ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಗುರುವಾರಕ್ಕಿದೆ ವಿಶೇಷ ಮಹತ್ವ! ನಿಮ್ಮೆಲ್ಲ ಇಷ್ಟಾರ್ಥ ಸಿದ್ದಿಗೆ ಈ ದಿನ ಉತ್ತಮ

ಗುರುವಾರದಂದು ಲಕ್ಷ್ಮೀ ಸಹಿತವಾಗಿ ವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ವಿಶೇಷ ಶುಭಫಲಗಳು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಲಕ್ಷ್ಮೀ ಸಹಿತ ವಿಷ್ಣುವನ್ನು ಪೂಜಿಸುವ ಸಂದರ್ಭದಲ್ಲಿ ದೇವರಿಗೆ ಬೆಲ್ಲ ಮತ್ತು ಕಡಲೆಯನ್ನು ಸಮರ್ಪಿಸಬೇಕು. ಹೀಗೆ ಮಾಡುವುದರಿಂದ ಜೀವನದ ದುಃಖಗಳೆಲ್ಲ ದೂರವಾಗಿ ಮನೆಯಲ್ಲಿ ಸುಖ, ಸಂತೋಷ ನೆಲೆಸುತ್ತದೆ.

ಗುರುವಾರ ಯಾವ ದೇವರನ್ನು, ಹೇಗೆ ಪೂಜಿಸಬೇಕು? ಇಲ್ಲಿದೆ ಸಮಗ್ರ ಮಾಹಿತಿ

ಮಹಾವಿಷ್ಣು (ಸಂಗ್ರಹ ಚಿತ್ರ೦. -

Profile
Sushmitha Jain Nov 20, 2025 6:00 AM

ಬೆಂಗಳೂರು: ಹಿಂದು ಧರ್ಮ (Hindu Religion)ದಲ್ಲಿ ಪ್ರತೀ ವಾರಕ್ಕೂ ಅದರದ್ದೇ ಆಗಿರುವ ವೈಶಿಷ್ಟ್ಯ ಮತ್ತು ವಿಶೇಷತೆಯಿದೆ. ನಾವು ಆರಾಧಿಸುವ ದೇವಾನುದೇವತೆಗಳನ್ನು ವಾರದ ಒಂದೊಂದು ದಿನ ಪೂಜಿಸುವುದರಿಂದ ನಮ್ಮ ಇಷ್ಟಾರ್ಥಗಳೆಲ್ಲ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಅದೇ ರೀತಿ ವಾರದ ನಡುವಿನ ದಿನವಾಗಿರುವ ಗುರುವಾರದ ವಿಶೇಷತೆಯೇನು ಎಂಬುದನ್ನು ನೋಡೋಣ.

ಗುರುವಾರ ಭಗವಾನ್ ವಿಷ್ಣುವನ್ನು(Lord Vishnu) ಪೂಜಿಸುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ವಿಷ್ಣುವನ್ನು ಸಂಕಲ್ಪಿಸಿಕೊಂಡು ಈ ದಿನ ಉಪವಾಸ ವ್ರತ ಮಾಡುವುದರಿಂದ ಅಂತವರ ಜಾತಕದಲ್ಲಿರುವ ಗುರು ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಸಂಪತ್ತಿನ ಅಭಿವೃದ್ಧಿಗಾಗಿ, ಸಮೃದ್ಧಿ-ನೆಮ್ಮದಿಗಾಗಿ ಹಾಗೂ ವೈವಾಹಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಗುರುವಾರ ವಿಶೇಷವಾಗಿ ವಿಷ್ಣುವಿನ ಆರಾಧನೆ ಉತ್ತಮ.

ಗುರುವಾರ ಲಕ್ಷ್ಮೀ ಸಹಿತವಾಗಿ ವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ವಿಶೇಷ ಶುಭಫಲಗಳು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಲಕ್ಷ್ಮೀ ಸಹಿತ ವಿಷ್ಣುವನ್ನು ಪೂಜಿಸುವ ಸಂದರ್ಭದಲ್ಲಿ ದೇವರಿಗೆ ಬೆಲ್ಲ ಮತ್ತು ಕಡಲೆಯನ್ನು ಸಮರ್ಪಿಸಬೇಕು. ಹೀಗೆ ಮಾಡುವುದರಿಂದ ಜೀವನದ ದುಃಖಗಳೆಲ್ಲ ದೂರವಾಗಿ ಮನೆಯಲ್ಲಿ ಸುಖ, ಸಂತೋಷ ನೆಲೆಸುತ್ತದೆ.

ಈ ಸುದ್ದಿಯನ್ನು ಓದಿ: Vastu Tips: ತಪ್ಪಿಯೂ ಮನೆಯ ಮುಖ್ಯ ದ್ವಾರದ ಮುಂದೆ ಈ ಮೂರು ವಸ್ತುಗಳು ಇರದಂತೆ ನೋಡಿಕೊಳ್ಳಿ..!

ಇನ್ನು ವಿವಾಹ ವಿಚಾರದಲ್ಲಿ ಸೂಕ್ತವಾದ ಸಂಗಾತಿ ಸಿಗದೆ ಬಾಧೆ ಪಡುತ್ತಿರುವವರು ಅಥವಾ ಮದುವೆ ವಿಚಾರ ಅರ್ಧಕ್ಕೆ ನಿಂತುಹೋಗಿದ್ದಲ್ಲಿ, ಸೂಕ್ತ ಕಂಕಣ ಬಲ ಕೂಡಿ ಬರುತ್ತಿಲ್ಲವಾಗಿದ್ದಲ್ಲಿ ಗುರುವಾರ ಬಾಳೆ ಗಿಡಕ್ಕೆ ನೀರು ಎರೆಯಬೇಕು. ಇದರಿಂದ ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಬಾಳೆ ಗಿಡದ ಬುಡದಲ್ಲಿ ದೀಪವೊಂದನ್ನು ಹಚ್ಚಿಟ್ಟು ಬಾಳೆ ಗಿಡವನ್ನು ಪೂಜಿಸುವುದರಿಂದ ವಿವಾಹ ಸಂಬಂಧಿತ ವಿಘ್ನಗಳೆಲ್ಲ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.

ವ್ಯಾಪಾರ, ವ್ಯವಹಾರಗಳಲ್ಲಿ ತೊಂದರೆ ಮತ್ತು ಅಡ್ಡಿಗಳನ್ನು ಅನುಭವಿಸುತ್ತಿರುವವರು ಹಾಗೂ ಹಣಕಾಸಿನ ತೊಂದರೆಗಳಿಂದ ಬಳಲುತ್ತಿರುವವರು ಗುರುವಾರ ವಿಷ್ಣುವಿನ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ದೇವರಿಗೆ ಅರಶಿನದ ಉಂಡೆಗಳನ್ನು ಸಮರ್ಪಿಸಬೇಕು. ಹೀಗಾದಲ್ಲಿ ವ್ಯಾಪಾರ, ವ್ಯವಹಾರಗಳಲ್ಲಿ ಲಾಭ ಪಡೆಯಲು ಸಾಧ್ಯ.

ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬೇಕೆಂದಿದ್ದಲ್ಲಿ ಗುರುವಾರ ವಿಷ್ಣುವಿಗೆ ಪ್ರಿಯವಾದ ಹಳದಿ ಬಣ್ಣದ ವಸ್ತುವನ್ನು ಮತ್ತು ಅರಶಿನವನ್ನು ಹೆಚ್ಚಾಗಿ ಬಳಸಬೇಕು. ಹೀಗೆ ಮಾಡುವುರಿಂದ ವಿಷ್ಣುವಿನ ಆಶೀರ್ವಾದ ನಿಮ್ಮ ಮೇಲೆ ಬೀಳುತ್ತದೆ. ಗುರುವಾರ ಹಳದಿ ಬಟ್ಟೆಯನ್ನು ಧರಿಸುವುದು ಶ್ರೇಯಸ್ಕರ. ಹಳದಿ ಬಣ್ಣದ ವಸ್ತುಗಳನ್ನು ವಿಷ್ಣುವಿಗೆ ನೈವೇದ್ಯವಾಗಿ ಅರ್ಪಿಸುವುದರಿಂದ ನಿಮ್ಮೆಲ್ಲ ಬಯಕೆಗಳು ಶೀಘ್ರವಾಗಿ ಈಡೇರುತ್ತವೆ.

ಗುರುವಾರ,

ಓಂ ಬೃಂ ಬೃಹಸ್ಪತೇ ನಮಃ

ಓಂ ಕ್ಲೀಂ ಬೃಹಸ್ಪತ್ಏ ನಮಃ

ಓಂ ಗ್ರಾಂ ಗ್ರೀಂ ಗ್ರೌಂ ಸಃ

ಗುರುವೇ ನಮಃ

ಓಂ ಐಂ ಶ್ರೀಂ ಬೃಹಸ್ಪತೇ ನಮಃ

ಓಂ ಗುಣ ಗುರವೇ ನಮಃ

ಈ ಮಂತ್ರ ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಏಳಿಗೆ ಪ್ರಾಪ್ತಿಯಾಗುತ್ತದೆ.