ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಮೆಟ್ಟಿಲು ಯಾವ ರೀತಿ ಇರಬೇಕು?

ಸಾಮಾನ್ಯವಾಗಿ ಮನೆಯ ಒಳಾಂಗಣದಿಂದ ಮೇಲಿನ ಮಹಡಿಗೆ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸುತ್ತೇವೆ. ಇದು ಹೆಚ್ಚು ಭಾರವಾಗಿ ಇರಬೇಕಿಲ್ಲ. ಆಕರ್ಷಕವಾಗಿದ್ದರೆ ಸಾಕು ಎಂದುಕೊಳ್ಳುತ್ತೇವೆ. ಒಂದು ವೇಳೆ ನೀವು ಹೀಗೆ ಯೋಚಿಸುತ್ತಿದ್ದರೆ ಎಚ್ಚರ. ಯಾಕೆಂದರೆ ಕೆಲವೊಂದು ರೀತಿಯ ಮೆಟ್ಟಿಲುಗಳು ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ.

ಮನೆಯ ಮೆಟ್ಟಿಲುಗಳು ಹೇಗಿರಬೇಕು ಗೊತ್ತೆ?

-

ಬೆಂಗಳೂರು: ಮನೆಯ (Vastu for home) ಒಳಾಂಗಣ ಅಥವಾ ಹೊರಾಂಗಣದಲ್ಲಿ ಮೆಟ್ಟಿಲುಗಳನ್ನು (Vastu for stairs) ನಿರ್ಮಿಸುವಾಗ ಕೆಲವೊಂದು ರೀತಿಯ ಎಚ್ಚರಿಕೆಗಳನ್ನು ವಹಿಸಲೇಬೇಕು. ಯಾಕೆಂದರೆ ಇದು ವಾಸ್ತು (Vastu tips) ದೋಷವನ್ನು ಉಂಟು ಮಾಡಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಮನೆಯ ಮೆಟ್ಟಿಲುಗಳನ್ನು ಘನವಾದ ವಸ್ತುಗಳಿಂದ ನಿರ್ಮಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ (Vastu shastra). ಮನೆಯ ವಾಸ್ತು ಸಮತೋಲನದಲ್ಲಿರಬೇಕು. ಇದಕ್ಕಾಗಿ ಮನೆಯ ಪ್ರತಿಯೊಂದು ವಸ್ತುವು ಒಂದರ ಮೇಲೆ ಇನ್ನೊಂದು ಅವಲಂಬಿತವಾಗಿರುತ್ತದೆ. ಇದರಲ್ಲಿ ಮೆಟ್ಟಿಲುಗಳ ಪಾತ್ರವು ಬಹಳ ಮುಖ್ಯವಾಗಿರುತ್ತದೆ.

ಮನೆಯ ವಾಸ್ತು ಸಮತೋಲನದಲ್ಲಿ ಕೋಣೆ, ಬಾಗಿಲು, ಕಿಟಕಿಗಳ ದಿಕ್ಕು ಮಾತ್ರವಲ್ಲ ಮೆಟ್ಟಿಲುಗಳ ರಚನೆಯು ಕೂಡ ಪ್ರಮುಖ ಪಾತ್ರವಹಿಸುತ್ತದೆ. ಮೆಟ್ಟಿಲುಗಳು ಮನೆಯ ಶಕ್ತಿಯನ್ನು ಕೆಳಗಿನ ಮಹಡಿಯಿಂದ ಮೇಲೆ, ಮೇಲಿನ ಮಹಡಿಯಿಂದ ಕೆಳಗೆ ಕೊಂಡೊಯ್ಯುವ ಕೆಲಸ ಮಾಡುತ್ತದೆ. ಅವುಗಳ ರಚನೆಯಲ್ಲಿ ಕೊರತೆ ಇದ್ದರೆ ಅದು ಕುಟುಂಬದ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಮನೆಯ ಒಳಾಂಗಣವಾಗಿರಲಿ ಅಥವಾ ಹೊರಾಂಗಣವಾಗಿರಲಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇರಿಸಬೇಕು. ಅದರಲ್ಲೂ ಮುಖ್ಯವಾಗಿ ಮನೆಯ ಮೆಟ್ಟಿಲುಗಳನ್ನು ಯಾವಾಗಲೂ ಘನ ಮತ್ತು ಬಲವಾದ ವಸ್ತುಗಳಿಂದಲೇ ತಯಾರಿಸಿರಬೇಕು.

ಮನೆಯಲ್ಲಿ ಟೊಳ್ಳಾದ ಮೆಟ್ಟಿಲುಗಳನ್ನು ಇರಿಸಬಾರದು. ಯಾಕೆಂದರೆ ಇವುಗಳು ನಕಾರಾತ್ಮಕ ಶಕ್ತಿಗೆ ಆಹ್ವಾನವನ್ನು ನೀಡುತ್ತದೆ. ಮನೆಯಲ್ಲಿ ಸ್ಥಿರತೆಯ ಕೊರತೆಯನ್ನು ಉಂಟು ಮಾಡುತ್ತದೆ.

ಟೊಳ್ಳಾದ ಮೆಟ್ಟಿಲುಗಳು ಮನೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇವುಗಳ ಕೆಳಗೆ ಕೇಳಿ ಬರುವ ಶಬ್ದ ಕಂಪನದ ಮೇಲೆ ಪರಿಣಾಮ ಬೀರಿ ಶಕ್ತಿಯ ಹರಿವಿಗೆ ಅಡ್ಡಿಯುಂಟು ಮಾಡುತ್ತವೆ. ಮಾತ್ರವಲ್ಲದೆ ಇದು ಸುರಕ್ಷತೆಯ ದೃಷ್ಟಿಯಿಂದ ಕೂಡ ಒಳ್ಳೆಯದಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

ಇದನ್ನೂ ಓದಿ: Vastu Tips: ಮನೆಯೊಳಗೆ ಮಹಡಿ ಮೆಟ್ಟಿಲು ನಿರ್ಮಾಣ ಪಾಲಿಸಲೇಬೇಕು ವಾಸ್ತು ನಿಯಮ

ಮನೆಯ ಮೆಟ್ಟಿಲುಗಳನ್ನು ನಿರ್ಮಿಸುವಾಗ ಯಾವಾಗಲೂ ಕಾಂಕ್ರೀಟ್, ಕಲ್ಲು ಅಥವಾ ಉತ್ತಮ ಗುಣಮಟ್ಟದ ಮರವನ್ನು ಬಳಸಬೇಕು. ಈ ಮೆಟ್ಟಿಲುಗಳ ದಿಕ್ಕು ಮತ್ತು ರಚನೆ ಎರಡೂ ಸರಿಯಾಗಿದ್ದರೆ ಮಾತ್ರ ಮನೆಯಲ್ಲಿ ಶಾಂತಿ, ಸಂತೋಷ, ಸಮೃದ್ಧಿ ತುಂಬಿ ತುಳುಕಲು ಸಾಧ್ಯವಿದೆ.

ಬಲವಾದ ಮತ್ತು ಘನ ಮೆಟ್ಟಿಲುಗಳು ಮನೆಗೆ ರಕ್ಷಣೆಯನ್ನು ಒದಗಿಸುತ್ತದೆ. ಇದು ಮನೆಯ ಅಡಿಪಾಯ ಮಾತ್ರವಲ್ಲ ವಾಸ್ತು ಸಮಸ್ಯೆಗಳನ್ನು ದೂರ ಮಾಡಿ ಹೆಚ್ಚು ದೃಢವಾಗಿ ಇರುವಂತೆ ಮಾಡುತ್ತದೆ. ಇದು ಕುಟುಂಬ ಸದಸ್ಯರಲ್ಲಿ ಆತ್ಮವಿಶ್ವಾಸ ಮತ್ತು ಸ್ಥಿರತೆಯ ಭಾವನೆ ಬೆಳೆಸುತ್ತದೆ.

ಹೆಚ್ಚು ಘನವಾಗಿರುವ ಮೆಟ್ಟಿಲುಗಳು ಸಕಾರಾತ್ಮಕ ಶಕ್ತಿಯನ್ನು ಕಾಪಾಡುತ್ತವೆ. ಇದು ಮನೆಯ ಸ್ಥಿರತೆಯನ್ನು ಕಾಪಾಡುತ್ತದೆ. ಸಕಾರಾತ್ಮಕ ಶಕ್ತಿಯನ್ನು ಸಮೃದ್ಧಿಗೊಳಿಸುತ್ತದೆ.