ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಮೇ 8, 2026: ಈ ರಾಶಿಗಳಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು!

Horoscope Today May 8th :ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷದ, ಷಷ್ಠಿ ತಿಥಿ ,ಉತ್ತರಾಷಾಡ ನಕ್ಷತ್ರದ ಮೇ 8 ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಈ ರಾಶಿಯವರಿಗೆ ಇಂದು ಶುಭದಾಯಕ ದಿನ!

ಇಂಟರ್ ನೆಟ್ ಚಿತ್ರ -

Profile
Pushpa Kumari May 8, 2026 6:00 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷದ, ಷಷ್ಠಿ ತಿಥಿ , ಉತ್ತರಾಷಾಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಮೇಷ ರಾಶಿಗೆ ಇಂದು ಉತ್ತಮವಾದ ದಿನವಾಗಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಅದೃಷ್ಟ ಪರೀಕ್ಷೆ ಇಂದು ಕೊನೆಯಾಗುತ್ತದೆ.

ವೃಷಭ ರಾಶಿ: ಈ ರಾಶಿಗೆ ಇಂದು ಭಾಗ್ಯೋದಯವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ.‌ ಆದರೂ ಕೆಲವೊಂದು ಅದೃಷ್ಟ ಪರೀಕ್ಷೆ ನಡೆಯುತ್ತಿರುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ನೀವು ಅಂದು ಕೊಂಡದ್ದೆಲ್ಲ ಇಂದು ವಿರುದ್ಧವಾಗಿ ನಡೆಯುತ್ತದೆ. ಯಾವುದೇ ಇಮೇಲ್ ಚಾಟ್ ಇಂದು ಮಾಡಲು ಹೋಗಬೇಡಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ಪ್ರೀತಿ ಪಾತ್ರರಿಂದ ನೆಮ್ಮದಿ ಹಾಗೂ ಬಿಸೆನೆಸ್ ವ್ಯವಹಾರದಲ್ಲೂ ಹೆಚ್ಚಿನ ಯಶಸ್ಸು ನಿಮಗೆ ಸಿಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದು ಶತ್ರುಗಳನ್ನು ಹಿಮ್ಮೆಟ್ಟಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಲಾಸ್ ಆಗಬಹುದು. ಬಿಸೆನೆಸ್ ವ್ಯವಹಾರದಲ್ಲೂ ನಷ್ಟ ಉಂಟಾಗಬಹುದು. ಹಾಗಾಗಿ ಜಾಗೃತರಾಗಿರಿ.

ತುಲಾ ರಾಶಿ: ತುಲಾ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಆದರೂ ತಾಯಿಯ ಆರೋಗ್ಯದ ಬಗ್ಗೆ ನೀವು ಹೆಚ್ಚು ಯೋಚಿಸಬೇಕಾಗುತ್ತದೆ.

Vastu Tips: ಕಚೇರಿಯಲ್ಲಿ ನೀರಿನ ಬಾಟಲಿ ಯಾವ ದಿಕ್ಕಿನಲ್ಲಿ ಇಡಬೇಕು? ವಾಸ್ತು ಪ್ರಕಾರ ಈ ತಪ್ಪುಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು!

ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ನೆಮ್ಮದಿ ಸಿಗಲಿದ್ದು ಪ್ರೀತಿ ಪಾತ್ರರು,ಸಹೋದರ ಸಹೋದರಿಯರಿಂದ ಖುಷಿ ಸಿಗುತ್ತದೆ. ಎಲ್ಲ ಕೆಲಸ ಕಾರ್ಯದಲ್ಲಿ ಅತೀ ಹೆಚ್ಚು ಯಶಸ್ಸು ನಿಮ್ಮದಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾದವಾಗಿದೆ. ಆದರೆ ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಬಿಸೆನೆಸ್ ವ್ಯವಹಾರದಲ್ಲಿ ಹಣ ಹೂಡಿಕೆಯ ಬಗ್ಗೆ ಎಚ್ಚರ ವಹಿಸಿ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ದಿನದಲ್ಲಿ ಇದ್ದ ನೋವೆಲ್ಲ ಮಾಯವಾಗುತ್ತದೆ. ಮುಂದಿನ ದಿನಗಳಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಇಂದು ಕಷ್ಟಕರವಾದ ದಿನ ವಾಗಿದೆ. ಯಾವುದೇ ಮುಖ್ಯ ನಿರ್ಧಾರ ಮಾಡಲು ಹೋಗಬೇಡಿ. ನಿಮಗೆ ತೊಂದರೆ,ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚು.

ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ದಿಗುತ್ತದೆ. ಮಿತ್ರರಿಂದ ಧನ ಲಾಭ ಆಗುವ ಸಾಧ್ಯತೆ ಇದೆ. ಅತೀ ಸಂತೋಷದಾಯಕವಾಗಿ ದಿನ ಕಳೆಯಬಹುದು.