IPL 2026: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಸೂರ್ಯವಂಶಿ ಹಿಂದಿಕ್ಕಿದ ಅಭಿಷೇಕ್; ಇಶಾನ್ ಮಾಲಿಂಗ ಪಾಲಾದ ಪರ್ಪಲ್ ಕ್ಯಾಪ್
IPL 2026 Points Table: ತವರಿನ ಅಭಿಮಾನಿಗಳ ಮುಂದೆ ಸೋತ ಮುಂಬೈ ಇಂಡಿಯನ್ಸ್ ತಂಡ ಅಂಕ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ. ಎಂಟು ಪಂದ್ಯಗಳಿಂದ ಕೇವಲ 4 ಅಂಕ ಪಡೆದಿದ್ದಾರೆ. ಮತ್ತೊಂದೆಡೆ, ಒಂಬತ್ತು ಪಂದ್ಯಗಳಲ್ಲಿ ಆರನೇ ಗೆಲುವು ಸಾಧಿಸಿದ ನಂತರ, SRH ಈಗ ಪಾಯಿಂಟ್ಸ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದೆ.
Abhishek Sharma and Eshan Malinga -
ಮುಂಬಯಿ, ಎ. 30: ಬುಧವಾರ (ಏಪ್ರಿಲ್ 29) ನಡೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್ (76) ಮತ್ತು ಹೆನ್ರಿಕ್ ಕ್ಲಾಸೆನ್ (65*) ಅಮೋಘ ಅರ್ಧಶತಕಗಳನ್ನು ಗಳಿಸಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 18.4 ಓವರ್‌ಗಳಲ್ಲಿ 244 ರನ್‌ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಐತಿಹಾಸಿಕ ಗೆಲುವು ಸಾಧಿಸಲು ನೆರವಾಯಿತು. ಈ ಪಂದ್ಯದ ಬಳಿಕ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ.
ಪಂದ್ಯದಲ್ಲಿ ಕೇವಲ 24 ಎಸೆತಗಳಲ್ಲಿ 45 ರನ್ ಗಳಿಸಿ ಅಭಿಷೇಕ್ ಶರ್ಮ ಅವರ ರನ್‌ಗಳ ಸಂಖ್ಯೆಯನ್ನು 425 ಕ್ಕೆ ವಿಸ್ತರಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನ ಪಡೆದರು. ಇದಕ್ಕೂ ಮುನ್ನ 15 ವರ್ಷದ ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ಪಡೆದಿದ್ದರು. ಇದೀಗ ಅವರನ್ನು ಅಭಿಷೇಕ್ ಹಿಂದಿಕ್ಕಿದ್ದಾರೆ. 25 ಹೆಚ್ಚು ರನ್ ಗಳಿಸಿದ್ದಾರೆ. ಹೆನ್ರಿಕ್ ಕ್ಲಾಸೆನ್ 414 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಲೀಡರ್‌ಬೋರ್ಡ್‌ನಲ್ಲಿ ಈಗ 2 ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2026 ರ ಟಾಪ್ 10 ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಪ್ರಭ್‌ಸಿಮ್ರಾನ್ ಸಿಂಗ್, ಶುಭಮನ್ ಗಿಲ್, ಸಾಯಿ ಸುದರ್ಶನ್, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಉಳಿದ 7 ಸ್ಥಾನಗಳನ್ನು ಪಡೆದಿದ್ದಾರೆ.
ಶ್ರೀಲಂಕಾದ ವೇಗದ ಬೌಲರ್ ಇಶಾನ್ ಮಾಲಿಂಗ ಬುಧವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ SRH ಪರ ನಾಲ್ಕು ಓವರ್ ಬೌಲಿಂಗ್ ಮಾಡಿ ಕೇವಲ 29 ರನ್ ನೀಡಿ 1 ವಿಕೆಟ್ ಪಡೆದರು. ವಾಂಖೆಡೆ ಕ್ರೀಡಾಂಗಣದಲ್ಲಿ ಮಾಲಿಂಗ ಗಳಿಸಿದ ಒಂದು ವಿಕೆಟ್ ಐಪಿಎಲ್ 2026 ರಲ್ಲಿ ತಮ್ಮ ವಿಕೆಟ್‌ಗಳ ಸಂಖ್ಯೆಯನ್ನು15 ಕ್ಕೆ ವಿಸ್ತರಿಸಲು ಸಾಕಾಗಿತ್ತು ಮತ್ತು ಈ ವರ್ಷದ ಐಪಿಎಲ್‌ನಲ್ಲಿ ಅವರು ಈಗ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆರ್‌ಸಿಬಿಯ ಭುವನೇಶ್ವರ ಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್ ಮತ್ತು ಸಿಎಸ್‌ಕೆ ವೇಗಿ ಅನ್ಶುಲ್ ಕಾಂಬೋಜ್ ತಲಾ 14 ವಿಕೆಟ್‌ನೊಂದಿಗೆ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.
GT vs RCB: ಇಂದಿನ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ
ತವರಿನ ಅಭಿಮಾನಿಗಳ ಮುಂದೆ ಸೋತ ಮುಂಬೈ ಇಂಡಿಯನ್ಸ್ ತಂಡ ಅಂಕ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ. ಎಂಟು ಪಂದ್ಯಗಳಿಂದ ಕೇವಲ 4 ಅಂಕ ಪಡೆದಿದ್ದಾರೆ. ಮತ್ತೊಂದೆಡೆ, ಒಂಬತ್ತು ಪಂದ್ಯಗಳಲ್ಲಿ ಆರನೇ ಗೆಲುವು ಸಾಧಿಸಿದ ನಂತರ, SRH ಈಗ ಪಾಯಿಂಟ್ಸ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದೆ. ಅವರು RCB ಮತ್ತು ರಾಜಸ್ಥಾನ್ ರಾಯಲ್ಸ್‌ನಂತೆಯೇ ಅಂಕಗಳನ್ನು ಹೊಂದಿದ್ದಾರೆ. ಆದರೆ ಉತ್ತಮ ರನ್‌ರೇಟ್‌ನಿಂದ RCB ಪಾಯಿಂಟ್ಸ್ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ.