Horoscope Today January 14th: ಇಂದು ಈ ರಾಶಿಯವರಿಗೆ ಇದೆ ಶ್ರೀಮಂತರಾಗುವ ಯೋಗ
ನಿತ್ಯ ಭವಿಷ್ಯ ಜನವರಿ 14, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾಷಡ ನಕ್ಷತ್ರದ ಜನವರಿ 14ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು, ಜ. 14: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾಷಾಢ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಮಕರ ರಾಶಿಗೆ ರವಿ ಪ್ರವೇಶ ಮಾಡುತ್ತಿದ್ದಾನೆ. ಮೇಷ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಉದ್ಯೋಗದಲ್ಲಿ ಪ್ರಮೋಷನ್ ಸಿಗುತ್ತದೆ. ಅತ್ಯಂತ ಶುಭ ಫಲಗಳು ಕಂಡು ಬರಲಿವೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಿದ್ದು, ಅದೃಷ್ಟದ ಬಾಗಿಲು ತೆರೆಯಲಿದೆ. ಹಿಂದಿನ ಎರಡು ಮೂರು ತಿಂಗಳಿನಲ್ಲಿ ಇದ್ದ ಮನಸ್ಸಿನ ಕ್ಷೇಷ ಎಲ್ಲವೂ ಮಾಯವಾಗುತ್ತದೆ. ಸಂಬಂಧದಲ್ಲಿ ಇದ್ದಂತಹ ಎಲ್ಲ ತೊಂದರೆಗಳು ಇಂದು ಬಗೆಹರಿಯಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ನಿಮ್ಮ ಪ್ರೀತಿ ಪಾತ್ರರ ಜತೆ ಮಾತಿನ ಚಕಮಕಿ ನಡೆಯಬಹುದು. ಮನಸ್ಸಿಗೆ ಬಹಳ ಹಿಂಸೆಯಾಗಲಿದೆ. ನಿಮ್ಮ ಪ್ರೀತಿ ಪಾತ್ರ ಸಹಕಾರ ಸಿಗಲಾರದು. ಮುಂದಿನ ತಿಂಗಳು ಎಲ್ಲದ್ದಕ್ಕೂ ಪರಿಹಾರ ಕಾಣುತ್ತೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಉತ್ತಮ ದಿನವಲ್ಲ. ಪಾರ್ಟನರ್‌ಶಿಪ್ ವ್ಯವಹಾರದಲ್ಲಿ, ಮಿತೃತ್ವದಲ್ಲಿ ಒಡಕು ಉಂಟಾಗಬಹುದು. ದಾಂಪತ್ಯ ಜೀವನದಲ್ಲೂ ಸಮಸ್ಯೆ ಬರಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದ್ದು, ಶತ್ರುಗಳ ಭಾದೆ ನಿಮಗೆ ಹೆಚ್ಚಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿ. ಹಣಕಾಸಿನ ವಿಚಾರವಾಗಿ ಲಾಸ್ ಆಗುವ ಸಾಧ್ಯತೆ ಇದೆ. ಬಿಸೆನೆಸ್‌ನಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಮಕ್ಕಳ ವಿಚಾರವಾಗಿಯೂ ಪೋಷಕರು ಜಾಗೃತಿವಹಿಸಬೇಕಾಗುತ್ತದೆ.
ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಹೀಗೆ ಇಡಲೇಬಾರದು!
ತುಲಾ ರಾಶಿ: ತುಲಾ ರಾಶಿಗೆ ಕಷ್ಟ ಗೋಚರವಾಗಲಿದೆ. ಇದೀಗ ಚತುರ್ಥಕ್ಕೆ ಸೂರ್ಯ ಬಂದಿರುವುದರಿಂದ ಮನೆಯಲ್ಲಿ ಕಿರಿ ಕಿರಿ ಆಗಬಹುದು. ಮನೆಯಲ್ಲಿ ಆಸ್ತಿ ಪಾಸ್ತಿ ವಿಚಾರವಾಗಿ ತೊಂದರೆ ಆಗಬಹುದು
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಸೇಲ್ಸ್, ಮಾರ್ಕೆಟಿಂಗ್, ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಲಾಭವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಪಡೆಯಲಿದ್ದೀರಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಸಂಸಾರಿಕ ತೊಂದರೆಗಳು ಜಾಸ್ತಿಯಾಗಬಹುದು. ಯಾರ ಜತೆಗೂ ದ್ವೇಷ, ಅಹಂಕಾರದ ಮಾತುಗಳು ಬೇಡ. ಹಣ ಖರ್ಚು ಜಾಸ್ತಿಯಾಗುವ ಸಾಧ್ಯತೆ ಇದೆ.
ಮಕರ ರಾಶಿ: ಮಕರ ರಾಶಿಗೆ ರವಿಯ ಪ್ರವೇಶವಾಗುತ್ತದೆ. ಹಾಗಾಗಿ ಹಿಂದಿನ ದಿನಗಳಲ್ಲಿ ಇದ್ದ ಕೆಲವು ತೊಂದರೆ ಬಗೆಹರಿಯಲಿದೆ. ಆದರೂ ಕೂಡ ಕೆಲವರಿಂದ ಹೀಯಾಳಿಕೆಯ ಮಾತುಗಳನ್ನು ನೀವು ಕೇಳಬೇಕಾಗುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ವಿಚಾರದಲ್ಲಿ ತೊಂದರೆ ಆಗಬಹುದು. ದಾಂಪತ್ಯ, ಹಾಗೂ ಸ್ನೇಹಿತರ ಜತೆ ಕಲಹ ಉಂಟಾಗುವ ಸಾಧ್ಯತೆ ಇದೆ.
ಮೀನ ರಾಶಿ: ಮೀನ ರಾಶಿಯವರಿಗೆ ಅತ್ಯುತ್ತಮ ದಿನಾವಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನಾಗಮನವಾಗುತ್ತದೆ. ಮಿತ್ರರಿಂದ ಮನಸ್ಸಿಗೆ ಖುಷಿ ಸಿಗುತ್ತದೆ.