Vishwavani Editorial: ನಮ್ಮ ಸಂಸ್ಕೃತಿ ನಿತ್ಯನೂತನ

ಡಿ.ವಿ.ಗುಂಡಪ್ಪನವರು. ‘ಅಪ್ಪ ಹಾಕಿದ ಆಲದಮರವೆಂದು ಅದಕ್ಕೇ ಸಂಪೂರ್ಣವಾಗಿ ಜೋತು ಬೀಳುತ್ತೇನೆ’ ಎನ್ನುವುದಾಗಲೀ, ‘ಹಳೆಯದೆಲ್ಲ ಗೊಡ್ಡು ಸಂಪ್ರದಾಯ, ಆಧುನಿಕ ಚಿಂತನೆ ಯಷ್ಟೇ ಸರ್ವಥಾ ಯೋಗ್ಯ’ ಎಂದು ಪಟ್ಟುಹಿಡಿಯುವುದಾಗಲೀ ಯಾವ ಕಾಲಕ್ಕೂ ಸ್ವೀಕಾ ರಾರ್ಹ ಎನಿಸುವುದಿಲ್ಲ. ಹಳತು ಮತ್ತು ಹೊಸತರ ಹಿತಮಿತವಾದ ಮಿಶ್ರಣವಿದ್ದರೇನೇ ಬದುಕು ಸೊಗಸು

DV Gundappa
Profile Ashok Nayak January 16, 2025

Source : Vishwavani Daily News Paper

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆತತ್ವ ದೊಡ ಗೂಡೆ ಧರ್ಮ, ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ, ಜಸವು ಜನಜೀವನಕೆ- ಮಂಕುತಿಮ್ಮ’ ಎಂದಿದ್ದಾರೆ

ಡಿ.ವಿ.ಗುಂಡಪ್ಪನವರು. ‘ಅಪ್ಪ ಹಾಕಿದ ಆಲದಮರವೆಂದು ಅದಕ್ಕೇ ಸಂಪೂರ್ಣವಾಗಿ ಜೋತುಬೀಳುತ್ತೇನೆ’ ಎನ್ನುವುದಾಗಲೀ, ‘ಹಳೆಯದೆಲ್ಲ ಗೊಡ್ಡು ಸಂಪ್ರದಾಯ, ಆಧುನಿಕ ಚಿಂತನೆಯಷ್ಟೇ ಸರ್ವಥಾ ಯೋಗ್ಯ’ ಎಂದು ಪಟ್ಟುಹಿಡಿಯುವುದಾಗಲೀ ಯಾವ ಕಾಲ ಕ್ಕೂ ಸ್ವೀಕಾರಾರ್ಹ ಎನಿಸುವುದಿಲ್ಲ. ಹಳತು ಮತ್ತು ಹೊಸತರ ಹಿತಮಿತವಾದ ಮಿಶ್ರಣ ವಿದ್ದರೇನೇ ಬದುಕು ಸೊಗಸು.

ಹೀಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ, ಹಳತರ ಪ್ರಾತಿನಿಧಿಕ ರೂಪವಾದ ಅಜ್ಜ ಹಾಗೂ ಭವಿಷ್ಯದ ಭರವಸೆಯ ಸ್ವರೂಪವಾದ ಮೊಮ್ಮಗ ಒಂದಾಗಿ ಬೆರೆತು ಸಂಭ್ರಮಿಸುವ ಪರಿಕಲ್ಪನೆಗೆ ಇನ್ನಿಲ್ಲದ ಜೀವಂತಿಕೆ ಇರುವುದು. ಉತ್ತರ ಪ್ರದೇಶ ರಾಜ್ಯದ ಪ್ರಯಾಗ್‌ರಾಜ್‌ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ದೇಶ-ವಿದೇಶಗಳ ಬರೋಬ್ಬರಿ 2.50 ಕೋಟಿ ಭಕ್ತರು ಪುಣ್ಯಸ್ನಾನ ಕೈಗೊಂಡ ಮಾಹಿತಿಯ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬೇಕಾಗಿ ಬಂದಿದೆ.

ಪಾಪ-ಪುಣ್ಯಗಳ ಕುರಿತಾದ ಗ್ರಹಿಕೆಯನ್ನು ನಂಬುವುದು ಬಿಡುವುದು ಅವರವರ ವಿವೇಚ ನೆಗೆ ಬಿಟ್ಟ ವಿಷಯ. ಆದರೆ, 144 ವರ್ಷಗಳ ಬಳಿಕ ಬಂದಿರುವ ಈ ಪವಿತ್ರ ಪರ್ವಕಾಲದಲ್ಲಿ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಹೀಗೊಂದು ಪುಣ್ಯಸ್ನಾನ ವನ್ನು ಕೈಗೊಂಡರೆ ಬದುಕು ಪಾವನವಾಗುತ್ತದೆ ಎಂಬ ನಂಬಿಕೆಯೊಂದಿಗೆ ಶ್ರದ್ಧಾವಂತರು ಅಲ್ಲಿಗೆ ಧಾವಿಸುವು ದಿದೆಯಲ್ಲಾ, ಆ ನಂಬಿಕೆಯೇ ಅವರನ್ನು ಕಾಪಾಡುತ್ತದೆ ಎನ್ನಲಡ್ಡಿಯಿಲ್ಲ.

‘ನಂಬಿಕೆಯೇ ದೇವರು’ ಎಂಬ ಮಾತು ನಮ್ಮಲ್ಲಿ ಚಾಲ್ತಿಯಲ್ಲಿರುವುದು ಪ್ರಾಯಶಃ ಈ ನೆಲೆಯಲ್ಲೇ ಇರಬೇಕು. ಮನೆಗೆ ಬಂದ ಬಂಧುಗಳು ಒಂದು ದಿನದ ಮಟ್ಟಿಗೆ ಉಳಿಯ ಬೇಕಾದಾಗ, ಅತಿಥಿ ಸತ್ಕಾರದ ನೆಲೆಯಲ್ಲಿ ಅವರಿಗೆ ಕಲ್ಪಿಸಿಕೊಡಬೇಕಾದ ವ್ಯವಸ್ಥೆಗಳ ಬಗ್ಗೆ ಮನೆಯ ಯಜಮಾನ ಸಾಕಷ್ಟು ಕಸರತ್ತು ಮಾಡುವುದುಂಟು. ಅಂಥದ್ದರಲ್ಲಿ ನಿರ್ದಿಷ್ಟ ನೆಲೆಗೆ ಏಕಕಾಲಕ್ಕೆ ಕೋಟ್ಯಂತರ ಜನರು ಬಂದಾಗ, ಅವರನ್ನು ನಿರ್ವಹಿಸುವುದು ನಿಜಕ್ಕೂ

ಸವಾಲೇ. ಇದನ್ನು ಸಮರ್ಥವಾಗಿ ಎದುರಿಸಿರುವ ಉತ್ತರ ಪ್ರದೇಶ ಸರಕಾರಕ್ಕೆ ಅಭಿನಂದಿಸ ಲೇಬೇಕು.

ಇದನ್ನೂ ಓದಿ: ಭಗವಂತನನ್ನೇ ಬೀದಿಗೆಳೆದಾಗ ಬಾಯಿ ಮುಚ್ಚಿ ಕುಳಿತವರು ಈಗ....?!

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ