ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ʼರಾಮಾಯಣʼದ ʼಯಶʼ- ಹೊಸ ಭರವಸೆ

ಯಶ್ ರಾವಣ ಪಾತ್ರದಲ್ಲಿರುವ, ನಿರ್ಮಾಪಕನೂ ಆಗಿರುವ ರಾಮಾಯಣ ಚಿತ್ರದ ಮೊದಲ ಭಾಗ ನ.5ಕ್ಕೆ ಬಿಡುಗಡೆಯಾದಾಗ, ಎಲ್ಲರಿಗೂ ಒಂದು ಅನುಮಾನವಿತ್ತು. ಯಾವ ಭರವಸೆ ಇಟ್ಟು ಕೊಂಡು, ಸಿನಿಮಾದ ಎರಡೂ ಭಾಗಗಳಿಗೆ ಸೇರಿ 4000 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ? ಭಾರತೀಯರ ಮನೆಮನೆಗಳಲ್ಲಿ ನಿತ್ಯ ಮಾತಾಡುವ, ಗೊತ್ತಿರುವ ಈ ಕಥೆಗೆ ಹಾಕಿರುವ ಸಿನಿಮಾದ ಹಣ ವಾಪಸ್ ಬರುತ್ತದಾ? ಕಥೆ ಗೊತ್ತಿರುವುದರಿಂದ, ರಾಮಾಯಣದ ಔನ್ನತ್ಯದ ಬಗ್ಗೆಯೂ ಒಂದು ಕಲ್ಪನೆ ಎಲ್ಲರಲ್ಲಿರುತ್ತದೆ.

Vishwavani Editorial: ʼರಾಮಾಯಣʼದ ʼಯಶʼ- ಹೊಸ ಭರವಸೆ

-

Profile
Ashok Nayak Nov 13, 2026 9:20 AM

ಯಶ್ ರಾವಣ ಪಾತ್ರದಲ್ಲಿರುವ, ನಿರ್ಮಾಪಕನೂ ಆಗಿರುವ ರಾಮಾಯಣ ಚಿತ್ರದ ಮೊದಲ ಭಾಗ ನ.5ಕ್ಕೆ ಬಿಡುಗಡೆಯಾದಾಗ, ಎಲ್ಲರಿಗೂ ಒಂದು ಅನುಮಾನವಿತ್ತು. ಯಾವ ಭರವಸೆ ಇಟ್ಟು ಕೊಂಡು, ಸಿನಿಮಾದ ಎರಡೂ ಭಾಗಗಳಿಗೆ ಸೇರಿ 4000 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ? ಭಾರತೀಯರ ಮನೆಮನೆಗಳಲ್ಲಿ ನಿತ್ಯ ಮಾತಾಡುವ, ಗೊತ್ತಿರುವ ಈ ಕಥೆಗೆ ಹಾಕಿರುವ ಸಿನಿಮಾದ ಹಣ ವಾಪಸ್ ಬರುತ್ತದಾ? ಕಥೆ ಗೊತ್ತಿರುವುದರಿಂದ, ರಾಮಾಯಣದ ಔನ್ನತ್ಯದ ಬಗ್ಗೆಯೂ ಒಂದು ಕಲ್ಪನೆ ಎಲ್ಲರಲ್ಲಿರುತ್ತದೆ. ಅದನ್ನು ಸಾಕಾರ ಮಾಡುವ ಮಟ್ಟಕ್ಕೆ ಏರಲು ನಿರ್ದೇಶಕನಿಗೆ ಸಾಧ್ಯವೇ? ಏನು ಮಾಡಿದರೂ ಅದರಲ್ಲೊಂದು ತಪ್ಪು ಕಂಡುಹಿಡಿಯುವ, ಹೀಗಿರಬೇಕಿತ್ತು, ಹಾಗಿರಬೇಕಿತ್ತು ಎನ್ನುವ ಗೊಣಗಾಟದಲ್ಲೇ ಸಿನಿಮಾ ಸೋಲಬಹುದು ಎಂಬ ಅಳುಕು ಇತ್ತು.

ಇದನ್ನೂ ಓದಿ: ‌Yash: ಬಾಕ್ಸ್‌ ಆಫೀಸ್‌ನಲ್ಲಿ ನಿಲ್ಲದ ʻರಾಮಾಯಣʼ ಚಿತ್ರದ ಅಬ್ಬರ; 1000 ಕೋಟಿ ಕ್ಲಬ್‌ ಸೇರಲು ಇನ್ನೆಷ್ಟು ಹಣ ಬೇಕು?

ಇವೆಲ್ಲ ಗೊತ್ತಿದ್ದರೂ, ಕನ್ನಡಿಗ ಯಶ್ ಮಾಡಿರುವ ಸಾಹಸಕ್ಕೇ ಮೊದಲು ಒಂದು ಜೈಕಾರ ಹಾಕ ಬೇಕು. ಈ ಸಿನಿಮಾದಲ್ಲಿ ಯಶ್ ನಾಯಕನಾಗಲು ಹೋಗದೇ ಖಳನಾಯಕ ರಾವಣನ ಪಾತ್ರಕ್ಕೆ ಸಿದ್ಧರಾಗಿ, ಜನರಿಂದ ಭಾರೀ ಮೆಚ್ಚುಗೆ ಪಡೆದಿದ್ದಾರೆ. ಸಿನಿಮಾ ಬಿಡುಗಡೆಯಾದ ಬರೀ 7 ದಿನಗಳಲ್ಲಿ ಸಂಗ್ರಹ 1000 ಕೋಟಿ ರು. ದಾಟಿದೆ! ಇನ್ನುಳಿದ ಹಣ ಬರುವ ಬಗ್ಗೆ ನಿರ್ಮಾಪಕರಿಗೆ ಈಗ ಯಾವ ಅನುಮಾನವೂ ಉಳಿದಿಲ್ಲ. ಈ ಸಿನಿಮಾದ ಯಶಸ್ಸಿಗೆ ಕಾರಣವೇನು? ಇದರಿಂದ ಸಿನಿಮಾ ರಂಗಕ್ಕೆ ತಲುಪಿರುವ ಸಂದೇಶವೇನು? ವಾಸ್ತವಿಕವಾಗಿ ಹೇಳುವುದಾದರೆ ಹಳೆಯ ತಲೆಮಾರಿಗೆ ರಾಮಾ ಯಣದ ಕಥೆ ಗೊತ್ತಿದೆ.

ಬಹುತೇಕ ಯುವಕರನ್ನೇ ಹೊಂದಿರುವ ಭಾರತದ ಹೊಸ ತಲೆಮಾರಿಗೆ ರಾಮಾಯಣ ಎಂಬ ಪದ ಗೊತ್ತು, ಮೇಲುಮೇಲಿನ ಕಥೆ ಗೊತ್ತೇ ಹೊರತು, ಅದರ ಆಳ ಅಗಲ ಗೊತ್ತೇ ಇಲ್ಲ. ಹೀಗಂತ ಧೈರ್ಯವಾಗಿ ಹೇಳಬಹುದು. ಹೊಸ ತಲೆಮಾರಿನ ಯಾರು ವಾಲ್ಮೀಕಿ ರಾಮಾಯಣವನ್ನು ಪೂರ್ಣವಾಗಿ ಓದಿದ್ದಾರೆ? ಹೋಗಲಿ ರಾಮಾಯಣವನ್ನು ಇಷ್ಟು ವೈಭವದಿಂದ ತೋರಿಸಲು ಹಿಂದೆ ಯಾರು ಧೈರ್ಯ ಮಾಡಿದ್ದಾರೆ? ಅಂತಹದ್ದೊಂದು ಅದ್ಭುತ ಕಥೆ, ಅಷ್ಟೇ ವೈಭವದ ನಿರ್ಮಾಣ ವರ್ತಮಾನದಲ್ಲಿ ಬೇಕಿತ್ತು. ಆ ಸಾಹಸಕ್ಕೆ ಯಶ್ ಮತ್ತು ಪ್ರಧಾನ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೈಹಾಕಿ ಯಶಸ್ಸು ಕಂಡಿದ್ದಾರೆ.

ಅತ್ಯುತ್ತಮ ಸಾಹಸಗಳಿಗೆ, ಕಸುಬುದಾರಿಕೆಗೆ ಯಶಸ್ಸು ಸಿಗುತ್ತದೆ ಅನ್ನುವ ಸಂದೇಶ ಈ ಸಿನಿಮಾ ದಿಂದ ಸಿಕ್ಕಿದೆ. ಅದು ಸೋಲಿಗೆ ಸಿಲುಕಿ ನರಳುತ್ತಿರುವ ಇಡೀ ಚಿತ್ರರಂಗಕ್ಕೆ ಹೊಸ ಭರವಸೆ ತುಂಬಿದೆ.