"ನಿರಾಶೆಗೊಂಡಿದ್ದಕ್ಕೆ ಕ್ಷಮಿಸಿ"; ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯ ಅವಮಾನಕರ ಪೋಸ್ಟ್‌ಗೆ ಪಾರ್ಥಿವ್ ಪಟೇಲ್ ತಿರುಗೇಟು
Parthiv Patel: ಪಾರ್ಥಿವ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಈಗ ಸ್ಥಗಿತಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಡೆಕ್ಕನ್ ಚಾರ್ಜರ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ.
Parthiv Patel -
ಅಹಮದಾಬಾದ್, ಮೇ 2: ಐಪಿಎಲ್(IPL 2026) ದಾಖಲೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿ ಟ್ರೋಲ್ ಮಾಡಿದವರಿಗೆ ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್(Parthiv Patel) ಸೂಕ್ತ ಅಂಕಿ ಅಂಶಗಳೊಂದಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ ಎಂದಿಗೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿಲ್ಲ ಎಂದು ಕೆಲವು ನೆಟ್ಟಿಗರು ಪಾರ್ಥಿವ್ ಅವರನ್ನು ಟ್ರೋಲ್ ಮಾಡಿದ್ದರು.
13 ಐಪಿಎಲ್ ಸೀಸನ್‌ಗಳನ್ನು ಆಡಿಯೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲದ ಆಟಗಾರ ಯಾರೆಂದರೆ ಪಾರ್ಥಿವ್ ಎಂದು ಸಾಮಾಜಿಕ ಜಾತಾಣದಲ್ಲಿ ಟ್ರೋಲ್ ಮಾಡಲಾಗುತ್ತಿತ್ತು. ಇದಕ್ಕೆ ತಮ್ಮ ಅಂಕಿಅಂಶಗಳ ಸ್ಕ್ರೀನ್‌ಶಾಟ್‌ನೊಂದಿಗೆ ಉತ್ತರಿಸಿದ ಪಾರ್ಥಿವ್, ತಾವು ಪಡೆದ ಪಂದ್ಯಶ್ರೇಷ್ಠ ಪ್ರಶಸ್ತಿಯ ಮಾಹಿತಿ ಜತೆಗೆ ಐಪಿಎಲ್‌ನಲ್ಲಿ ಅವರ ಸಾಧನೆಯನ್ನು ಟ್ರೋಲಿಗರ ಟ್ವೀಟ್‌ಗೆ ರೀ ಟ್ವೀಟ್ ಮಾಡಿ "ನಿರಾಶೆಗೊಂಡಿದ್ದಕ್ಕೆ ಕ್ಷಮಿಸಿ!!" ಎಂದು ವ್ಯಂಗ್ಯವಾಗಿ ಶೀರ್ಷಿಕೆ ನೀಡಿದ್ದಾರೆ.
2003 ರಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಪಾರ್ಥಿವ್, 25 ಟೆಸ್ಟ್, 38 ಏಕದಿನ ಮತ್ತು ಎರಡು ಟಿ 20 ಐಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಎಲ್ಲಾ ಸ್ವರೂಪಗಳಲ್ಲಿ 1,706 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ, ಅವರು 139 ಪಂದ್ಯಗಳಲ್ಲಿ ಆಡಿ, 2,848 ರನ್ ಗಳಿಸಿದ್ದಾರೆ. ಐಸಿಸಿ ಟೂರ್ನಿಯ ವೇಳೆ ಕಾಮೆಂಟ್ರಿಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
sorry to disappoint!! https://t.co/d7auT4ciD3 pic.twitter.com/LHX74WRGKI
— parthiv patel (@parthiv9) May 1, 2026
ಪಾರ್ಥಿವ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಈಗ ಸ್ಥಗಿತಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಡೆಕ್ಕನ್ ಚಾರ್ಜರ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ.
ಪ್ರಸ್ತುತ, ಪಾರ್ಥಿವ್ ಐಪಿಎಲ್ 2026 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶುಭಮನ್ ಗಿಲ್ ನಾಯಕತ್ವದಲ್ಲಿ, ಜಿಟಿ ತಮ್ಮ ಮೊದಲ ಒಂಬತ್ತು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದ್ದಾರೆ, ಗುರುವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅವರ ಇತ್ತೀಚಿನ ಗೆಲುವು ದಾಖಲಾಗಿದೆ.