ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಶುಭಮನ್‌ ಗಿಲ್‌ಗಾಗಿ ಐವರು ಆಟಗಾರರ ವೃತ್ತಿ ಜೀವನ ಅಂತ್ಯʼ: ಗೌತಮ್‌ ಗಂಭೀರ್‌ ವಿರುದ್ಧ ಫ್ಯಾನ್ಸ್‌ ಕಿಡಿ!

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ಕೇವಲ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಭಾರತ ತಂಡದ ಉಪ ನಾಯಕ ಶುಭಮನ್‌ ಗಿಲ್‌ ವಿರುದ್ಧ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಗಿಲ್‌, ಕೇವಕ 4 ರನ್‌ ಗಳಿಸಿ ಲುಂಗಿ ಎನ್ಗಿಡಿಗೆ ವಿಕೆಟ್‌ ಒಪ್ಪಿಸಿದರು.

4 ರನ್‌ ಗಳಿಸಿ ಔಟಾದ ಶುಭಮನ್‌ ಗಿಲ್‌ ವಿರುದ್ಧ ಫ್ಯಾನ್ಸ್‌ ಗರಂ!

ಶುಭಮನ್‌ ಗಿಲ್‌ ವಿರುದ್ಧ ಅಭಿಮಾನಿಗಳು ಆಕ್ರೋಶ. -

Profile
Ramesh Kote Dec 9, 2025 8:54 PM

ಕಟಕ್‌: ಭಾರತ ತಂಡದ ಉಪ ನಾಯಕ ಶುಭಮನ್‌ ಗಿಲ್‌ (Shubman Gill) ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಫಾರ್ಮ್‌ಗೆ ಮರಳುವಂತೆ ಕಾಣುತ್ತಿಲ್ಲ. ಆಸ್ಟ್ರೇಲಿಯಾ ವಿರುದ್ದದ ಟಿ20ಐ ಸರಣಿಯಲ್ಲಿ ವಿಫಲರಾಗಿದ್ದ ಅವರು,ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿಯೂ (IND vs SA) ಕೈ ಕೊಟ್ಟಿದ್ದಾರೆ. ಮಂಗಳವಾರ ಬಾರಬತಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತದ ಪರ ಇನಿಂಗ್ಸ್‌ ಆರಂಭಿಸಿದ ಗಿಲ್‌, ಕೇವಲ ನಾಲ್ಕು ರನ್‌ ಗಳಿಸಿದ ಬಳಿಕ ಲುಂಗಿ ಎನ್ಗಿಡಿಗೆ (Lungi Ngidi) ವಿಕೆಟ್‌ ಒಪ್ಪಿಸಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಟೀಕೆಗೆ ಗುರಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತಾ ಟೆಸ್ಟ್‌ ಪಂದ್ಯದ ವೇಳೆ ಕುತ್ತಿಗೆ ಗಾಯದಿಂದಾಗಿ ಭಾರತ ತಂಡದಿಂದ ಹೊರ ನಡೆದಿದ್ದ ಶುಭಮನ್‌ ಗಿಲ್‌, ಸುಮಾರು ಒಂದು ತಿಂಗಳು ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಹಾಗಾಗಿ, ಇದೇ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿರಲಿಲ್ಲ. ಇವರ ಅನುಪಸ್ಥಿತಿಯಲ್ಲಿ ಕೆಎಲ್‌ ರಾಹುಲ್‌ ಭಾರತ ತಂಡವನ್ನು ಮುನ್ನಡೆಸಿದ್ದರು. ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ಬಲದಿಂದ ಟೀಮ್‌ ಇಂಡಿಯಾ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದಿತ್ತು.

IND vs SA 1st T20I: ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌, ಸಂಜು ಸ್ಯಾಮ್ಸನ್‌ ಔಟ್‌!

ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯ ಯೋಜನೆಯಲ್ಲಿರುವ ಶುಭಮನ್‌ ಗಿಲ್‌, ಗಾಯದಿಂದ ಗುಣಮುಖರಾದ ಬಳಿಕ ಟಿ20ಐ ಸರಣಿಯಲ್ಲಿ ಅವಕಾಶವನ್ನು ನೀಡಲಾಯಿತು. ಅದರಂತೆ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಅವರು ಎರಡು ಎಸೆತಗಳಲ್ಲಿ ಒಂದು ಬೌಂಡರಿ ಗಳಿಸಿದ ಬಳಿಕ ವಿಕೆಟ್‌ ಒಪ್ಪಿಸಿದರು. ಮೊದಲನೇ ಓವರ್‌ನ ಮೂರನೇ ಎಸೆತದಲ್ಲಿ ಲುಂಗಿ ಎನ್ಗಿಡಿಗೆ ಹೊಡೆಯಲು ಪ್ರಯತ್ನಿಸಿ ಮಾರ್ಕೊ ಯೆನ್ಸನ್‌ಗೆ ಕ್ಯಾಚ್‌ ಕೊಟ್ಟರು. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ತಮ್ಮ ವೈಫಲ್ಯವನ್ನು ಮುಂದುವರಿಸಿದ್ದಾರೆ.





ಶುಭಮನ್‌ ಗಿಲ್‌ ವಿರುದ್ಧ ಫ್ಯಾನ್ಸ್‌ ಕಿಡಿ

ಟಿ20ಐ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಶುಭಮನ್‌ ಗಿಲ್‌ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಒಡಿಐ ತಂಡದಲ್ಲಿ ಇಶಾನ್‌ ಕಿಶನ್‌ ಅವರ ವೃತ್ತಿ ಜೀವನ, ಟಿ20ಐ ತಂಡದಲ್ಲಿ ಜೈಸ್ವಾಲ್‌ ವೃತ್ತಿ ಜೀವನ, ಟೆಸ್ಟ್‌ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಮೂಲಕ ವಿರಾಟ್‌ ಕೊಹ್ಲಿಯ ವೃತ್ತಿ ಜೀವನ, ಒಡಿಐ ತಂಡದಲ್ಲಿ ರೋಹಿತ್‌ ಶರ್ಮಾ ಅವರ ನಾಯಕತ್ವದ ವೃತ್ತಿ ಬದುಕು ಹಾಗೂ ಟಿ20ಐ ತಂಡದಲ್ಲಿ ಸಂಜು ಸ್ಯಾಮ್ಸನ್‌ ಅವರ ಆರಭಿಕ ಸ್ಥಾನಕ ವೃತ್ತಿ ಜೀವನವನ್ನು ಗಿಲ್‌ ಮುಗಿಸಿದ್ದಾರೆ," ಎಂದು ಅಭಿಮಾನಿಯೊಬ್ಬರು ಟೀಕಿಸಿದ್ದಾರೆ.





"ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್‌ ಗಾಯಕ್ವಾಡ್ ಸೇರಿ ಮೂವರು ಆರಂಭಿಕರಿಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ. ಏಕೆಂದರೆ ಶುಭಮನ್‌ ಗಿಲ್, ಹೆಡ್‌ ಕೋಚ್‌ ಗೌತಮ್ ಗಂಭೀರ್ ಅವರ ನೆಚ್ಚಿನ ಆಟಗಾರ. ಈ ಕಾರಣ ಅವರು ಆಡಲೇಬೇಕು!!" ಎಂದು ಮತ್ತೊಂದು ಅಭಿಮಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.