Varsha Bhavisya 2026: ವೃಷಭ ರಾಶಿಯವರಿಗೆ ಎಲ್ಲಿವರೆಗೆ ಇದೆ ಗುರುಬಲ? ಈ ದಿನಾಂಕದ ಬಳಿಕ ಎಚ್ಚರವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ!
ದ್ವಾದಶ ರಾಶಿಗಳಲ್ಲಿ ಎರಡನೇ ರಾಶಿಯಾಗಿರು ವೃಷಭ ರಾಶಿಯವರಿಗೆ 2026ರಲ್ಲಿ ಎಲ್ಲಿಯವರೆಗೆ ಗುರು ಬಲ ಇದೆ? ಶನಿಯಿಂದ ಲಾಭವೋ ನಷ್ಟವೋ? ವೈವಾಹಿಕ ಜೀವನ ಹೇಗೆ? ಉದ್ಯೋಗ ಸಿಗುತ್ತಾ? ಎಂಬುವುದನ್ನು ತಿಳಿಯೋಣ ಬನ್ನಿ...ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ವಿವರಣೆ ನೀಡಿದ್ದಾರೆ.
ಮಹಾಬಲಮೂರ್ತಿ ಕೊಡ್ಲೆಕೆರೆ -
ಬೆಂಗಳೂರು, ಜ. 6: 2026ರಲ್ಲಿ ಶನಿಯು (Shani Dev) ತನ್ನ ರಾಶಿಯನ್ನು ಬದಲಿಸದೇ ಇದ್ದರೂ, ಸೂರ್ಯ, ಮಂಗಳ, ಬುಧ ಶನಿ, ಗುರು ಸೇರಿದಂತೆ ಪ್ರಮುಖ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಲಿವೆ. ಗ್ರಹಗಳ ಈ ಸಂಚಾರವು ಎಲ್ಲ ರಾಶಿಚಕ್ರದ ಜನರ ಮೇಲೆ ವಿಶೇಷವಾಗಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ದ್ವಾದಶ ರಾಶಿಗಳಲ್ಲಿ ಎರಡನೇ ರಾಶಿಯಾಗಿರು ವೃಷಭ ರಾಶಿಯವರಿಗೆ 2026ರಲ್ಲಿ ಎಲ್ಲಿಯವರೆಗೆ ಗುರು ಬಲ ಇದೆ? ಶನಿಯಿಂದ ಲಾಭವೋ ನಷ್ಟವೋ? ವೈವಾಹಿಕ ಜೀವನ ಹೇಗೆ? ಉದ್ಯೋಗ ಸಿಗುತ್ತಾ? (Varsha Bhavishya 2026) ಎಂಬುವುದನ್ನು ತಿಳಿಯೋಣ ಬನ್ನಿ...
ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ಅವರ ಪ್ರಕಾರ, ವೃಷಭ ರಾಶಿಯಲ್ಲಿ ಮನೆಯ ಯಜಮಾನೇ ಶುಕ್ರನಾಗಿರುವುದರಿಂದ ಅಗಾಧವಾದ ಶಕ್ತಿ ಈ ರಾಶಿಯವರಲ್ಲಿರುತ್ತದೆ. 2026ರ ಮಾರ್ಚ್ 19ರ ನಂತರ ವಿಶ್ವಾವಸು ಸಂವತ್ಸವರ ಸ್ಥಗಿತಗೊಂಡು ಪರಾಭವ ಸಂವತ್ಸ ಆರಂಭವಾಗುವುದರಿಂದ ವೃಷಭರಾಶಿವರಿಗೆ ತೊಂದರೆಯಾಗಲಿದೆ. ಶುಕ್ರ ರಾಕ್ಷಸರ ಗರು ಹಾಗೂ ಗುರು ದೇವತೆಗಳ ರಾಜನಾಗಿದ್ದು, ಯಾವಾಗಲೂ ರಾಕ್ಷಸರು, ದೇವತೆಗಳ ನಡುವೆ ಯುದ್ಧ ನಡೆಯುತ್ತಿರುತ್ತದೆ. ಹಾಗಾಗೀ ಗುರು ಮತ್ತು ಶುಕ್ರ ಗ್ರಹಗಳ ನಡುವೆ ನೇರವಾಗಿಲ್ಲದಿದ್ದರೂ, ಪರೋಕ್ಷ ತಾಕಲಾಟಗಳು ಇದ್ದೇ ಇರುತ್ತವೆ. ಮನೆಯ ಯಜಮಾನನಾದ ಶುಕ್ರ ಈ ರಾಶಿಯವರನ್ನು ಗೆಲ್ಲಿಸಲು ಮುಂದಾದರೂ ಸಹ ಮರಣದ ಮನೆ ಯಜಮಾನನಾದ ಗುರು ಶುಕ್ರನನ್ನು ವಿಫಲಗೊಳಿಸುತ್ತಿರುತ್ತಾನೆ.
ವೃಷಭ ರಾಶಿಯವರಿಗೆ 2026 ಜೂನ್ 2ರವರೆಗೆ ಗುರುಬಲ ಇರುವುದರಿಂದ ಆರ್ಥಿಕ, ಶೈಕ್ಷಣಿಕ, ವ್ಯಾಪಾರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಇದು ಉತ್ತಮ ಸಮಯವಾಗಿದೆ ಎಂದು ಮಹಾಬಲಮೂರ್ತಿಯವರು ತಿಳಿಸಿದ್ದಾರೆ. ದೂರ ಶಿಕ್ಷಣ, ವಿದೇಶ ಪ್ರಯಾಣ, ಸುಖಕರ ವೈವಾಹಿಕ ಜೀವನ, ವ್ಯಾಪಾರ -ವಹಿವಾಟಿನಲ್ಲಿ ವೃದ್ಧಿ ಹೀಗೆ ಮುಂದೆ ಇಡುವ ಪ್ರಮುಖ ಹೆಜ್ಜೆಗಳಿಗೆ ಬಹುತೇಕ ಯಶಸ್ಸು ಸಿಗಲಿದೆ.
ವಿಡಿಯೊ ಇಲ್ಲಿದೆ:
ಜೂನ್ 2ರ ನಂತರ ಎಚ್ಚರವಹಿಸಿ
ಆದರೆ ಜೂನ್ 2ರ ನಂತರ ಗುರುಬಲ ಕಳೆದುಕೊಳ್ಳುವುದರಿಂದ ಈ ರಾಶಿಯವರಿಗೆ ತೊಂದರೆ ಉಂಟಾಗಲಿದೆ. ಉದಾಹರಣೆಗೆ ಯಾವುದೋ ಒಂದರಿಂದ ಲಾಭ ಉಂಟಾಗುವ ಸಮಯದಲ್ಲಿ ಯಾವುದೋ ಹೊಸ ಕಾಯ್ದೆಯಿಂದ ನಷ್ಟ ಉಂಟಾಗು ಸಾಧ್ಯತೆ ಇರುತ್ತದೆ. ಆದ್ದರಿಂದ ಜೂನ್ 2ರನಂತರ ವೃಷಭ ರಾಶಿಯವರು ಕೊಡ ಎಚ್ಚರಿಕೆಯಿಂದ ಇರುವುದು ಉತ್ತಮ ಎಂದು ಕೊಡ್ಲೆಕೆರೆ ಹೇಳಿದ್ದಾರೆ.
ಈ ವರ್ಷ ಮೇಷ ರಾಶಿಯವರಿಗೆ ಶನಿಯ ಸಾಡೆಸಾತ್; ವೃತ್ತಿ ಜೀವನ ಹೇಗಿರಲಿದೆ?
ಗುರುಬಲ ಕಳೆದರೂ ಅಭಿವೃದ್ಧಿ ಸಾಧ್ಯ
ಇನ್ನೂ ಎರಡು ವರ್ಷಗಳ ಕಾಲ ಶನೈಶ್ಚರ್ಯ ಲಾಭದಲ್ಲಿರುವನು. ಈ ರಾಶಿಯವರಲ್ಲಿ ಬುಧ ಮತ್ತು ಶುಕ್ರ ತುಂಬ ಬಲವಾಗಿದ್ದರೆ, ಓದಿನಲ್ಲಿ ಬರುವ ಅಡೆತಡೆಗಳು ಬಂದರೂ ಶನೈಶ್ಚರ್ಯ ಸಿದ್ಧಿಯಿಂದ ಅವು ನಿವಾರಣೆಯಾಗಲಿವೆ. ಆದ್ದರಿಂದ ಜೂನ್ 2ರ ನಂತರ ಗುರುಬಲ ಕಳೆದರೂ ಸಹ ಈ ರಾಶಿಯವರು ಆತ್ಮಸ್ಥೈರ್ಯ ಹೊಂದಿದ್ದೇ ಆದಲ್ಲಿ ಅವರಿಗೆ ಯಶಸ್ವು ದೊರೆಯಲಿದೆ. ಸಂಗೀತ ಕ್ಷೇತ್ರದಲ್ಲಿ, ಆಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೂ ಶನೈಶ್ಚರ್ಯನ ಮೂಲಕ ಯಶಸ್ಸು ಸಿದ್ಧಿ ಸಿಗಲಿದೆ.
ದೃಷ್ಟಿ ದೋಷ ಸಾಧ್ಯತೆ
2026ರ ಜೂನ್ 2ರ ನಂತರ ಗುರುಬಲ ತಪ್ಪಿ ಹೋಗುತ್ತಿರುವುದರಿಂದ ವೃಷಭ ರಾಶಿಯವರಿಗೆ ದೃಷ್ಟಿ ದೋಷ ಕಾಡುವ ಸಾಧ್ಯತೆ ಇದೆ. ದೃಷ್ಟಿ ದೋಷ ನಿವಾರಿಸುವ ದುರ್ಗಾಶಕ್ತಿಯ ಯಂತ್ರವನ್ನು ಒಂದು ವರ್ಷಗಳ ಕಾಲ ಕಟ್ಟಿಕೊಂಡಲ್ಲಿ ಈ ತೊಂದರೆ ನಿವಾರಣೆಯಾಗಲಿದೆ ಎಂದು ಕೊಡ್ಲೆಕೆರೆಯವರು ತಿಳಿಸಿದ್ದಾರೆ.