Rashmika Mandanna: ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ, ಬೇರೆ ಆಯ್ಕೆ ಇರಲಿಲ್ಲ; ಮಾಜಿ ಪ್ರೇಮಿ ಬಗ್ಗೆ ರಶ್ಮಿಕಾ ಮಂದಣ್ಣ ಆರೋಪ
Rashmika Mandanna: ಇತ್ತೀಚೆಗೆ ನಟಿ ರಶ್ಮಿಕಾ ತಮ್ಮ ಹಿಂದಿನ ರಿಲೇಶಿನ್‌ಶಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನೀವು ಯಾರೊಂದಿಗೆ ಇರಬೇಕೆಂದು ಬಯಸುತ್ತೀರಿ ಅಂತವರನ್ನ ಮೊದಲು ಆಯ್ಕೆ ಮಾಡಿ ಎಂದು ಹೇಳಿಕೊಂಡಿದ್ದಾರೆ. ನಾನು ಹಿಂದೊಮ್ಮೆ ಇಂಥಹಾ ರಿಲೇಷನ್ನಲ್ಲಿ ಇದ್ದೆ ಎಂದು ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ಹಿಂದೆ ತಾವಿದ್ದ ರಿಲೇಷನ್ನಲ್ಲಿ ಹೇರಿಕೆ ಇತ್ತು, ನನ್ನ ತನಕ್ಕೆ ಅವಕಾಶ ಇರಲಿಲ್ಲ. ನನಗೆ ಆಯ್ಕೆಗಳೇ ಇರಲಿಲ್ಲ ಎಂದು ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ -
ರಶ್ಮಿಕಾ ಮಂದಣ್ಣ (Rashmika Mandanna) ಸಿನಿಮಾ ಹೊರತಾಗಿ ಆಗಾಗ ವೈಯಕ್ತಿಕ ವಿಚಾರಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ತಮ್ಮ ಹಿಂದಿನ ರಿಲೇಶಿನ್‌ಶಿಪ್ (Past Relationship) ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸುಮಾ ಕನಕಾಲ (Suma Kanakala) ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ನೀವು ಯಾರೊಂದಿಗೆ ಇರಬೇಕೆಂದು ಬಯಸುತ್ತೀರಿ ಅಂತವರನ್ನ ಮೊದಲು ಆಯ್ಕೆ ಮಾಡಿ ಎಂದು ಹೇಳಿಕೊಂಡಿದ್ದಾರೆ. ನಾನು ಹಿಂದೊಮ್ಮೆ ಇಂಥಹಾ ರಿಲೇಷನ್ನಲ್ಲಿ ಇದ್ದೆ ಎಂದು ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ.
ಈಗಿನ ಸಂಗಾತಿ ಅರ್ಥಪೂರ್ಣ
ರಶ್ಮಿಕಾ ಮಾತನಾಡಿ, ʻನನ್ನ ಈಗಿನ ಸಂಗಾತಿ, ಅರ್ಥಪೂರ್ಣ ಪಾತ್ರವನ್ನು ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕಾಳಜಿ ಮತ್ತು ತಾಳ್ಮೆಯಿಂದ ನನ್ನ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ನನ್ನತನಕ್ಕೆ ಅವಕಾಶ ಇದೆ, ಇಲ್ಲಿ ನಾನು ಖುಷಿಯಾಗಿದ್ದೇನೆ. ನಮ್ಮ ಸುತ್ತ ಇರುವವರೂ ಸಹ ಖುಷಿಯಾಗಿದ್ದಾರೆʼ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ!
ವಿಜಯ್ ದೇವರಕೊಂಡ ಅವರನ್ನು ನೇರವಾಗಿ ಹೆಸರಿಸದ ರಶ್ಮಿಕಾ, ʻನನ್ನ ಬಗ್ಗೆ ಟ್ರೋಲ್ ಆದಾಗ, , ಕೆಲವೊಂದು ಕೆಟ್ಟ ಸನ್ನಿವೇಶ ಎದುರಿಸಿದಾಗ, ನನ್ನ ಸಂಗಾತಿ ನಿರಂತರವಾಗಿ ಬೆಂಬಲ ನೀಡುತ್ತಾರೆ ಎಂದು ಹೇಳಿದರು. ಹಿಂದೆ ತಾವಿದ್ದ ರಿಲೇಷನ್ನಲ್ಲಿ ಹೇರಿಕೆ ಇತ್ತು, ನನ್ನ ತನಕ್ಕೆ ಅವಕಾಶ ಇರಲಿಲ್ಲ. ನನಗೆ ಆಯ್ಕೆಗಳೇ ಇರಲಿಲ್ಲʼ ಎಂದು ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಬೇರೆ ಆಯ್ಕೆ ಇಲ್ಲ
ರಾಹುಲ್ ರವೀಂದ್ರನ್ ನಿರ್ದೇಶನದ ತಮ್ಮ ಹೊಸ ಚಿತ್ರ 'ದಿ ಗರ್ಲ್‌ಫ್ರೆಂಡ್' ಚಿತ್ರದ ಪ್ರಚಾರದ ಸಂದರ್ಭದಲ್ಲಿ, ತಾವು ಒಮ್ಮೆ ಸಂಬಂಧದಲ್ಲಿ ಸಿಲುಕಿಕೊಂಡಿದ್ದಾಗ "ಬೇರೆ ಆಯ್ಕೆ ಇಲ್ಲ" ಎಂದು ಭಾವಿಸಿದ್ದಾಗಿ ಹಂಚಿಕೊಂಡರು. ಆ ವ್ಯಕ್ತಿಯ ಹೆಸರನ್ನು ಅವರು ಹೇಳಲಿಲ್ಲ, ಆದರೆ ಅವರ ಮಾತುಗಳು ಪ್ರಾಮಾಣಿಕ ಮತ್ತು ಭಾವನಾತ್ಮಕವಾಗಿದ್ದವು.
ಮದುವೆ ಯಾವಾಗ?
ಅಕ್ಟೋಬರ್ 2025 ರಲ್ಲಿ ವಿಜಯ್ ದೇವರಕೊಂಡ ಅವರೊಂದಿಗಿನ ನಿಶ್ಚಿತಾರ್ಥದ ಬಗ್ಗೆ ವೈರಲ್ ಆಗುತ್ತಿರುವಾಗ, ರಶ್ಮಿಕಾ ಈ ಮುಕ್ತ ಮಾತುಗಳನ್ನಾಡಿದ್ದಾರೆ. ಇದಕ್ಕೂ ಮೊದಲು, ರಶ್ಮಿಕಾ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಆ ಸಂಬಂಧವು 2018 ರಲ್ಲಿ ಕೊನೆಗೊಂಡಿತು.
ಈಗ, ಫೆಬ್ರವರಿ 26, 2026 ರಂದು ಉದಯಪುರದಲ್ಲಿ ವಿಜಯ್ ದೇವರಕೊಂಡ ಅವರನ್ನು ವಿವಾಹವಾಗುತ್ತಿದ್ದಾರೆ. ಇತ್ತೀಚೆಗೆ, ಅದರಲ್ಲೂ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಬಿಡುಗಡೆ ಬಳಿಕ ರಶ್ಮಿಕಾ, ತಮ್ಮ ಹಿಂದಿನ ಸಂಬಂಧ ಕೆಟ್ಟದಾಗಿತ್ತು, ಸ್ವಾತಂತ್ರ್ಯ ಇರಲಿಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ; ಇವರೆಲ್ಲರ ಕಣ್ಣು ಬೀಳಬಾರದಂತೆ!
ಜೋಡಿಯ ಕೆಮಿಸ್ಟ್ರಿ
ರಶ್ಮಿಕಾ ಹಾಗೂ ವಿಜಯ್ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಈ ಜೋಡಿಯ ಕೆಮಿಸ್ಟ್ರಿ ಇಷ್ಟವಾಗಿತ್ತು. ಸದ್ಯ ಅವರ ಆಫ್-ಸ್ಕ್ರೀನ್ ಪ್ರೀತಿಯು ಈಗ ಮದುವೆಯ ಹಂತಕ್ಕೆ ತಲುಪಿದ್ದು ಈ ಸುದ್ದಿಗಾಗಿ ಅಭಿಮಾನಿಗಳು ಕಾತರದಿಂದ ಕಾಯು ತ್ತಿದ್ದಾರೆ. ಪ್ಲಾನ್ ಕೂಡ ಮಾಡಿ ಕೊಂಡಿದ್ದಾರಂತೆ. ಕಳೆದ ತಿಂಗಳು, ಅಂದರೆ ಅಕ್ಟೋಬರ್ 3, 2025 ರಂದು ವಿಜಯ್ ಅವರ ಹೈದರಾಬಾದ್ ನಿವಾಸದಲ್ಲಿ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಖಾಸಗಿ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ.