆ. ಪ್ರಪಂಚದಾದ್ಯಂತದ ಪ್ರಖ್ಯಾತ ಗಣಿತಜ್ಞರನ್ನು ಒಳಗೊಂಡಿರುವ ಡಿ.ಎಸ್ .ಟಿ - ಐ.ಎಸ್. ಟಿ.ಪಿ - ಐ.ಎಮ್.ಯು ರಾಮಾನುಜನ್ ಪ್ರಶಸ್ತಿ ಸಮಿತಿಯು ಗುಪ್ತಾ ಅವರ ಕೆಲಸವು ಆಕರ್ಷಕ ಬೀಜಗಣಿತ ಕೌಶಲ್ಯ ಮತ್ತು ಆವಿಷ್ಕಾರ ವನ್ನು ತೋರಿಸುತ್ತದೆ ಎಂದು ತನ್ನ ವೆಬ್ ಸೈಟ್‌ನಲ್ಲಿ ಬರೆದುಕೊಂಡಿದೆ. ಬೀಜಗಣಿತ ಜ್ಯಾಮಿತಿಯಲ್ಲಿನ ಮೂಲಭೂತ ಸಮಸ್ಯೆಯಾದ ಜರಿಸ್ಕಿ ರದ್ದತಿ ಸಮಸ್ಯೆಯನ್ನು ಪರಿಹರಿಸಲು ಪ್ರೊಫೆಸರ್ ಗುಪ್ತಾ ಅವರ ಈ ಪರಿಹಾರವು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ೨೦೧೪ರ ಯುವ ವಿಜ್ಞಾನಿ ಪ್ರಶಸ್ತಿಯನ್ನು ಗಳಿಸಿತ್ತು. 2019ರಲ್ಲಿ ಇವರಿಗೆ ದೇಶದ ಪ್ರತಿಷ್ಠಿತ ಶಾಂತಿಸದವರೂಪ್ ಭಟ್ನಾಗರ್ ಯುವ ವಿಜ್ಞಾನಿ ಪ್ರಶಸ್ತಿಯೂ ದೊರಕಿದೆ. ಇತ್ತೀಚಿನ ವರ್ಷಗಳಲ್ಲಿ ಬೀಜ - ರೇಖಾಗಣಿತದಲ್ಲಿ ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಗುಪ್ತಾರವರ ಈ ಕೆಲವು ಶ್ರೇಷ್ಠಮಟ್ಟದ್ದಾಗಿದೆ. 1949 ರಲ್ಲಿ ಆಧುನಿಕ ಬೀಜ - ರೇಖಾಗಣಿತದ ಅತ್ಯಂತ ಪ್ರಖ್ಯಾತ ಸಂಸ್ಥಾಪಕರಾದ ಆಸ್ಕರ್ ಜರಿಸ್ಕಿ ಒಂದು ಸಮಸ್ಯೆಯನ್ನು ಒಡ್ಡಿ ದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಗುಪ್ತಾ ಈ ರೀತಿ ಹೇಳುತ್ತಾರೆ, ‘ರದ್ದತಿ ಸಮಸ್ಯೆಯು ನೀವು ಎರಡು ಜ್ಯಾಮಿತೀಯ ರಚನೆಗಳ ಮೇಲೆ ಸಿಲಿಂಡರ್ಗಳನ್ನು ಹೊಂದಿದ್ದರೆ ಮತ್ತು ಒಂದೇ ರೀತಿಯ ರೂಪಗಳನ್ನು ಹೊಂದಿದ್ದರೆ ಆ ಮೂಲ ರಚನೆಗಳು ಒಂದೇ ರೀತಿಯ ರೂಪಗಳನ್ನು ಹೊಂದಿವೆ ಎಂದು ಒಬ್ಬರು ತೀರ್ಮಾನಿಸಬಹುದೇ?’. ಈ ಸಮಸ್ಯೆಯನ್ನು ಪರಿಹರಿಸಿದ ಗುಪ್ತಾ ಅವರ ಕಾರ್ಯಸಾಧನೆಗೆ ಸಂದ ಪ್ರಶಸ್ತಿ ಇದಾಗಿದೆ. 37 ವರ್ಷದ ಪ್ರೊ.ನೀನಾ ಗುಪ್ತಾ 2006 ರಲ್ಲಿ, ಬೆಥುನೆ ಕಾಲೇಜಿನಿಂದ ಬಿ.ಎಸ್.ಸಿ ಮತ್ತು 2008 ರಲ್ಲಿ ಮಾಸ್ಟರ್ ಡಿಗ್ರಿ ಇನ್ ಮ್ಯಾಥೆಮ್ಯಾಟಿಕ್ಸ್ ನಲ್ಲಿ ಪದವಿಯನ್ನು ಗಳಿಸಿದ್ದಾರೆ. 2011ರಲ್ಲಿ ಪ್ರೊ.ಅಮಾತಯ ಕುಮಾರ ದತ್ತ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಕೂಡ ಮಾಡಿದ್ದಾರೆ. 2012ರಲ್ಲಿ ಮುಂಬೈನ ಪ್ರತಿಷ್ಠಿತ ವಿeನ ಸಂಸ್ಥೆ ಟಿ.ಐ.ಎಫ್. ಆರ್ (ಟಾಟಾ ಇನಸ್ಟಿಟ್ಯೂಟ್ ಆಫ್ ಫೌಂಡಾಮೆಂಟಲ್ ರೀಸರ್ಚ್) ನ ವಿಜಿಟಿಂಗ್ ಪ್ರೊಫೆಸರ್ ಕೂಡ ಆಗಿದ್ದರು. 2014 ರಿಂದ ಐ.ಎಸ್.ಐ ಕಲ್ಕಾತ್ತದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಾರ, ಪ್ರಶಸ್ತಿಯ ವರ್ಷದ ಡಿಸೆಂಬರ್ 31 ರಂದು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರಖ್ಯಾತ ಗಣಿತಶಾಸ್ತ್ರಜ್ಞರಿಗೆ ರಾಮಾನುಜನ್ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ ಮತ್ತು ಸೈದ್ಧಾಂತಿಕ ಭೌತಶಾಸದ ಅಂತರರಾಷ್ಟ್ರೀಯ ಕೇಂದ್ರವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತ್ಯುತ್ತಮ ಸಂಶೋಧನೆಯನ್ನು ನಡೆಸುತ್ತದೆ. (ICTP), ಟ್ರೈಸ್ಟೆ ಮತ್ತು ಭಾರತ ಸರ್ಕಾರದ ವಿeನ ಮತ್ತು ತಂತ್ರಜ್ಞಾನ ಇಲಾಖೆ (DST) ಗಳು ಈ ಪ್ರಶಸ್ತಿಯನ್ನು ಪ್ರಾಯೋಜಿ ಸುತ್ತಿವೆ.