ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ 3rd T20I: ಪವರ್‌ಪ್ಲೇನಲ್ಲಿ 118 ರನ್‌ ಬಾರಿಸಿ ವಿಶ್ವ ದಾಖಲೆ ಬರೆದ ಟೀಮ್‌ ಇಂಡಿಯಾ!

ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿತು. ಕೇವಲ ಐದು ಓವರ್‌ಗಳಲ್ಲಿ 100 ರನ್ ಗಳಿಸಿದ ಟೀಮ್ ಇಂಡಿಯಾ, ನಂತರ ಪವರ್‌ಪ್ಲೇನಲ್ಲಿ 118 ರನ್‌ ಬಾರಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಬರೆದಿದೆ.

ಪವರ್‌ಪ್ಲೇನಲ್ಲಿ 118 ರನ್‌ ಬಾರಿಸಿ ವಿಶ್ವ ದಾಖಲೆ ಬರೆದ ಭಾರತ!

ಪವರ್‌ಪ್ಲೇನಲ್ಲಿ 118 ರನ್‌ ಬಾರಿಸಿ ವಿಶ್ವ ದಾಖಲೆ ಬರೆದ ಟೀಮ್‌ ಇಂಡಿಯಾ! -

Profile
Ramesh Kote Oct 27, 2026 3:29 PM

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ (IND vs NZ) ಭಾರತ ತಂಡ ದಾಖಲೆಗಳ ಮಳೆ ಸುರಿಸಿದೆ. ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ಅಕ್ಟೋಬರ್ 27ರಂದು ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್ ತಂಡ ಭಾರತಕ್ಕೆ 198 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ (Abhishek Sharma) ಹಾಗೂ ವೈಭವ್ ಸೂರ್ಯವಂಶಿ (Vaibhav Sooryavanshi) ಸ್ಫೋಟಕ ಆರಂಭ ಒದಗಿಸಿದರು. ಈ ಜೋಡಿ ಪವರ್‌ಪ್ಲೇನಲ್ಲಿ 118 ರನ್‌ ಗಳಿಸಿತು. ಇವರ ದೊಡ್ಡ ಜೊತೆಯಾಟದ ಬಲದಿಂದ ಭಾರತ ತಂಡ ವಿಶ್ವ ದಾಖಲೆಯನ್ನು ಬರೆದಿದೆ.

ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್ ಸಿಡಿಸಿದರು. ಇವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಕೇವಲ 5 ಓವರ್‌ಗಳಲ್ಲೇ 100 ರನ್ ಪೂರೈಸಿತು. ಈ ಮೂಲಕ 2021ರಲ್ಲಿ ಸರ್ಬಿಯಾ ವಿರುದ್ಧ ರೊಮೇನಿಯಾ ತಂಡ 5.2 ಓವರ್‌ಗಳಲ್ಲಿ 100 ರನ್ ಗಳಿಸಿದ್ದ ದಾಖಲೆಯನ್ನು ಭಾರತ ಮುರಿಯಿತು.

IND vs NZ: ಆರಂಭಿಕ ಪಂದ್ಯಗಳಲ್ಲಿ ಭುವನೇಶ್ವರ್‌ ಕುಮಾರ್‌ ವೈಫಲ್ಯಕ್ಕೆ ಕಾರಣವೇನು? ಮೊರ್ನೆ ಮಾರ್ಕೆಲ್‌ ಹೇಳಿದ್ದಿದು!

ವಿಶ್ವ ದಾಖಲೆಯನ್ನು ಬರೆದ ಟೀಮ್‌ ಇಂಡಿಯಾ

ಇಷ್ಟಕ್ಕೇ ನಿಲ್ಲದ ಭಾರತದ ಅಬ್ಬರ ಪವರ್‌ಪ್ಲೇನಲ್ಲೂ ಮುಂದುವರಿಯಿತು. ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 118 ರನ್ ಗಳಿಸಿದ ಭಾರತ, ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಆರು ಓವರ್‌ಗಳಲ್ಲಿ ದಾಖಲಾದ ಅತ್ಯಧಿಕ ಮೊತ್ತದ ದಾಖಲೆಯನ್ನು ಬರೆಯಿತು. 2021ರಲ್ಲಿ ಸರ್ಬಿಯಾ ವಿರುದ್ಧ ರೊಮೇನಿಯಾ ಗಳಿಸಿದ್ದ 116 ರನ್‌ಗಳ ದಾಖಲೆಯನ್ನು ಭಾರತ ಹಿಂದಿಕ್ಕಿತು. ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟ ಭಾರತದ ರನ್ ಚೇಸ್‌ಗೆ ಭರ್ಜರಿ ವೇಗ ನೀಡಿತು.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 100 ರನ್ ಗಳಿಸಿದ ತಂಡಗಳು

5 ಓವರ್‌ಗಳು – ಭಾರತ vs ನ್ಯೂಜಿಲೆಂಡ್, ವೆಲ್ಲಿಂಗ್ಟನ್, 2026

5.2 ಓವರ್‌ಗಳು – ರೊಮೇನಿಯಾ vs ಸರ್ಬಿಯಾ, ಸೋಫಿಯಾ, 2021

5.3 ಓವರ್‌ಗಳು – ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, ಸೆಂಚುರಿಯನ್, 2023

5.3 ಓವರ್‌ಗಳು – ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್, ಎಡಿನ್‌ಬರ್ಗ್, 2024

5.5 ಓವರ್‌ಗಳು – ಜಿಂಬಾಬ್ವೆ vs ಗ್ಯಾಂಬಿಯಾ, ನೈರೋಬಿ, 2024

5.5 ಓವರ್‌ಗಳು – ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಓಲ್ಡ್ ಟ್ರಾಫರ್ಡ್, 2025



ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಪವರ್‌ಪ್ಲೇನಲ್ಲಿ ದಾಖಲಾದ ಗರಿಷ್ಠ ಮೊತ್ತಗಳು

118/0 – ಭಾರತ vs ನ್ಯೂಜಿಲೆಂಡ್, ವೆಲ್ಲಿಂಗ್ಟನ್, 2026

116/0 – ರೊಮೇನಿಯಾ vs ಸರ್ಬಿಯಾ, ಸೋಫಿಯಾ, 2021 (5.4 ಓವರ್‌ಗಳು)

113/1 – ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್, ಎಡಿನ್‌ಬರ್ಗ್, 2024

103/1 – ಜಿಂಬಾಬ್ವೆ vs ಗ್ಯಾಂಬಿಯಾ, ನೈರೋಬಿ, 2024

102/0 – ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, ಸೆಂಚುರಿಯನ್, 2023

100/0 – ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಓಲ್ಡ್ ಟ್ರಾಫರ್ಡ್, 2025

100/0 – ಭಾರತ vs ಅಫ್ಘಾನಿಸ್ತಾನ, ದೆಹಲಿ, 2026