'ಮುಂಬೈ ಇಂಡಿಯನ್ಸ್ ಸಹವಾಸ ಸಾಕಪ್ಪ': ದೊಡ್ಡ ನಿರ್ಧಾರ ತೆಗೆದುಕೊಂಡ ಹಾರ್ದಿಕ್ ಪಾಂಡ್ಯ!
Hardik Pamndya set to leave MI: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸತತ ವೈಫಲ್ಯಕ್ಕೆ ಬೇಸತ ನಾಯಕ ಹಾರ್ದಿಕ್ ಪಾಂಡ್ಯ ದೊಡ್ಡು ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಅವರು ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ.
ಮುಂಬೈ ಇಂಡಿಯನ್ಸ್ ತೊರೆಯಲು ಹಾರ್ದಿಕ್ ಪಾಂಡ್ಯ ನಿರ್ಧಾರ. -
ನವದೆಹಲಿ: ಮುಂಬೈ ಇಂಡಿಯನ್ಸ್ ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ ಕಾರಣ ಹಾರ್ದಿಕ್ ಪಾಂಡ್ಯ (Hardik Pandya) ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅವರು ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ತೊರೆಯುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆಂದು ವರದಿಯಾಗಿದೆ. ಈ ವಿಷಯವನ್ನು ಅವರು ಟೂರ್ನಿಯ ಮಧ್ಯದಲ್ಲಿಯೇ ಮುಂಬೈ ಫ್ರಾಂಚೈಸಿ ಬಳಿ ಮಾತನಾಡಿದ್ದಾರೆಂದು ಮೂಲಗಳು ತಿಳಿಸಿರುವುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
2024ರ ಐಪಿಎಲ್ ಟೂರ್ನಿಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಫ್ರಾಂಚೈಸಿ, ಗುಜರಾತ್ ಟೈಟನ್ಸ್‌ನಿಂದ ಟ್ರೇಡ್ ಡೀಲ್ ಮೂಲಕ ತಮ್ಮ ಹಳೆಯ ತಂಡಕ್ಕೆ ಮರಳಿದ್ದರು. ಆ ಮೂಲಕ ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ಶರ್ಮಾ ಸ್ಥಾನವನ್ನು ತುಂಬಿದ್ದರು. ಆದರೆ, ಇದೀಗ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಮುಂಬೈ ಇಂಡಿಯನ್ಸ್ ಅನ್ನು ತೊರೆಯುವ ಬಗ್ಗೆ ಈಗಾಗಲೇ ಟೀಮ್ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ.
ʻರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಿರಿʼ: ಯಶಸ್ವಿ ಜೈಸ್ವಾಲ್‌ಗೆ ಅಂಬಾಟಿ ರಾಯುಡು ಸಲಹೆ!
ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಬೆನ್ನಲ್ಲೆ ಹಾರ್ದಿಕ್ ಪಾಂಡ್ಯ ಹಾಗೂ ಮುಂಬೈ ಟೀಮ್ ಮ್ಯಾನೇಜ್‌ಮೆಂಟ್ ಬೇರೆಯಾಗುವ ಬಗ್ಗೆ ಪರಸ್ಪರ ಒಮ್ಮತಕ್ಕೆ ಬಂದಿವೆ. ಈ ಬಗ್ಗೆ ಐಪಿಎಲ್ ಮೂಲಗಳು ಮಾಹಿತಿ ನೀಡಿರುವುದನ್ನು ಪಿಟಿಐ ವರದಿ ಮಾಡಿದೆ.
“ಹಾರ್ದಿಕ್ ಪಾಂಡ್ಯ ಮಾನಸಿಕವಾಗಿ ತುಂಬಾ ಒತ್ತಡದಲ್ಲಿದ್ದರು ಮತ್ತು ಸಂಪೂರ್ಣವಾಗಿ ದಣಿದಿದ್ದರು. ಜೊತೆಗೆ ಅವರಿಗೆ ಬೆನ್ನು ನೋವಿನ ಗಾಯ ಸಾಕಷ್ಟು ಕಾಟ ಕೊಟ್ಟಿದೆ. ವಾಸ್ತವ ಏನೆಂದರೆ, ಪ್ಲೇಆಫ್ಸ್ ಅವಕಾಶಗಳು ಕೈ ತಪ್ಪಿದ ಬಳಿಕ ಮುಂಬೈ ಟೀಮ್ ಮ್ಯಾನೇಜ್‌ಮೆಂಟ್‌ಗೆ ತಾವು ತಂಡವನ್ನು ತೊರೆಯುವ ಬಗ್ಗೆ ಹಾರ್ದಿಕ್ ತಿಳಿಸಿದ್ದರು," ಎಂದು ಹೆಸರು ಬಹಿರಂಗಪಡಿಸದ ಐಪಿಎಲ್ ಮೂಲವೊಂದು ಪಿಟಿಐಗೆ ತಿಳಿಸಿದೆ.
GT vs RR; ಇಂದಿನ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?
“ಹಾರ್ದಿಕ್ ಅವರಿಗೆ ಇನ್ನೂ ಕೇವಲ 32 ವರ್ಷ ವಯಸ್ಸು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರು 2024ರಲ್ಲಿ 30ನೇ ವಯಸ್ಸಿನಲ್ಲಿ ಎಂಐಗೆ ಮರಳಿದ್ದರು. ಮೊದಲ ಸೀಸನ್‌ನಲ್ಲೇ ಅವರಿಗೆ ಅಭಿಮಾನಿಗಳಿಂದ ಟೀಕೆ ಎದುರಾಯಿತು. ಈ ಸೀಸನ್‌ನಲ್ಲೂ ಪರಿಸ್ಥಿತಿಗಳು ಯೋಜನೆಯಂತೆ ಸಾಗಲಿಲ್ಲ,” ಎಂದು ಆ ಮೂಲವು ಹೇಳಿದೆ. ಇದು ಭಾರೀ ಜನಪ್ರಿಯತೆ ಹೊಂದಿದ್ದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಬದಲಾಯಿಸಿದ ನಿರ್ಧಾರಕ್ಕೆ ಸಂಬಂಧಿಸಿದ್ದಾಗಿದೆ.
ಕಳೆದ ಎರಡು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಪದೇ-ಪದೆ ಹಾರ್ದಿಕ್ ಪಾಂಡ್ಯರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಆ ಟೀಕೆಗಳಿಂದ ಅವರು ಸ್ಪಷ್ಟವಾಗಿ ಹಿನ್ನಡೆ ಅನುಭವಿಸಿದ್ದರು. “ಇದು ಕಷ್ಟಕರವಾದರೂ ಮನರಂಜನಾತ್ಮಕ ಪಯಣವಾಗಿತ್ತು,” ಎಂದು ಹೇಳಿದ್ದಾರೆ.
ಇಂದಿನ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್-ರಾಜಸ್ಥಾನ್ ಆಟಗಾರರ ಮುಂದಿರುವ ದಾಖಲೆಗಳಿವು
2024ರಲ್ಲಿ ಮುಂಬೈ ಡ್ರೆಸ್ಸಿಂಗ್ ರೂಂ ಬದಲಾಗಿತ್ತು
"ಯುವ ಆಟಗಾರನಾಗಿ ಎಲ್ಲವನ್ನೂ ಹೇಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕಳೆದ ಮೂರು ವರ್ಷಗಳು ಇವರಿಗೆ ಸುಲಭವಾಗಿರಲಿಲ್ಲ. 2021ರಲ್ಲಿ ಬಿಟ್ಟು ಹೊಗಿದ್ದ ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ ರೂಂ, 2024ರಲ್ಲಿ ಮರಳಿದ ಬಳಿಕ ಅದೇ ರೀತಿ ಇರಲಿಲ್ಲ. ಎಲ್ಲಾ ಹಿರಿಯ ಆಟಗಾರರು ಅದೇ ರೀತಿ ಇರಲಿಲ್ಲ."
"ಭಿನ್ನಾಭಿಪ್ರಾಯಗಳಿದ್ದರೂ ಫಲಿತಾಂಶಗಳು ಬಂದರೆ ನಿರಾಸೆ ಆಗುವುದಿಲ್ಲ. ಆದರೆ ಪ್ರತಿಯೊಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ಎಳೆಯಲು ಆರಂಭಿಸಿದಾಗ, ಒಂದು ಹಂತದ ಬಳಿಕ ಮುಂದುವರಿಯಲು ಬೇಕಾದ ಮಾನಸಿಕ ಶಕ್ತಿ ಉಳಿಯುವುದಿಲ್ಲ. ಅದಕ್ಕಾಗಿ ಹಾರ್ದಿಕ್ ಅವರು ಸೀಸನ್ ಮಧ್ಯದಲ್ಲೇ ಮುಂದಿನ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವುದಿಲ್ಲ ಎಂದು ನಿರ್ಧರಿಸಿದ್ದರು,” ಎಂದು ಮೂಲವು ಮತ್ತಷ್ಟು ವಿವರಿಸಿದೆ.