ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shani Deva: ಶನಿವಾರ ಕರ್ಮಾಧಿಪತಿ ಶನಿ ದೇವನ ಈ ಮಂತ್ರ ಪಠಿಸಿ- ಹಣ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.

Saturday Manthras: ಹಿಂದೂ ಧರ್ಮದಲ್ಲಿ ಶನಿವಾರವನ್ನು ಕರ್ಮಾಧಿಪತಿ, ನ್ಯಾಯ ದೇವರಾದ ಶನಿದೇವರಿಗೆ ಸಮರ್ಪಿಸಲಾಗಿದೆ. ಈ ದಿನದಂದು ಭಕ್ತಿ ಶ್ರದ್ಧೆಯಿಂದ ಶನಿದೇವನನ್ನು ಪೂಜಿಸುವುದು ಮತ್ತು ನಿರ್ದಿಷ್ಟ ಮಂತ್ರಗಳನ್ನು ಪಠಿಸುವುದು ಹಣಕಾಸಿನ ತೊಂದರೆಗಳನ್ನು ನಿವಾರಿಸಿ, ಜೀವನದಲ್ಲಿ ಸುಖ, ಶಾಂತಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಶನಿವಾರದಂದು ಶನಿ ಮಂತ್ರಗಳನ್ನು ನಿಯಮಿತವಾಗಿ ಜಪಿಸುವುದರಿಂದ ಆತನು ಸುಲಭವಾಗಿ ಪ್ರಸನ್ನನಾಗಿ ತನ್ನ ಆಶೀರ್ವಾದವನ್ನು ನೀಡುತ್ತಾನೆ ಎನ್ನಲಾಗುತ್ತದೆ.

ಶನಿವಾರ ಕರ್ಮಾಧಿಪತಿ ಶನಿ ದೇವನ ಈ ಮಂತ್ರ ಪಠಿಸಿ

ಶನಿ ದೇವ -

Profile
Sushmitha Jain Nov 8, 2025 7:00 AM

ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Religion) ಪೂಜೆ -ಪುನಸ್ಕಾರ, ದೇವ-ದೈವ ಆರಾಧನೆಗಳಿಗೆ ಹೆಚ್ಚಿನ ಮಹತ್ವವಿದ್ದು, ವಾರದ ಏಳು ದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದೆ. ಹಾಗೇ ಶನಿವಾರ(Saturday) ನ್ಯಾಯದ ಅಧಿಪತಿ ಶನಿ ದೇವನಿಗೆ(God Shani) ಮೀಸಲಾಗಿದ್ದು, ಶನಿ ದೇವನ ಆರಾಧನೆಗೆ ಈ ದಿನ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶನಿ ದೇವನ ಪೂಜೆಯನ್ನು ವಿಧಿ - ವಿಧಾನಗಳ ಮೂಲಕ ಮಾಡಿದ್ದರೆ ಸುಲಭವಾಗಿ ಆತನ ಕೃಪೆಯನ್ನು ಪಡೆಯಬಹುದು.

ಇದರೊಂದಿಗೆ ಶನಿವಾರ ಕರ್ಮಾಧಿಪತಿ ಶನಿ ದೇವನ ಮಂತ್ರಗಳನ್ನು(Shani Manthra) ಜಪಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಜೀವನದಲ್ಲಿ ಯಶಸ್ಸು ಸಿಗಲಿದ್ದು, ನಿಮ್ಮ ಇಷ್ಟಾರ್ಥಗಳು ಸಿದ್ಧಿಸಲಿವೆ. ನಂಬಿಕೆಯ ಪ್ರಕಾರ, ಶನಿವಾರದಂದು ಕೆಲವು ಮಂತ್ರಗಳನ್ನು ಮಾಡುವುದರಿಂದ ನಿಮಗೆ ಶುಭ ತರಲಿದ್ದು, ಶನಿ ದೋಷ ಇರುವವರು ಈ ದಿನ ಶನಿ ದೇವನನ್ನು ಪೂಜಿಸುವುದರ ಜೊತೆಗೆ, ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಕಾರ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಲು ಸಹಾಯ ಮಾಡುತ್ತಾನೆ ಮತ್ತು ಶುಭವನ್ನು ನೀಡುತ್ತಾನೆ. ಇಂದು ನಾವು ಶನಿ ದೇವನ ಯಾವ ಮಂತ್ರವನ್ನು ಜಪಿಸಬೇಕು..? ಎಂಬುದನ್ನು ನೋಡೋಣಾ ಬನ್ನಿ.

ಶತ್ರು ನಾಶಕ್ಕಾಗಿ

ಶತ್ರು ಭಾದೆಯಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದರೆ ಆದರಿಂದ ಹೊರಬರಲು, 'ಓಂ ಶನೈ ಶನಿಶ್ಚರಾಯ ನಮಃ' ಮಂತ್ರವನ್ನು 11 ಬಾರಿ ಪಠಿಸಿ.11 ಶನಿವಾರಗಳವರೆಗೆ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಹೀಗೆ ಮಾಡುವುದರಿಂದ ಶತ್ರು ಕಾಟ ನಿವಾರಣೆಗೊಂಡು ನಿಮಗೆ ಯಶಸ್ಸನ್ನು ಸಿಗುತ್ತದೆ.

ಈ ಸುದ್ದಿಯನ್ನೂ ಓದಿ: Viral News: ಗ್ರೀಕ್ ದೇವತೆಗಳು ಬಾಡಿ ಬಿಲ್ಡರ್‌ಗಳಂತಿದ್ದರೆ, ಹಿಂದೂ ದೇವರುಗಳು ಮಾತ್ರ... ಅರೇ! ಇದೇನಿದು ಹೊಸ ವಿವಾದ?

ಆರ್ಥಿಕ ಲಾಭಕ್ಕಾಗಿ

ನೀವು ನಿಮ್ಮ ವ್ಯವಹಾರದಲ್ಲಿ ಆರ್ಥಿಕ ಲಾಭವನ್ನು ಪಡೆಯಲು ಬಯಸಿದರೆ ಮತ್ತು ನಿಮ್ಮ ವ್ಯವಹಾರವನ್ನು ಬಹಳ ಮುಂದಕ್ಕೆ ಕೊಂಡೊಯ್ಯಲು ಬಯಸಿದರೆ, ನಂತರ ಶನಿವಾರದಂದು, ಸ್ನಾನ ಮಾಡಿದ ನಂತರ, ಶುಭ್ರವಾದ ಬಟ್ಟೆಗಳನ್ನು ಧರಿಸಿ, ಪದ್ಮಾಸನದಲ್ಲಿ ಕುಳಿತು ಶನಿ ದೇವರ ಬೀಜ ಮಂತ್ರವಾದ ''ಓಂ ಪ್ರಾಮ್ ಪ್ರೇಮ್ ಪ್ರಾಔಮ್ ಸಹ ಶನೈಶ್ಚರಾಯ ನಮಃ' ಜಪಿಸಬೇಕು. ಶನಿವಾರದಂದು ನೀವು ಕನಿಷ್ಟ 11 ಬಾರಿ ಈ ಮಂತ್ರವನ್ನು ಪಠಿಸಬೇಕು.

ಮಂಗಳಕರ ಫಲಿತಾಂಶ

ಶನಿವಾರದಂದು 'ಓಂ ಶನಿಶ್ಚರಾಯ ನಮಃ' ಎಂಬ ಮಂತ್ರವನ್ನು108 ಬಾರಿ ಜಪಿಸಿ. ಈ ಮಂತ್ರನ್ನು ಜಪಿಸುವುದರಿಂದ ಜೀವನದಲ್ಲಿ ನಾವು ಅನೇಕ ರೀತಿಯ ಮಂಗಳಕರ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.

ಸಮೃದ್ಧಿ ವೃದ್ಧಿಗಾಗಿ

ನಿಮ್ಮ ಕುಟುಂಬದ ಹಾಗೂ ಸದಸ್ಯರ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, “ಓಂ ಶಂ ಶನೈಶ್ಚರಾಯ ನಮಃ” ಎಂಬ ಶನಿ ಏಕಾಶರಿ ಮಂತ್ರವನ್ನು 108 ಬಾರಿ ಪಠಿಸಿ. ಇದರಿಂದ ವ್ಯವಹಾರಿಕವಾಗಿ ನೀವು ಅಭಿವೃದ್ಧಿ ಹೊಂದಬಹುದಾಗಿದ್ದು, ಮನೆಯಲ್ಲಿ ಸಂಪತ್ತು ವೃದ್ದಿಯಾಗಲಿದೆ.

ಮಂತ್ರ ಪಠಣದ ವಿಧಾನ

ಶನಿವಾರದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಪೂಜಾ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಿಸಿ. ಮರದ ಹಲಗೆಯ ಮೇಲೆ ಕೆಂಪು ಬಟ್ಟೆ ಹಾಸಿ, ಅದರ ಮೇಲೆ ಶನಿ ದೇವರ ಫೋಟೋವನ್ನು ಪ್ರತಿಷ್ಠಾಪಿಸಿ. ನಂತರ ಹೂವು, ಧೂಪ, ದೀಪ ಮತ್ತು ನೈವೇದ್ಯಗಳನ್ನು ಅರ್ಪಿಸಿ ಆರತಿಯನ್ನು ಮಾಡಿ. ಕೊನೆಯಲ್ಲಿ, ಶನಿ ದೇವನ ಮುಂದೆ ಕುಳಿತು ಈ ಮಂತ್ರಗಳನ್ನು ಏಕಾಗ್ರತೆಯಿಂದ ಜಪಿಸಿ. ಈ ರೀತಿ ಮಾಡುವುದರಿಂದ ಶನಿ ದೇವ ಅನುಗ್ರಹ ಪ್ರಾಪ್ತಿಯಾಗಿ ಹಣ, ಸಂಪತ್ತು, ಅದೃಷ್ಟ ಮತ್ತು ಸಂತೋಷ ಸಿಗುತ್ತದೆ.