GT vs MI: ಸಾಯಿ ಕಿಶೋರ್ ಓವರ್ನಲ್ಲಿ 26 ರನ್ ಸಿಡಿಸಿದ ಜಾನಿ ಬೈರ್ಸ್ಟೋವ್!
ಗುಜರಾತ್ ಟೈಟನ್ಸ್ ವಿರುದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಜಾನಿ ಬೈರ್ಸ್ಟೋವ್ ಪವರ್ಪ್ಲೇನಲ್ಲಿ ಮಿಂಚಿದ್ದರರು. ಅವರು ಆಡಿದ್ದ 22 ಎಸೆತಗಳಲ್ಲಿ 47 ರನ್ಗಳನ್ನು ಬಾರಿಸಿದ್ದರು. ಅವರು ಪಂದ್ಯದ ನಾಲ್ಕನೇ ಓವರ್ನಲ್ಲಿ ಪ್ರಸಿಧ್ ಕೃಷ್ಣಗೆ 26 ರನ್ಗಳನ್ನು ಬಾರಿಸಿದ್ದರು.

ಸಾಯಿ ಕಿಶೋರ್ರ ಏಕೈಕ ಓವರ್ನಲ್ಲಿ 26 ರನ್ ಗಳಿಸಿದ ಜಾನಿ ಬೈರ್ಸ್ಟೋವ್.

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುತ್ತಿರುವ ಜಾನಿ ಬೈರ್ಸ್ಟೋವ್ (Jonny Bairstow) ಮುಂಬೈ ಇಂಡಿಯನ್ಸ್ (MI) ಪರ ಅದ್ಭುತ ಪ್ರದರ್ಶನ ತೋರಿದರು. ಗುಜರಾತ್ ಟೈಟನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಬೈರ್ಸ್ಟೋವ್, ವೇಗಿ ಪ್ರಸಿಧ್ ಕೃಷ್ಣ ಅವರ ಏಕೈಕ ಓವರ್ನಲ್ಲಿ 26 ರನ್ ಸಿಡಿಸಿದರು. ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಬೌಂಡರಿ ಮತ್ತು ಸಿಕ್ಸರ್ಗಳ ಮಳೆ ಸುರಿಸಿದರು. ಕನ್ನಡಿಗ ಪ್ರಸಿಧ್ ಕೃಷ್ಣ ಅವರ ಈ ಓವರ್ನಲ್ಲಿ ಬೈರ್ಸ್ಟೋವ್ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು. ಅವರ ಚುರುಕಾದ ಬ್ಯಾಟಿಂಗ್ನಿಂದ, ಮುಂಬೈ ಇಂಡಿಯನ್ಸ್ ನಾಲ್ಕನೇ ಓವರ್ನಲ್ಲಿಯೇ 50 ರನ್ಗಳ ಗಡಿಯನ್ನು ದಾಟಿತು.
ವಿಲ್ ಜ್ಯಾಕ್ಸ್ ಅವರ ಬದಲು ಮುಂಬೈ ಇಂಡಿಯನ್ಸ್ಗೆ ಬಂದಿದ್ದ ಇಂಗ್ಲೆಂಡ್ ಆಟಗಾರ ಜಾನಿ ಬೈರ್ಸ್ಟೋವ್, ಪ್ರಥಮ ಇನಿಂಗ್ಸ್ನ ನಾಲ್ಕನೇ ಓವರ್ ಬೌಲ್ ಮಾಡಲು ಬಂದ ಪ್ರಸಿದ್ಧ್ ಕೃಷ್ಣ ವಿರುದ್ಧ ಮೊದಲ ಎಸೆತದಲ್ಲಿ ಸಿಕ್ಸರ್ನೊಂದಿಗೆ ಪ್ರಾರಂಭಿಸಿದರು. ನಂತರ ಎರಡನೇ ಎಸೆತದಲ್ಲಿ ಅವರು, ಪ್ರಸಿಧ್ಗೆ ಬೌಂಡರಿ ಬಾರಿಸಿದರು. ಆದಾಗ್ಯೂ, ಅವರು ಮೂರನೇ ಎಸೆತದಲ್ಲಿ ಎಡ್ಜ್ ಮಾಡಿದ್ದರು ಹಾಗೂ ಇದರಲ್ಲಿ ಅವರು ಫೀಲ್ಡರ್ ಬಳಿ ಚೆಂಡು ಹೋಗದ ಕಾರಣ ಬಚಾವ್ ಆದರು. ಮೂರು ಹಾಗೂ ನಾಲ್ಕನೇ ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸಿದ ಬಳಿಕ ಅವರು ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿದ್ದರು. ಆ ಮೂಲಕ ಪ್ರಸಿಧ್ ಕೃಷ್ಣ ಅವರ ಓವರ್ನಲ್ಲಿ ಜಾನಿ ಬೈರ್ಸ್ಟೋವ್ ಒಟ್ಟು 26 ರನ್ಗಳನ್ನು ಬಾರಿಸಿದ್ದರು.
IPL 2025: ʻಈ ಒಂದು ಕಾರಣದಿಂದಲೇ ವಿರಾಟ್ ಕೊಹ್ಲಿಯ ಮೇಲೆ ನನಗೆ ಗೌರವ ಜಾಸ್ತಿʼ: ಎಬಿಡಿ!
ಅರ್ಧಶತಕ ವಂಚಿತ ಜಾನಿ ಬೈರ್ಸ್ಟೋವ್
ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಜಾನಿ ಬೈರ್ಸ್ಟೋವ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ವಿಶೇಷವಾಗಿ ಪವರ್ಪ್ಲೇನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಗುಜರಾತ್ ಟೈಟನ್ಸ್ ಬೌಲರ್ಗಳಿಗೆ ಬೆವರಿಳಿಸಿದರು. ಆದರೆ ಸ್ಪಿನ್ನರ್ ಸಾಯಿ ಕಿಶೋರ್ ಬಂದ ತಕ್ಷಣ ಬೈರ್ಸ್ಟೋವ್ ಸ್ವಲ್ಪ ಒತ್ತಡಕ್ಕೆ ಸಿಲುಕುವಂತೆ ಕಂಡರು. ಸಾಯಿ ಕಿಶೋರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಜಾನಿ ಬೈರ್ಸ್ಟೋವ್ ತಮ್ಮ ವಿಕೆಟ್ ಕಳೆದುಕೊಂಡರು. ಆ ಮೂಲಕ ಕೇವಲ ರನ್ಗಳ ಅಂತರದಲ್ಲಿ ಅರ್ಧಶತಕವನ್ನು ಕಳೆದುಕೊಂಡರು.
IPL 2025: ʻಆರ್ಸಿಬಿ ಈ ಸಲ ಕಪ್ ಗೆಲ್ಲುವುದು ಪಕ್ಕಾʼ-ಶೇನ್ ವ್ಯಾಟ್ಸನ್ ಭವಿಷ್ಯ ನಿಜವಾಗುತ್ತಾ?
ಮುಂಬೈ ಇಂಡಿಯನ್ಸ್ ಪರ ಜಾನಿ ಬೈರ್ಸ್ಟೋವ್ 22 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು. ಅವರ ಇನಿಂಗ್ಸ್ನಲ್ಲಿ ಅವರು 3 ಸಿಕ್ಸರ್ಗಳು ಮತ್ತು 4 ಬೌಂಡರಿಗಳನ್ನು ಸಹ ಬಾರಿಸಿದರು. ಔಟಾಗುವ ಮುನ್ನ ಬೈರ್ಸ್ಟೋವ್, ರೋಹಿತ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್ಗೆ 84 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು. ವಿಲ್ ಜಾಕ್ಸ್ ಬದಲಿಗೆ ಜಾನಿ ಬೈರ್ಸ್ಟೋವ್ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಮೊದಲ ಪಂದ್ಯದಲ್ಲಿಯೇ ಮುಂಬೈ ಪರ ಅದ್ಭುತ ಇನಿಂಗ್ಸ್ ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.